ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನ್ ಕೆ ರನ್

Published 18 ಮೇ 2023, 20:59 IST
Last Updated 18 ಮೇ 2023, 20:59 IST
ಅಕ್ಷರ ಗಾತ್ರ

ಬೆಂಗಳೂರು: ’ನಾನಿವತ್ತು ಏನೇ ಇದ್ದರೂ ಕುಟುಂಬದ ತ್ಯಾಗದಿಂದ ಮಾತ್ರ. ನನ್ನಮ್ಮನೇ ತರಬೇತುದಾರರಾಗಿದ್ದರು. ಮನೆಯ ಗ್ಯಾರೇಜ್‌ನ್ನೇ ಜಿಮ್ನಾಷಿಯಂ ಆಗಿ ಪರಿವರ್ತಿಸಿದರು. ನಾನು ವಿಶ್ವದಾಖಲೆ ಮಾಡಬಲ್ಲೆ ಎಂದು ಹೇಳಿದವರು ಅಪ್ಪ. ಅವರ ಪ್ರೋತ್ಸಾಹವೇ ನನಗೆ ಶಕ್ತಿ ತುಂಬಿದ್ದು ಸುಳ್ಳಲ್ಲ‘–

ಒಲಿಂಪಿಕ್ ಪದಕವಿಜೇತ ಅಥ್ಲೀಟ್ ಸಾನ್ಯಾ ರಿಚರ್ಡ್ಸ್-ರಾಸ್ ಅವರು ನೆನಪಿನಂಗಳಕ್ಕೆ ಜಾರಿದ್ದರು. ಭಾನುವಾರ ಉದ್ಯಾನನಗರಿಯಲ್ಲಿ ನಡೆಯಲಿರುವ ಟಿಸಿಎಸ್ ವಿಶ್ವ ಟೆನ್‌ ಕೆ ಓಟದ ರಾಯಭಾರಿಯಾಗಿರುವ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ತಮ್ಮ ಜೀವನದ ಯಶೋಗಾಥೆಯನ್ನು ಬಿಚ್ಚಿಟ್ಟರು. ಜಮೈಕಾದಲ್ಲಿ ಜನಿಸಿ ಅಮೆರಿಕದಲ್ಲಿ ಬೆಳೆದವರು ಸಾನ್ಯಾ. ಮಹಿಳೆಯರ 400 ಮೀಟರ್ಸ್ ಓಟ ಹಾಗೂ 4X400 ಮೀಟರ್ಸ್‌ ರಿಲೆಯಲ್ಲಿ ಮಿಂಚಿದವರು. ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದವರು.  ಸದ್ಯ 38 ವರ್ಷದ ಸಾನ್ಯಾ ಲೇಖಕಿ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

‘ನಾನು ಈ ಹಿಂದೆ 10 ಕೆ ರನ್ ಓಡಿಲ್ಲ. ಆದರೆ ಕಳೆದ ವರ್ಷ ನನ್ನ ಮೊದಲ ಬಾರಿ 5 ಕೆ ಓಟದಲ್ಲಿ ಪಾಲ್ಗೊಂಡಿದ್ದೆ. ನಾನು ನಿಜವಾಗಿಯೂ 800 ಮೀಟರ್ಸ್ ಮೀರಿ ಓಡಬಲ್ಲೆ ಎಂದು ಭಾವಿಸಿರಲಿಲ್ಲ, ಆದರೆ ನಾನು ಭಾಗವಹಿಸಿದಾಗ, ನನ್ನ ಜೀವನದ ಅತ್ಯಂತ ಅದ್ಭುತ ಅನುಭವ ಲಭಿಸಿತು. ಸಮುದಾಯದೊಂದಿಗೆ ಓಡುವುದು ಮತ್ತು ಪರಸ್ಪರ ಪ್ರೋತ್ಸಾಹಿಸುವುದರಲ್ಲಿ ವಿಶೇಷ ಅನುಭವವಿದೆ‘ ಎಂದರು.

’‘ಭಾರತದಲ್ಲಿ ಓಟದ ಬೆಳವಣಿಗೆಯನ್ನು ನೋಡಲು, ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು ಸ್ಪರ್ಧೆಯಲ್ಲಿ 27 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ನೋಂದಾಯಿಸಿರುವುದನ್ನು ಕೇಳಲು ಹಿತವೆನಿಸಿತು. ಇದು ಕ್ರೀಡೆಯ ಶಕ್ತಿ ಮತ್ತು ಓಟದ ಶಕ್ತಿಯನ್ನು ತೋರಿಸುತ್ತದೆ‘ ಎಂದರು.  

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT