ಜಮ್‌ಶೇಡ್‌ಪುರ: ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಎರಡು ತಂಡಗಳ ಕಾದಾಟಕ್ಕೆ ಇಲ್ಲಿನ ಜೆ.ಆರ್.ಡಿ ಟಾಟಾ ಕ್ರೀಡಾ ಸಂಕೀರ್ಣ ಸಜ್ಜುಗೊಂಡಿದೆ.

ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಶುಕ್ರವಾರದ ಪಂದ್ಯ ದಲ್ಲಿ ಆತಿಥೇಯ ಜಮ್‌ಶೇಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವನ್ನು ಮುಂಬೈ ಸಿಟಿ ಎಫ್‌ಸಿ ತಂಡ ಎದುರಿಸಲಿದ್ದು ಫುಟ್‌ಬಾಲ್ ಪ್ರಿಯರಿಗೆ ಈ ಹಣಾಹಣಿ ಈ ರೋಮಾಂಚನ ನೀಡಲಿದೆ.

ಜಮ್‌ಶೇಡ್‌ಪುರ ಎಫ್‌ಸಿ ತಂಡ ಈ ವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಎರಡು ಗೋಲುಗಳನ್ನು ಬಿಟ್ಟುಕೊಟ್ಟಿದೆ. ಗೋಲ್‌ಕೀಪರ್ ಸುಬ್ರತಾ ಪಾಲ್ ಐದು ಗೋಲುಗಳನ್ನು ತಡೆದು ಗಮನ ಸೆಳೆದಿದ್ದಾರೆ. ಮುಂಬೈ ಸಿಟಿ ಎಫ್‌ಸಿ ತಂಡ ಏಳು ಗೋಲುಗಳನ್ನು ಬಿಟ್ಟುಕೊಟ್ಟಿದೆ.

ಈ ಪೈಕಿ ಐದು ಗೋಲುಗಳು ತವರಿನಿಂದ ಹೊರಗೆ ನಡೆದ ಪಂದ್ಯಗಳಲ್ಲೇ ದಾಖಲಾಗಿವೆ. ಆದ್ದರಿಂದ ಈ ಪಂದ್ಯದಲ್ಲಿ ತಂಡದ ಸ್ವಲ್ಪ ಆತಂಕಕ್ಕೆ ಒಳಗಾಗಿದೆ. ಜಮ್‌ಶೇಡ್‌ಪುರ ಎಫ್‌ಸಿ ಲೀಗ್‌ನಲ್ಲಿ ಎರಡು ಗೋಲುಗಳನ್ನು ಮಾತ್ರ ಗಳಿಸಿದ್ದರೆ ಮುಂಬೈ ಸಿಟಿ 11 ಗೋಲುಗಳನ್ನು ಗಳಿಸಿದೆ.

ಪಾಯಿಂಟ್ ಪಟ್ಟಿಯಲ್ಲಿ ಈ ಎರಡು ತಂಡಗಳ ನಡುವೆ ಕೇವಲ ನಾಲ್ಕು ಪಾಯಿಂಟ್‌ಗಳ ಅಂತರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.