ಜಪಾನ್ನ ಫುಕುಶಿಮಾದ ಪರಮಾಣು ಸ್ಥಾವರದಲ್ಲಿ ಸಂಭವಿಸಿದ ದುರಂತದ ಬಳಿಕ ವಿಶ್ವದ ಹಲವು ರಾಷ್ಟ್ರಗಳು ಪರಮಾಣು ಶಕ್ತಿ ಉತ್ಪಾದನೆಯಿಂದ ದೂರ ಉಳಿಯುವ ಆಲೋಚನೆ ಮಾಡುತ್ತಿವೆ. ಒಂದು ದೇಶವಂತೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಮಾಣು ಸ್ಥಾವರಗಳನ್ನು ಸ್ಥಗಿತಗೊಳಿಸುತ್ತಿದೆ. ಆದರೆ ಆ ದೇಶ ಖಂಡಿತವಾಗಿಯೂ ಜಪಾನ್ ಅಲ್ಲ!

‘ಫುಕುಶಿಮಾ ದುರಂತದಿಂದ ಜರ್ಮನಿ ಪಾಠ ಕಲಿತಿದೆ. ಹಾಗಾಗಿಯೇ ಪರಮಾಣು ಶಕ್ತಿಯ ಅವಲಂಬನೆಯಿಂದ ಕಳಚಿಕೊಳ್ಳಲು ಮುಂದಾಗಿದೆ. ಅಮೆರಿಕ ಮಾತ್ರ ಪರಮಾಣು ಶಕ್ತಿ ಬಳಕೆಯನ್ನು ಈಗಲೂ ಬೆಂಬಲಿಸುತ್ತಿದೆ. ಅದೇನೇ ಇರಲಿ, ಪರಮಾಣು ದುರಂತಗಳಿಗೆ ಸಾಕ್ಷಿಯಾದ ಜಪಾನ್್ ಕಥೆ ಏನು’– ಹೀಗೆಂದು ಪ್ರಶ್ನಿಸುತ್ತಾರೆ ಪರಮಾಣು ಶಕ್ತಿ ಬಗ್ಗೆ ಹಲವು ಪುಸ್ತಕಗಳನ್ನು ಬರೆದ ಜುನ್ ಟಟೆನೊ.

‘ಅಭಿವೃದ್ಧಿಗಾಗಿ ನಮಗೆ ಪರಮಾಣು ಶಕ್ತಿ ಆಧರಿತ ಕಡಿಮೆ ವೆಚ್ಚದ ವಿದ್ಯುತ್ ಬೇಕಾ? ಅಥವಾ ಸುರಕ್ಷಿತವಾದ, ಪರಮಾಣು ಮುಕ್ತವಾದ ಸಮಾಜ ನಮ್ಮ ಅವಶ್ಯಕತೆಯಾ?’– ‘ಈ ಮೂಲಭೂತ ಪ್ರಶ್ನೆಯ ಬಗ್ಗೆ ಈವರೆಗೂ ನಮ್ಮಲ್ಲಿ ಸರಿಯಾದ ಚರ್ಚೆ ನಡೆದಿಲ್ಲ’ ಎನ್ನುತ್ತಾರೆ ಟಟೆನೊ.

ಟೋಕಿಯೊದ ನೂತನ ಗವರ್ನರ್ ಆಯ್ಕೆ ಬಳಿಕ ಇಂಥದ್ದೊಂದು ಚರ್ಚೆಗೆ ವೇದಿಕೆ ಸಿಗಬಹುದು ಎಂದು ಅನೇಕರು ಆಶಿಸಿದ್ದರು. ಆದರೆ ಗವರ್ನರ್ ಚುನಾವಣೆಗೆ ಸ್ಪರ್ಧಿಸಿದ್ದ ‘ಪರಮಾಣು ಶಕ್ತಿ ವಿರೋಧಿ’ ಅಭ್ಯರ್ಥಿಗಳಿಬ್ಬರು (ಒಬ್ಬರು ಮಾಜಿ ಪ್ರಧಾನಿ ಮೊರಿಹಿರೊ ಹೊಸೊಕೊವಾ) ಸೋತಾಗ ಈ ಒಂದು ಸಣ್ಣ ಆಸೆ ಕೂಡ ಬತ್ತಿ ಹೋಯಿತು. ಪರಮಾಣು ಶಕ್ತಿಯನ್ನು ಬಲವಾಗಿ ಸಮರ್ಥಿಸುವ ಪ್ರಧಾನಿ ಶಿಂಜೊ ಅಬೆ ಅವರ ಶಿಷ್ಯ ಟೋಕಿಯೊ ಗವರ್ನರ್್ ಆಗಿ ಆಯ್ಕೆಯಾದರು.

ಗವರ್ನರ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದೇ ತಡ ಶಿಂಜೊ ಅಬೆ ಅವರು, ‘ಕಾರ್ಯರೂಪಕ್ಕೆ ತರಬಹುದಾದ, ಸ್ಥಿರವಾದ ಇಂಧನ ಕಾರ್ಯತಂತ್ರವನ್ನು ಶೀಘ್ರವೇ ಅನಾವರಣಗೊಳಿಸಲಾಗುತ್ತದೆ’ ಎಂದು ಘೋಷಿಸಿಬಿಟ್ಟರು. ‘ಕೆಲವೊಂದು ಅಣುಸ್ಥಾವರಗಳು ಮತ್ತೆ ಕಾರ್ಯಾರಂಭಗೊಳ್ಳಬಹುದು’ ಎಂಬ ಸುಳಿವು ಈ ಮಾತಿನಲ್ಲಿ ಇತ್ತು.

ಒಂದು ವೇಳೆ ಇಂಥ ಕಾರ್ಯಕ್ಕೆ ಮುಂದಾದರೆ ಅಥವಾ ಪರಮಾಣು ಸ್ಥಾವರಗಳ ಸುರಕ್ಷೆಯ ಬಗ್ಗೆ ಸರಿಯಾಗಿ ಮನವರಿಕೆ ಮಾಡಿಕೊಡದಿದ್ದರೆ ಅಬೆ ಅವರು ಸಾರ್ವಜನಿಕರಿಂದ ತೀವ್ರ ಆಕ್ಷೇಪ ಎದುರಿಸಬೇಕಾಗಿ ಬರಬಹುದು ಎಂದು ಕೆಲವು ವಿಶ್ಲೇಷಕರು ಎಚ್ಚರಿಸಿದ್ದಾರೆ.

‘ಗವರ್ನರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ‘ಪರಮಾಣು ವಿರೋಧಿ’ ಅಭ್ಯರ್ಥಿಗಳು ಸೋಲುಕಂಡಿರುವುದನ್ನು ತಪ್ಪಾಗಿ ಅರ್ಥೈಸಬಾರದು. ಇದು ಪರಮಾಣು ಕಾರ್ಯಕ್ರಮವನ್ನು ಬೆಂಬಲಿಸುವುದಕ್ಕೆ ದೊರೆತ ಸಮ್ಮತಿ ಅಲ್ಲ’ ಎನ್ನುತ್ತಾರೆ ಕಿಯೊ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಶಿರೊ ಅಸಾನೊ.

ಪರಮಾಣು ಕಾರ್ಯಕ್ರಮಗಳ ವಿಷಯದಲ್ಲಿ ಜಪಾನ್, ಸುಮಾರು ಮೂರು ವರ್ಷಗಳಿಂದ ಗೊಂದಲದಲ್ಲಿದೆ ಎನ್ನುವುದನ್ನು ಈ ಚುನಾವಣಾ ಫಲಿತಾಂಶ ನಿರೂಪಿಸಿದಂತಿದೆ. ‘ಸಂಪನ್ಮೂಲ ಕೊರತೆ ಇರುವ ದೇಶಕ್ಕೆ ಆರ್ಥಿಕ ಪ್ರಗತಿ ಸಾಧಿಸಲು ಅಗ್ಗದ ಪರಮಾಣು ಇಂಧನ ಶಕ್ತಿ ಬೇಕು ಎಂದು ದಶಕಗಳಿಂದ ವಾದಿಸಿಕೊಂಡು ಬಂದಿದ್ದ ಜಪಾನ್ಗೆ ಈ ವಿಷಯವಾಗಿ ರಾಷ್ಟ್ರೀಯ ಒಮ್ಮತ ಮೂಡಿಸಲು ಸಾಧ್ಯವಾಗಿಲ್ಲ. ಫುಕುಶಿಮಾ ದುರಂತದ ಬಳಿಕ ಹೆಚ್ಚಿನ ಜನರು ಪರಮಾಣು ಮುಕ್ತ ವ್ಯವಸ್ಥೆಯನ್ನು ಎದುರು ನೋಡುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ದೇಶದ ಮುಂದೆ ಇದೆ.

ಶಿಂಜೊ ಅಬೆ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮತದಾರರು ಮಿಶ್ರ ಸಂದೇಶ ಕೊಟ್ಟಿದ್ದಾರೆ. ಪರಮಾಣು ಶಕ್ತಿಯಿಂದ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುವುದು ತಮ್ಮ ಹೊಸ ಆರ್ಥಿಕ ನೀತಿಯ ಮಹತ್ವದ ಭಾಗ ಎಂದು ಅಬೆ ಹೇಳಿಕೊಂಡಿದ್ದಾರೆ.ಇದೇ ವೇಳೆ, ಪರಮಾಣು ಶಕ್ತಿ ಬಗ್ಗೆ ಮತದಾರರು ಡೋಲಾಯಮಾನ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಚುನಾವಣೆಗಳಲ್ಲಿ ಸಾಬೀತಾಗುತ್ತಲೇ ಇದೆ.

‘ಶೀಘ್ರವೇ ಅಣು ಸ್ಥಾವರಗಳನ್ನು ಮರುಚಾಲನೆಗೊಳಿಸುವುದು ಬೇಡ’ ಎಂದು ಜನಾಭಿಪ್ರಾಯ ಸಂಗ್ರಹಣೆ ವೇಳೆ ಮತದಾರರು ಹೇಳಿದ್ದರು. ಆದರೆ ರಾಷ್ಟ್ರೀಯ ಚುನಾವಣೆಗಳಲ್ಲಿ ಜನರು ಅಬೆ ಅವರ ಪಕ್ಷವನ್ನು ಗೆಲ್ಲಿಸಿದರು.

ಈ ದೇಶದಲ್ಲಿ ಇಂಧನದ ವೆಚ್ಚ ದುಬಾರಿಯಾಗಿದೆ. ಹಿಂದೆ ಉಳಿತಾಯದ ಜಂಭದಲ್ಲಿ ಬೀಗುತ್ತಿದ್ದ ದೇಶಕ್ಕೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ. ಆದರೂ, ಅನೇಕ ಜಪಾನಿಯರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎನ್ನುವುದಂತೂ ಸತ್ಯ. ವಿಶ್ವದ ಬಹುತೇಕ ರಾಷ್ಟ್ರಗಳಿಗಿಂತ ಜಪಾನ್ ಹೆಚ್ಚು ಸುರಕ್ಷಿತವಾಗಿದೆ. ಜಗತ್ತಿನಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ ಮೂರನೇ ಅತಿ ದೊಡ್ಡ ದೇಶ ಎಂದು ಈಗಲೂ ಗುರುತಿಸಿಕೊಂಡಿದೆ.

ಆರ್ಥಿಕ ಹೊಡೆತ...
‘ಫುಕುಶಿಮಾ ದುರಂತದ ಬಳಿಕ 48 ಪರಮಾಣು ಸ್ಥಾವರಗಳು ಕಾರ್ಯಸ್ಥಗಿತಗೊಳಿಸಿದವು. ಹಾಗಾಗಿ ಜಪಾನ್ ದೇಶವು ಹೆಚ್ಚುವರಿಯಾಗಿ ಸುಮಾರು ₨ 2,23,200 ಕೋಟಿ (3,600 ಕೋಟಿ ಡಾಲರ್) ಮೊತ್ತದ ನೈಸರ್ಗಿಕ ಅನಿಲ ಹಾಗೂ ಇತರ ಇಂಧನಗಳನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳಬೇಕಾಯಿತು. ಇದರಿಂದಾಗಿ ಆರ್ಥಿಕ ಹೊಡೆತ ಬಿತ್ತು’ ಎನ್ನುವುದು ಅಬೆ ಹಾಗೂ ಉದ್ಯಮ ವಲಯದಲ್ಲಿರುವ ಅವರ ಆಪ್ತರ ವಾದ.

ಸ್ಥಗಿತಗೊಂಡಿದ್ದ ಅಣುಸ್ಥಾವರಗಳು ಮತ್ತೆ ಕಾರ್ಯಾರಂಭ ಮಾಡಲು ಸುರಕ್ಷಿತವಾಗಿಇವೆಯೋ, ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಲು ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ನೂತನ ಕಣ್ಗಾವಲು ಸಮಿತಿ ಹಿಂದೇಟು ಹಾಕುತ್ತಿದೆ. ಹಾಗೆ ಹೇಳುವ ಮೂಲಕ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗುವುದು ಅದಕ್ಕೆ ಬೇಕಾಗಿಲ್ಲ. ಈ ಅಣುಸ್ಥಾವರಗಳ ಸುರಕ್ಷೆಗೆ ಸಂಬಂಧಿಸಿದಂತೆ 2013ರ ಜುಲೈನಲ್ಲಿ ರೂಪಿಸಲಾದ ನೂತನ ಮಾನದಂಡ ಪಾಲಿಸಲಾಗಿದೆಯೇ ಎನ್ನುವುದರ ಕುರಿತು ಸಮಿತಿ ಕಳೆದ ತಿಂಗಳು ತನ್ನ ಮೊದಲ ನಿರ್ಣಯವನ್ನು ತಿಳಿಸಬೇಕಿತ್ತು.

ಸೋತಿದ್ದೇಕೆ?: ಪರಮಾಣು ಕಾರ್ಯಕ್ರಮ ವಿರೋಧಿಸುವ ಅಭ್ಯರ್ಥಿಗಳು ಗವರ್ನರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸೋಲುವುದಕ್ಕೆ ಕಾರಣ ಕೂಡ ಇದೆ. ದೇಶವನ್ನು ಪರಮಾಣು ಮುಕ್ತ ರಾಷ್ಟ್ರವನ್ನಾಗಿ ಮಾಡಲು ಇವರು ಮುಂದಿಟ್ಟ ಉದಾತ್ತ ಪರಿಕಲ್ಪನೆ ಮತದಾರರಿಗೆ ಸರಿಯಾಗಿ ಅರ್ಥವಾಗಿಲ್ಲ.

ಹೊಸೊಕೊವಾ ಪರವಾಗಿ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಜುಮಿ ಕೂಡ ಪ್ರಚಾರ ಮಾಡಿದ್ದರು. ‘ದೇಶವು ಪರಮಾಣು ಇಂಧನದ ಅವಲಂಬನೆಯಿಂದ ಮುಕ್ತವಾಗಬೇಕಿದೆ. ಅದರ ಬದಲು ಸುರಕ್ಷಿತವಾದ, ಮರು ಬಳಕೆ ಇಂಧನವನ್ನು ಬಳಸಿಕೊಳ್ಳಬೇಕಾಗಿದೆ ಎಂದು ಇಬ್ಬರೂ ನಾಯಕರು ಪ್ರಚಾರ ಭಾಷಣ ಮಾಡಿದ್ದರು. ಇದು ವಾಸ್ತವಕ್ಕೆ ದೂರವಾದ ಮಾತು ಎಂದು ಅನೇಕರು ಅಂದುಕೊಂಡಿದ್ದರು. ಜನರ ಈ ಅನಿಸಿಕೆಯೇ ಅಬೆ ಅವರ ಶಿಷ್ಯನ ಗೆಲುವಿಗೆ ಕಾರಣವಾಯಿತೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಅಬೆ ಅವರ ಪಕ್ಷದಲ್ಲಿಯೂ ಭಿನ್ನಮತ ಎದ್ದಿದೆ. ಈ ಪಕ್ಷದ ಸುಮಾರು 50 ಯುವ ಶಾಸಕರ ತಂಡ ಅಬೆ ಅವರ ಪರಮಾಣು ಪರ ನಿಲುವನ್ನು ವಿರೋಧಿಸಿದೆ.
ಇತ್ತಿತ್ತಲಾಗಿ ಜನರಿಗೂ ಪರಮಾಣು ವಿರೋಧಿ ಪ್ರತಿಭಟನೆಯಲ್ಲಿ ಆಸಕ್ತಿ ಕಮ್ಮಿ ಆಗಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನಿವಾಸದ ಎದುರು ಹತ್ತಾರು ಸಾವಿರ ಮಂದಿ ಧರಣಿ ಕೂತಿದ್ದರು. ಈಗ ಆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

‘ಅಬೆ ಹಾಗೂ ಹೊಸೊಕೊವಾ ಈಗ ಸಾರ್ವಜನಿಕ ಅಭಿಪ್ರಾಯದ ಕೇಂದ್ರ ಬಿಂದುವಾಗಿಲ್ಲ’ ಎನ್ನುತ್ತಾರೆ ಹಿಟೊತ್ಸುಬಶಿ ವಿಶ್ವವಿದ್ಯಾಲಯದ ಇಂಧನ ತಜ್ಞ ಟಕೊಯೊ ಕಿಕ್ಕಿವಾ. ‘ಪ್ರಗತಿಗೆ ಧಕ್ಕೆ ಆಗದ ರೀತಿಯಲ್ಲಿ ಹಂತ ಹಂತವಾಗಿ ಪರಮಾಣು ಶಕ್ತಿ ಅವಲಂಬನೆಯಿಂದ ಮುಕ್ತವಾಗಬೇಕು. ಇದುವೇ ಅತ್ಯುತ್ತಮ ಪರಿಹಾರ ಮಾರ್ಗ’ ಎಂದೂ ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.