ಆದಿತ್ಯ ವರ್ಮಾ ಪುತ್ರ ಅಮಾನತು

7

ಆದಿತ್ಯ ವರ್ಮಾ ಪುತ್ರ ಅಮಾನತು

Published:
Updated:

ನವದೆಹಲಿ: ಅನುಮತಿ ಇಲ್ಲದೆ ಹೈದರಾಬಾದ್ ಕ್ರಿಕೆಟ್ ಲೀಗ್‌ನಲ್ಲಿ (ಎಚ್‌ಸಿಎಲ್‌) ಆಡಿದ ಆರೋಪದ ಮೇಲೆ ಬಿಹಾರ ಕ್ರಿಕೆಟ್‌ ಸಂಸ್ಥೆಯು ಯುವ ಆಟಗಾರ ಲಖನ್ ರಾಜಾ ಅವರನ್ನು ಎರಡು ವರ್ಷಗಳಿಗೆ ಅಮಾನತು ಮಾಡಿದೆ. ಲಖನ್ ಅವರು ಐಪಿಎಲ್‌ ಭ್ರಷ್ಟಾಚಾರಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಆದಿತ್ಯ ವರ್ಮಾ ಅವರ ಪುತ್ರ.

ಬಿಹಾರ ತಂಡದ ಆಟಗಾರನಾಗಿರುವ ಲಖನ್‌ ಅವರು ಎಚ್‌ಸಿಎಲ್‌ನಲ್ಲಿ ಆಡಲು ನಿರಾಕ್ಷೇಪಣಾ ಪತ್ರಕ್ಕಾಗಿ ಮನವಿ ಸಲ್ಲಿಸಿದ್ದರು. ಆದರೆ ನಿರಾಕ್ಷೇಪಣಾ ಪತ್ರದ ಬದಲು ಅಮಾನತು ಪತ್ರ ಅವರ ಕೈ ಸೇರಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆದಿತ್ಯ ವರ್ಮಾ ‘ವೈಯಕ್ತಿಕ ದ್ವೇಷ ತೀರಿಸಲು ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ರವಿಶಂಕರ್‌ ಪ್ರಸಾದ್‌ ನನ್ನ ಮಗನನ್ನು ಬಲಿಪಶು ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ. ವರ್ಮಾ ಅವರು ಬಿಹಾರದ ಅನಧಿಕೃತ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.

‘ಎಚ್‌ಸಿಎಲ್‌ನಲ್ಲಿ ಲಖನ್‌ ಇಂಡಿಯಾ ಸಿಮೆಂಟ್ಸ್ ತಂಡದ ಪರ ಆಡಿದ್ದರು. ಕಾರಣ ಕೇಳಿ ನೋಟಿಸ್ ಕೂಡ ಕೊಡದೆ ಅವನಿಗೆ ನೇರವಾಗಿ ಅಮಾನತು ಪತ್ರ ನೀಡಲಾಗಿದೆ. ಈ ಕುರಿತು ಈಗಾಗಲೇ ದೂರು ದಾಖಲಿಸಿದ್ದೇನೆ’ ಎಂದು ಆದಿತ್ಯ ವರ್ಮಾ ಹೇಳಿದರು.

ಬಿಸಿಸಿಐಗೆ ಮನವಿ ಸಲ್ಲಿಸಿದಾಗ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಅವರು ರಾಜ್ಯ ಸಂಸ್ಥೆಯ ಅನುಮತಿ ಇದ್ದರೆ ಸಾಕು ಎಂದು ತಿಳಿಸಿದ್ದರು. ಆದರೆ ರಾಜ್ಯ ಸಂಸ್ಥೆಯ ಜೊತೆ ಅಥವಾ ಬಿಸಿಸಿಐನ ಅನುಮತಿ ಇಲ್ಲದೆ ನಡೆಯುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ಇಲ್ಲ ಎಂದು ರಾಜ್ಯ ಸಂಸ್ಥೆ ತಿಳಿಸಿತ್ತು ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !