ದೊಡ್ಡ ಬಸವನಗುಡಿ ಬೀದಿಯ ಕಹಳೆಬಂಡೆ (ಅಪ್ಪಟ ಕನ್ನಡದಲ್ಲಿ ಬ್ಯೂಗಲ್‌ರಾಕ್) ಮೇಲೊಂದು ದೆವ್ವ, ಅದು ಮೇಲೋ, ಫೀಮೇಲೋ ನಸುಕಿನಲ್ಲಿ ಕಾಣದು. ಇಳಿದು ಬರಲೆಂದು ಕಾದು ನಿಂತಲ್ಲೆ ನಿಂತೆ. ಟ್ರಾಫಿಕ್ ಜಾಮ್‌ಗೆ ಸಿಕ್ಕ ಮೆಟ್ರೊ ಟಿಪ್ಪರ್‌ನಂತೆ ದೆವ್ವ ಇಂಚುಇಂಚಾಗಿ ಇಳಿದು ಬರುತ್ತಿತ್ತು. ಅನತಿ ದೂರದಲ್ಲಿ ಅದರ ದೈತ್ಯಾಕೃತಿ ಸ್ಪಷ್ಟವಾಗುತ್ತ ಬಂತು.

ಆರಡಿ ಎತ್ತರ ಮೂರೂವರೆ ಅಡಿ ಅಗಲ. ಕೈಯಲ್ಲೊಂದು ಊರುಗೋಲು. ಕರಿಕುರಿಯ ಬಣ್ಣದ ಉಣ್ಣೆಯ ಸೂಟು. ತಲೆಯ ಮೇಲೆ ಲಾರ್ಡ್‌ಲಿನ್‌ಲಿತ್‌ಗೋ ಕಾಲದ ಹ್ಯಾಟು. ಪಾರ್ಕಿನ ಒಂಟಿ ಕಾಗೆಯ ಕರ್‌ಕರ್ ನಿನಾದಕ್ಕೆ ಶ್ರುತಿಗೂಡಿಸುವ ಬೂಟು. ಕೆಳಗೆ ಅಂಟಿದ soleಗೆ soulಏ ಇಲ್ಲವೋ ಎಂಬಂಥ ನಿರ್ದಾಕ್ಷಿಣ್ಯವಾದ ಸಪ್ಪಳ.

ಕುಳಿರ್ಗಾಳಿಯಲ್ಲೂ ಕಣ್ಣಿಗೊಂದು ಕೂಲಿಂಗ್ ಗ್ಲಾಸ್, ಪೊದರು ಮೀಸೆ. ಇದು ದಿವಾನ್ ಪೂರ್ಣಯ್ಯನ ಕಾಲದ ಹುಳಿಮಾವಿನ ಮರ ಇರಬೇಕು. ಯಾಕೆಂದರೆ ದೆವ್ವದ ಕೊರಳಲ್ಲಿ ಐಟಂ ಸಾಂಗ್-ಡೋಂಚ್ಯುನಾ, ಡೋಂಚ್ಯುನಾ, ಐ ಆ್ಯಮ್ ವೆರಿ ಸೆಕ್ಸಿ~.

ಮುದುಕ ಯಾರಾದರೇನಂತೆ. ಮಾತಾಡಿದರೆ ಮುತ್ತುದುರೀತೆ? `ಶುಭೋದಯ ಸಾರ್! ಈ ವಯಸ್ಸಿನಲ್ಲಿ ಈ ಹಾಡು!- ಸಖತ್ ಸೆಕ್ಸಿ~ ಎಂದೆ. ಪೊದರು ಮೀಸೆ ನಕ್ಕಿತು. ನಕ್ಕ ರಭಸಕ್ಕೆ ಮುಗಿಲು ಪಟಾಪಂಕ್ಚರ್ ಆಗಬೇಕಿತ್ತು. ಅಂತಹ ಭೀಭತ್ಸ ನಗೆ!

`ಡೋಂಟ್ ಬಿ ಕಿಡ್ಡಿಂಗ್ ಮೈ ಡಿಯರ್ ಈಡಿಯಟ್. ಆಫ್ಟರ್‌ಆಲ್ ಸೆವೆಂಟಿಪ್ಲಸ್. ಅಂದಹಾಗೆ ನನ್ನ ಮೊಮ್ಮಗಳು ಕಲಿಸಿದ್ದು ಹಾಡು, ಯೂ ಲೈಕ್ಡ್ ಇಟ್~?
`ಲೈಕ್ ಮಾಡೋದೆ? ಇಟ್ಸ್ ಅ ಕ್ರಷ್, ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿದ್ದು ಆ ಹಾಡಿನಿಂದಲೆ ಸಾರ್! ಚೈತ್ರ ಹಾಡಿದ್ದು~.

`ಚೈತ್ರಾನೇ! ಗುಡ್ ಹೆವೆನ್ಸ್! ನನ್ನ ಮೊಮ್ಮಗಳ ಹೆಸರೂ ಅದೇನೇಯ. ಸಿಲ್ಲಿ ಗರ್ಲ್ ವೆಂಟಕರಮಣಸ್ವಾಮಿ ಸುಪ್ರಭಾತ ಕನ್ನಡದಲ್ಲಿ ಬರೆದುಕೊಟ್ಟು ಹಾಡೇ ಅಂದ್ರೆ `ಡೋಂಚ್ಯುನಾ, ಐ ಆ್ಯಮ್ ವೆರಿ ಸೆಕ್ಸಿ~ ಅನ್ಕಂಡೇ ಬೆಡ್ ಕಾಫಿ ಕುಡೀತಾಳೆ. ಜನರೇಷನ್ ಗ್ಯಾಪು. ಏನು ಮಾಡ್ತೀ~

`ಡೋಂಟ್‌ವರಿ, ನಾನು ಗ್ಯಾಪ್ ಫಿಲಪ್ ಮಾಡ್ತೀನಿ. ಎಲ್ಲಿ ಆ ಕನ್ನಡ ಸುಪ್ರಭಾತ ಕೊಡಿ. ಲೆಟ್ ಮಿ ಟ್ರಾನ್‌ಲೇಟ್ ಇಟ್ ಟು ಇಂಗ್ಲಿಷ್ ಅಂಡ್ ಪುಟ್ ಇಟ್ ಇನ್ ಮೈ ವೆಬ್‌ಸೈಟ್~
`ಕೊಡ್ತೀನಿ. ಬಟ್ ಆದರೆ ನೀನು, ಯೂ ವುಡ್ ತ್ರೋ ಮಿ ಎ ಪಾರ್ಟಿ~
`ಬಿಸಾಕ್ತೀನಿ ತೆಗೊಳ್ಳಿ. ಪಾರ್ಟಿಗೇನು. ಸ್ಪಾನ್ಸರರ್ಸ್ ಬೇಜಾನ್ ಅವ್ರೆ~
ದೆವ್ವ-`ಹಂಗಿದ್ರೆ ಬರ್ಕೊ~ ಎಂದು ಪೆನ್ನು, ಪ್ಯಾಡು ಮುಂದೊಡ್ಡಿತು.

ಕವಿ ಅಲ್ವೆ,ಏನಿದ್ರೂ, ಇಲ್ಲದಿದ್ದೂ ಪೆನ್ನು,ಪ್ಯಾಡಿಗೆ ಬರ ಇಲ್ಲ. ಕವಿ ಅಲ್ಲವೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ, ಕೈಗೆ ಪೆನ್ನು ಪ್ಯಾಡು ಬೇಕು,

`ನಿನ್ನ ದರುಶನಕೆಂದು ಅಡ್ವಾನ್ಸು ಬುಕ್ ಮಾಡಿ
ನೆನ್ನೆಯೇ ಬಂದಿಳಿದೆ ಕೇಳಯ್ಯ ತಂದೆ
ಹೋಟೆಲುಗಳಿಲ್ಲಿಲ್ಲ, ಲಾಡ್ಜಿನಲಿ ರೂಮಿಲ್ಲ
ಬೀದಿಯಲಿ ಬಿದ್ದಿಹೆನು ನೋಡಯ್ಯ ತಂದೆ
ರೈಲುಕೂಜವ ಹಿಡಿದು ಮೈಲುಗಟ್ಟಲೆ ದೂರ
ಐಲು ಫೈಲಾಗಿಹರು ಜೋಲು ಮೊಗ ಹೊತ್ತು
ಕಾಲುಕಾಲಿಂಚು ಜರುಗುತ್ತ ಸಾಗಿಹರು
ಕಾಲಸುತ್ತೆಲ್ಲ ಹುತ್ತಗಟ್ಟಿದೆ ಗೊತ್ತಾ,~

ಮುಂದೆ- `ಕಮಲಾಕುಚ ಚೂಚುಕ
ಕುಂಕುಮತೋ
ನಿಯತಾರುಣಿತಾತುಲನೀಲತನೋ~ಗೆ
ಸಮನಾಗಿ-ತಲೆ ಬೋಳಿಸಿಕೊಳ್ಳುತ ನಿಂದಿಹರೈ
ಮಲೆಯಪ್ಪನೆ ನಿನ್ನಯ ಬಕುತ ಜನರ್~
ಕೊಲೆಪಾತಕಿ ಕಳ್ಳ ಖದೀಮರಿಗೂ
ಭಲೆ! ವೆಂಕಟನಾಯಕ ನೀನೇ ಗುರು!~

ನಾನು ಕರೆಂಟು ಹೊಡೆದವನಂತೆ ಕಂಬೀಭೂತನಾದೆ `ಸುಪ್ರಭಾತ ಕನ್ನಡದಲ್ಲಿ ಬರೀತೀರಿ, ಮಕ್ಕಳ ತಲೆ ಮೇಲೆ ಹೇರ‌್ತೀರಿ. ನೀವು ಸೆಕ್ಸಿ ಹಾಡು ಹಾಡ್ತೀರಿ. ನ್ಯಾಯವೆ?~ ಎಂದು ದೆವ್ವವನ್ನು ಕೆಣಕಿದೆ, ಪರಂತು ದೆವ್ವ ಕವಿರಾಜ ಧೃತಿಗೆಡಲಿಲ್ಲ. ಕೂಲಿಂಗ್ ಗ್ಲಾಸ್ ಒಳಗೇ ಕಣ್ಣು ಮಿಟುಕಿಸುತ್ತ `ನಲವತ್ತರವರೆಗೆ ನಾಟಿ ಸಾಂಗ್ಸ್. ನಲವತ್ತರಿಂದ ಐವತ್ತರವರೆಗೆ ಬ್ಯೂಟಿ ಸಾಂಗ್ಸ್, ಆಮೇಲೆಲ್ಲ ಅಧ್ಯಾತ್ಮ!.

`ನೀವೇನಾಗಿದ್ರಿ ಸಾರ್? ಮೇಷ್ಟ್ರೆ, ಕವಿನೇ, ಫ್ರೀಲ್ಯಾನ್ಸರೇ~
`ಎಲ್ಲ ಆಗಿದ್ದೆ. ಆದರೆ ಈಗ ಮಾಜಿ!
‘speak good english’ ಶಾಲೆಗೆ ಸೇರಿ, ನೌಕರಿ ಸಿಗುತ್ತೆ ನಿಮ್ಮಂಥೋರಿಗೆ~
`ಮೊನ್ನೆ ಹೋಗಿದ್ದೆ. ಬಾಗಿಲ ಹತ್ತಿರ ನಿಂತೆ, ಅಲ್ಲಿ ಯಾರೋ ಒಬ್ಬರು ಬಿ-ಓ-ಯೂ ಎಲ್-ಇ-ವೀ-ಎ-ಆರ್-ಡಿ~ `ಬೂಲ್ವಾ~ನ ಬುಲೇವಾರ್ಡ್~ ಅಂತ ಹೇಳಿಕೊಡ್ತಿದ್ರು, ಸತ್ತನೈ ಷೇಕ್ಸ್‌ಪಿಯರ್ ಅಂತ ಹೊರಗೆ ಬಂದೆ.

ಅದೇ ಕ್ಷಣಕ್ಕೆ ಹಿಂಬಂದಿಯಿಂದ ಹೆಣ್ಣು ದೆವ್ವವೊಂದು ದನಿಗೂಡಿಸಿತು- `ಎಲ್ಲಿಗೂ ಬೇಡ; ಹಾಯಾಗಿ ಮನೇಲಿ ಇರಲಿ, ಅವರ ಮಕ್ಕಳೆಲ್ಲ ಬೀದಿಪಾಲು ಮಾಡಿ ಈಗ ವೃದ್ಧಾಶ್ರಮ ಸೇರಿದಾರೆ- ಅಂದಹಾಗೆ ನಾನು ವೆಂಕಟಸುಬ್ಬಿ ಅಂತ.

ರಿಟೈರ್ಡ್ ಹೈಸ್ಕೂಲ್ ಹೆಡ್‌ಮಿಸ್ಟ್ರೆಸ್, ರಿಟೈರ್ ಆದ ಮೇಲೆ ಡೈವೋರ್ಸ್ ತೆಗೊಂಡೆ. ಆಮೇಲೆ ವೃದ್ಧಾಶ್ರಮ ಇಲ್ಲೆ...ಆವಲಹಳ್ಳೀಲಿದೆ. ಅಲ್ಲಿ ಮ್ಯಾನೇಜರ್ ಆದೆ. ಆಗ್ತಿದ್ದ ಹಾಗೆ ನೂರೆಂಟು ಮದುವೆ ಪ್ರಪೋಸಲ್ಸ್ ಬಂದ್ವು. ಬೇಡ ಅಂತ ಇವರೊಟ್ಟಿಗೆ ಲಿವಿಂಗ್-ಇನ್- ಪಾರ್ಟನರ್ ಆಗಿದ್ದೀನಿ ಎಂದು ಗಂಡು ದೆವ್ವದ ಕಡೆ ಬೆಟ್ಟು ಮಾಡಿತು, ಇವಳಿಗಾಗಿಯೇ ಹುಟ್ಟಿತೇ `ಊರಿಗೊಬ್ಳೆ ಪದ್ಮಾವತಿ~ ಗಾದೆ?

`ಬೈದವೇ, ಐ ಆಮ್ ವೆಂಕಟಶಿವರೆಡ್ಡಿ, ರಿಟೈರ್ಡ್ ಕನ್ನಡ ಪಂಡಿತ್~ ಅಂದಿತು ಆ ಪುರುಷಾಮೃಗ-ಅಲ್ಲ ಆ ಪುರುಷ ಸರಸ್ವತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.