ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿಯ ಈ ಅಭ್ಯಾಸ ನನಗೆ ಕಿರಿಕಿರಿ ಉಂಟು ಮಾಡುತ್ತದೆ: ಎಬಿಡಿ

Last Updated 9 ಏಪ್ರಿಲ್ 2023, 13:48 IST
ಅಕ್ಷರ ಗಾತ್ರ

ಐಪಿಎಲ್‌ನ ಜೋಡೆತ್ತುಗಳೆಂದೇ ಕರೆಯಲಾಗುವ ಆರ್‌ಸಿಬಿ ತಂಡದ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ಎ ಬಿ ಡೆವಿಲಿಯರ್ಸ್‌(ಎಬಿಡಿ) ಕ್ರಿಕೆಟ್‌ ಮೈದಾನದಿಂದಾಚೆಗೂ ಉತ್ತಮ ಬಾಂದವ್ಯ ಹೊಂದಿದ್ದಾರೆ. ಸಂದರ್ಶನವೊಂದರಲ್ಲಿ ಎಬಿಡಿ ಅವರಿಗೆ ‘ವಿರಾಟ್‌ ಕೊಹ್ಲಿಯ ಯಾವ ಅಭ್ಯಾಸ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ‘ ಎಂದು ಕೇಳಲಾಗಿದ್ದು, ಎಬಿಡಿ ಉತ್ತರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇತ್ತೀಚೆಗೆ ಜಿಯೋ ಸಿನೆಮಾ ನಡೆಸಿದ ಸಂದರ್ಶನವೊಂದರಲ್ಲಿ ಎಬಿಡಿ ಹಾಗೂ ಅವರ ಪತ್ನಿ ಡೇನಿಯಲ್‌ ಭಾಗವಹಿಸಿದ್ದರು. ಸಂದರ್ಶನದಲ್ಲಿ ಕ್ರಿಕೆಟ್‌ಗೆ ಸಂಬಂಧಪಟ್ಟ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ವಿರಾಟ್‌ ಕೊಹ್ಲಿ ಮತ್ತು ಎಬಿಡಿ ನಡುವಿನ ಸಂಬಂಧದ ಬಗ್ಗೆಯೂ ಕೇಳಲಾಗಿತ್ತು.

ಈ ವೇಳೆ ಸಂದರ್ಶಕ ವಿರಾಟ್‌ ಕೊಹ್ಲಿ ಅವರ ಯಾವ ಒಂದು ಅಭ್ಯಾಸ ನಿಮಗೆ ತುಂಬಾ ಕಿರಿಕಿರಿ ತರುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಎಬಿಡಿ, ’ವಿರಾಟ್‌ ಕೊಹ್ಲಿ ತುಂಬಾ ಫಿಟ್‌ ಆಗಿದ್ದಾರೆ. ವಿರಾಟ್‌ ಫಿಟ್ನೆಸ್‌ ಬಗ್ಗೆ ನಾವು ಅಸೊಯೆಪಟ್ಟುಕೊಳ್ಳುವುದರಿಂದ ಆ ವಿಷಯ ನಮಗೆ ಕಿರಿಕಿರಿ ಉಂಟು ಮಾಡುತ್ತದೆ’ ಎಂದು ನಗುತ್ತಾ ಉತ್ತರಿಸಿದ್ದಾರೆ.

’ವಿರಾಟ್‌ ಪ್ರತಿದಿನ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತಾನೆ. ವಿರಾಟ್‌ನಂತೆ ಜಿಮ್‌ಗೆ ಹೋಗಲು ನನಗೆ ಸಾಧ್ಯವಿಲ್ಲ. ಆತನಿಗಿರುವ ಶ್ರದ್ಧೆ ನೋಡಿದರೆ ನಮಗೆ ನಮ್ಮ ಬಗ್ಗೆಯೇ ಕೆಟ್ಟ ಅಭಿಪ್ರಾಯ ಮೂಡುತ್ತದೆ‘ ಎಂದು ಹೇಳಿದ್ದಾರೆ.

’ಅತ್ಯುತ್ತಮ ಕ್ರೀಡಾಪಟುಗಳಲ್ಲಿ ವಿರಾಟ್‌ ಕೊಹ್ಲಿ ಕೂಡ ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಬಿಡುವಿನ ಸಮಯದಲ್ಲಿ ವಿರಾಟ್‌ ತಮ್ಮ ವರ್ಕೌಟ್‌ ಮತ್ತು ಆಹಾರ ಅಭ್ಯಾಸಗಳ ಬಗ್ಗೆ ಹೇಳುತ್ತಿರುತ್ತಾರೆ’ ಎಂದು ಎಬಿಡಿ ತಮ್ಮ ಗೆಳಯನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT