ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖಾಸುಮ್ಮನೆ ನಗುವ ಮನಸ್ಸು..

Last Updated 9 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಗೆಳೆಯಾ, ಸದ್ದಿಲ್ಲದೆ ಸರಿದುಹೋಗುತಿಹ ಪ್ರತಿ ಸಮಯದೊಳಗೂ ನಿನ್ನದೇ ನೆನಪಿನ ಕನವರಿಕೆಯ ಚಿಲಿಪಿಲಿ. ಮಗ್ಗುಲಾಗಿ ಮಲಗುವ ಮನಸು ಸುಖಾಸುಮ್ಮನೆ ಅರಳಿ ನಗುತ್ತದೆ. ನಿನ್ನ ನೆನಪಿಗೆ ಮಾಸದ ರಂಗಿನಿಂದ ಮಾಯದ ಬಣ್ಣ ಬರೆದು ನಲಿಯುತ್ತದೆ.

ನಿನ್ನ ನೆನೆವಾಗಲೆಲ್ಲ ಕೆನ್ನೆಗಳ ಮೇಲೆ ಜಿನುಗೋ ನಾಚಿಕೆಯ ಸೋನೆಹನಿಗಳ ಸಾಲು, ಎದೆಯೊಳಗೆ ಅರಿಯದ ಕಂಪನಗಳ ಮಾತಿಲ್ಲದ ಮೌನ.! ನಿನ್ನ ಕಣ್ಣಿಗೆ ಕಣ್ಣ ಸೇರಿಸಲಾಗದ ನೆಲವ ಅಳೆವ ಕಣ್ರೆಪ್ಪೆಗಳಲ್ಲೂ ಮಿಂಚುವ ಬೆಳಕು.... ನೆಲವತಬ್ಬಿ ಚಿತ್ತಾರ ಬಿಡಿಸೊ ಕಾಲ್ಬೆರಳಿನಲ್ಲೂ ಹೊಸತನದ ಥಳುಕು....

ತಂಗಾಳಿಯೊಂದಿಗೆ ಮಾತಾಡೋ ಆ ತಂಬೆಲರಿನಲ್ಲೂ ನಿನ್ನದೇ ಅಲುಗಾಟ, ಹುಲ್ಲನಪ್ಪಿ ಮುತ್ತಿಟ್ಟ ಹಿಮಬಿಂದುವಿನಲ್ಲೂ ನಿನ್ನದೇ ಒನಪಿನ ಮಾಟ.... ಸದ್ದಿಲ್ಲದೇ ಸದ್ದು ಮಾಡಿದ ನಿನಗ್ಯಾವ ಹೆಸರಿಡಲೋ ನಾ ಕಾಣೆ..... ಭಾವಾನುಬಂಧದೊಳಗೂ ನಿನ್ನನ್ನೇ ನೆನೆವ ಸತ್ಯಕ್ಕೆ ಸಾಕ್ಷಿ ನಾನೇ.... ನಾನೇ..... ನಾನೇ....
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT