ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ: ಹತ್ತು ವಿಕೆಟ್ ಪಟೇಲ್‌ಗಿಲ್ಲ ಸ್ಥಾನ

Last Updated 23 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್: ಟೆಸ್ಟ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಹತ್ತು ವಿಕೆಟ್ ಗಳಿಸಿದ ವಿಶ್ವದ ಮೂರನೇ ಬೌಲರ್‌ ಎಜಾಜ್ ಪಟೇಲ್ ಅವರಿಗೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆಡುವ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಲಭಿಸಿಲ್ಲ!

ಜನವರಿ 1ರಿಂದ ಎರಡು ಟೆಸ್ಟ್‌ಗಳ ಸರಣಿ ಆರಂಭವಾಗಲಿದೆ. ಗುರುವಾರ 13 ಆಟಗಾರರ ತಂಡವನ್ನು ಕ್ರಿಕೆಟ್ ನ್ಯೂಜಿಲೆಂಡ್ ಪ್ರಕಟಿಸಿದೆ. ಅದರಲ್ಲಿ ಪಟೇಲ್‌ ಸ್ಥಾನ ಪಡೆದಿಲ್ಲ. ಸ್ಪಿನ್ ಆಲ್‌ರೌಂಡರ್ ರಚಿನ್ ರವೀಂದ್ರ ಸ್ಥಾನ ಪಡೆದಿದ್ದಾರೆ.ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲಥಾಮ್ ನಾಯಕತ್ವ ವಹಿಸಿದ್ದಾರೆ.

ಈಚೆಗೆ ಮುಂಬೈನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಪಟೇಲ್ ಪರ್ಫೆಕ್ಟ್ –10 ಸಾಧನೆ ಮಾಡಿದ್ದರು. ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಅವರ ನಂತರ ಈ ಸಾಧನೆ ಮಾಡಿದ್ದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

‘ನ್ಯೂಜಿಲೆಂಡ್‌ನಲ್ಲಿ ಸ್ಪಿನ್‌ಸ್ನೇಹಿ ಪಿಚ್‌ಗಳಿಲ್ಲ. ಇದು ನನ್ನಂತಹ ಸ್ಪಿನ್ನರ್‌ ಅವಕಾಶವಂಚಿತನಾಗಲು ಕಾರಣ. ಇಲ್ಲಿಯ ಪಿಚ್ ನಿರ್ಮಾತೃಗಳು ಸ್ಪಿನ್‌ಸ್ನೇಹಿ ಅಂಕಣ ಸಿದ್ಧಗೊಳಿಸಬೇಕು. ನನ್ನ ಸ್ಪಿನ್ ಬೌಲಿಂಗ್ ನೋಡಿ ಮತ್ತಷ್ಟು ಯುವ ಆಟಗಾರರು ಈ ಕಲೆಯನ್ನು ಕಲಿಯಬೇಕು ಎಂಬ ಗುರಿ ನನ್ನದು‘ ಎಂದು ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ತಂಡ: ಟಾಮ್ ಲಥಾಮ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೆ, ಮ್ಯಾಟ್ ಹೆನ್ರಿ, ಕೈಲ್ ಜೆಮಿಸನ್, ಡೆರಿಲ್ ಮಿಚೆಲ್, ಹೆನ್ರಿ ನಿಕೊಲ್ಸ್, ರಚಿನ್ ರವೀಂದ್ರ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ವಿಲ್ ಯಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT