ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ 15 ಅಥ್ಲೀಟ್‌ಗಳು, ಎರಡು ರಿಲೆ ತಂಡ

Last Updated 1 ಜುಲೈ 2021, 16:35 IST
ಅಕ್ಷರ ಗಾತ್ರ

ನವದೆಹಲಿ: ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ, ಓಟಗಾರ್ತಿ ದ್ಯುತಿ ಚಾಂದ್ ಸೇರಿದಂತೆ ಟೋಕಿಯೊ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾರತದ 15 ಅಥ್ಲೀಟ್‌ಗಳು ಸ್ಪರ್ಧಿಸುವರು.

ಇದಲ್ಲದೆ ಪುರುಷರ ಮತ್ತು ಮಿಶ್ರ ವಿಭಾಗಗಳ ರಿಲೆ ತಂಡಗಳು ಕೂಡ ಕಣಕ್ಕಿಳಿಯಲಿವೆ ಎಂದು ಗುರುವಾರ ವಿಶ್ವ ಅಥ್ಲೆಟಿಕ್ಸ್‌ ಸಂಸ್ಥೆ ತಿಳಿಸಿದೆ.

ಅಥ್ಲೀಟ್‌ಗಳು: ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ (ಪುರುಷರ ಜಾವೆಲಿನ್ ಥ್ರೋ), ಅವಿನಾಶ್ ಸಬ್ಳೆ (ಪುರುಷರ 3000 ಮೀ ಸ್ಟೀಪಲ್‌ಚೇಸ್), ಕೆ.ಟಿ. ಇರ್ಫಾನ್, ಸಂದೀಪ್ ಕುಮಾರ್, ರಾಹುಲ್ ರೋಹಿಲಾ (20 ಕಿ.ಮೀ ನಡಿಗೆ), ಭಾವಾ ಜಾಟ್, ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿ.ಮೀ ನಡಿಗೆ), ಎಂ. ಶ್ರೀಶಂಕರ್ (ಪುರುಷರ ಲಾಂಗ್‌ ಜಂಪ್), ತಜಿಂದರ್ ಪಾಲ್ ಸಿಂಗ್ ತೂರ್ (ಪುರುಷರ ಶಾಟ್‌ಪಟ್), ಕಮಲ್‌ಪ್ರೀತ್ ಕೌರ್, ಸೀಮಾ ಪೂನಿಯಾ (ಮಹಿಳೆಯರ ಡಿಸ್ಕಸ್‌ಥ್ರೋ), ದ್ಯುತಿ ಚಾಂದ್ (ಮಹಿಳೆಯರ 100ಮೀ, 200ಮೀ ಓಟ), ಎಂ.ಪಿ. ಜಬೀರ್ (ಪುರುಷರ 400ಮೀ ಹರ್ಡಲ್ಸ್‌), ಅನು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ), ಎಂ.ಪಿ. ಜಬೀರ್ (400 ಮೀ ಹರ್ಡಲ್ಸ್‌) 4X400 ಮೀ ಪುರುಷರ ರಿಲೆ, 4X400 ರಿಲೆ ಮಿಶ್ರ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT