ಬೆಂಗಳೂರು: ನಗರದಲ್ಲಿ ಹೋದ ವಾರ ಸುರಿದ ಮಳೆಯಿಂದಾಗಿ ಮುಂದೂಡಲಾಗಿದ್ದ ಬೆಂಗಳೂರು ಬೇಸಿಗೆ ರೇಸ್ಗಳು ಇದೇ 28ರಿಂದ ಆರಂಭವಾಗಲಿವೆ.

ಪೂರ್ವನಿಗದಿಯ ಬೇಸಿಗೆ ರೇಸ್ನ ವೇಳಾಪಟ್ಟಿಯ ಮೊದಲ ಎರಡು ದಿನಗಳು ಮಳೆಗೆ ಆಹುತಿಯಾಗಿದ್ದವು. ಆದ್ದರಿಂದ ಈಗ 19 ರೇಸ್ ದಿನಗಳು ಇರಲಿವೆ. ಶನಿವಾರ (ಮೇ 28) ಮೊದಲ ರೇಸ್ ಆರಂಭವಾಗಲಿದೆ. ಆಗಸ್ಟ್ 5ರಂದು ಕೊನೆಯ ರೇಸ್ ನಡೆಯಲಿದೆ ಎಂದು ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಕೆ. ಉದಯನ್ ಈಶ್ವರನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಬೇಸಿಗೆ ರೇಸ್ಗಳಲ್ಲಿ ₹ 14.41 ಕೋಟಿ ಬಹುಮಾನ ಮೊತ್ತವನ್ನು ಮೀಸಲಾಗಿರಿಸಲಾಗಿದೆ. ಈ ಮೊತ್ತವು ಹಿಂದಿನ ಚಳಿಗಾಲದ ಬಹುಮಾನದ ಮೊತ್ತಕ್ಕಿಂತ ಶೇ.21ರಷ್ಟು ಹೆಚ್ಚಿಸಲಾಗಿದೆ.ಪ್ರಮುಖ ರೇಸ್ಗಳಾದ ಫಿಲ್ಲೀಸ್ ಟ್ರಯಲ್ ಸ್ಟೇಕ್ಸ್ ಜೂನ್ 19ರಂದು; ಕೋಲ್ಟ್ಸ್ ಚಾಂಪಿಯನ್ಷಿಪ್ ಸ್ಟೇಕ್ಸ್ ಜೂನ್ 26ರಂದು; ಬೆಂಗಳೂರು ಬೇಸಿಗೆ ಡರ್ಬಿ 17ನೆ ಜುಲೈರಂದು; ಬೆಂಗಳೂರು ಸೇಂಟ್ ಲೆಜರ್ ಜುಲೈ 24ರಂದು ನಡೆಯಲಿವೆ’ ಎಂದರು.

‘ಡರ್ಬಿ ರೇಸ್ಗೆ ₹ 2 ಕೋಟಿ ಒಟ್ಟು ಬಹುಮಾನ ಖಾತರಿ ನೀಡಲಾಗಿದೆ.ಈ ಪ್ರತಿಷ್ಠಿತ ಡರ್ಬಿಯು 34 ವರ್ಷಗಳಿಂದ ನಡೆಯುತ್ತಿದೆ. ಯುಬಿ ಸಮೂಹದ ಮಾಜಿ ಮುಖ್ಯಸ್ಥ ವಿಜಯ್ ಮಲ್ಯ ಇದನ್ನು ಆರಂಭಿಸಿ, ಪ್ರೋತ್ಸಾಹಿಸಿದ್ದಾರೆ. ಫಿಲ್ಲೀಸ್ ಟ್ರಯಲ್ ಸ್ಟೇಕ್ಸ್ ಮತ್ತು ಕೋಲ್ಟ್ಸ್ ಚಾಂಪಿಯನ್ಷಿಪ್ ಸ್ಟೇಕ್ಸ್ ರೇಸ್ಗಳಿಗೆ ತಲಾ ಕನಿಷ್ಠ ₹ 50 ಲಕ್ಷದ ಒಟ್ಟು ಬಹುಮಾನ ಸಿಗಲಿದೆ’ ಎಂದರು.

‘ ಋತುವಿನಲ್ಲಿ ಸುಮಾರು 112 ಕುದುರೆ ಸವಾರರ ಜೊತೆಯಲ್ಲಿ 28 ‘ಎ’ ದರ್ಜೆಯ ಮತ್ತು 14 ‘ಬಿ’ ದರ್ಜೆಯ ತರಬೇತುದಾರರು ಭಾಗವಹಿಸಲಿದ್ದಾರೆ. ದೇಶದ ಇತರೆ ಕ್ಲಬ್ಗಳಿಂದ ಒಟ್ಟು 14 ತರಬೇತುದಾರರು ತಂದಿರುವ ಸುಮಾರು 71 ಕುದುರೆಗಳಿಗೆ ಸ್ಥಳಾವಕಾಶ ಮಾಡಲಾಗಿದೆ’ ಎಂದರು.

ಬರಲಿದೆ ಕೊಮಿಂಗ್ಲಿಂಗ್ ಟೋಟ್ : ‘ಒಂದು ದೇಶ, ಒಂದು ತೆರಿಗೆನೀತಿಯನ್ನು ಆಧರಿಸಿ, ಟರ್ಫ್ ಕ್ಲಬ್ ಆಫ್ ಇಂಡಿಯಾ ಟೋಟ್ ಆದಾಯವನ್ನು ವೃದ್ಧಿಗೊಳಿಸುವ ಜೊತೆಯಲ್ಲಿ ಗರಿಷ್ಠ ಡಿವಿಡೆಂಡ್ ನೀಡುವ ನಿಟ್ಟಿನಲ್ಲಿ ದೇಶದ ಎಲ್ಲಾ ರೇಸ್ ಕ್ಲಬ್ಗಳ ಒಟ್ಟುಗೂಡಿಸಿ ಒಂದೇ ಟೋಟ್ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇದನ್ನು ಕೋಮಿಂಗ್ಲಿಂಗ್ ಎನ್ನಲಾಗುತ್ತಿದೆ. ಇದರಿಂದಾಗಿ ಆದಾಯದಲ್ಲಿ ಗಮನೀಯ ಹೆಚ್ಚಳ ಕಾಣಲಿದೆ. ಭಾರತದಲ್ಲಿ ಜುಲೈ 1ರಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ದೇಶದ ಕುದುರೆ ರೇಸ್ನಲ್ಲಿ ಐತಿಹಾಸಿಕ ಹೆಜ್ಜೆಯಾಗಲಿದೆ’ ಎಂದು ಉದಯ್ ಈಶ್ವರನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.