ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಅಫ್ಗಾನಿಸ್ತಾನ ಕೈ ಹಿಡಿದ ‘ಡಕ್ವರ್ಥ್ ಲೂಯಿಸ್ ನಿಯಮ

Published:
Updated:
Prajavani

ಎಡಿನ್‌ಬರ್ಗ್‌ : ರಮಹತ್‌ ಶಾ (113, 11 ಬೌಂಡರಿ, 2 ಸಿಕ್ಸರ್‌) ಶತಕದ ಮೂಲಕ ಮಿಂಚಿದರು. ಹಶ್ಮತ್‌ ಉಲ್ಲಾ ಶಾಹಿದಿ, ಮೊಹಮ್ಮದ್‌ ಶಹಜಾದ್‌ ಅವರ ಅರ್ಧಶತಕಗಳ ಸಹಾಯದಿಂದ ಅಫ್ಗಾನಿಸ್ತಾನ ತಂಡ ಸ್ಕಾಟ್ಲೆಂಡ್‌ ತಂಡವನ್ನು ಮಣಿಸಿದೆ. ಮಳೆಬಾಧಿತ ಏಕದಿನ ಪಂದ್ಯದಲ್ಲಿ ಎರಡು ರನ್‌ಗಳಿ‌ಂದ ಅಫ್ಗಾನಿಸ್ತಾನ ತಂಡ ಜಯದ ನಗೆ ಬೀರಿತು.

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ ಏಳು ವಿಕೆಟ್‌ಗೆ 325 ರನ್ ಗಳಿಸಿತು. ತಂಡದ ಪರ ಕಾಲಮ್‌ ಮೆಕ್‌ಲಿಯೊಡ್‌ ಶತಕ (100; 89 ಎಸೆತ, 1 ಸಿಕ್ಸರ್‌, 10 ಬೌಂಡರಿ) ಸಿಡಿಸಿದರು. ನಾಯಕ ಕೈಲ್‌ ಕೊಯಿಟ್ಜರ್‌ 79 ರನ್‌ (98 ಎಸೆತ; 12 ಬೌಂಡರಿ) ಕೊಡುಗೆ ನೀಡಿದರು.

ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ ತಂಡ 44.5 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 269 ರನ್‌ ಗಳಿಸಿತ್ತು. ಈ ವೇಳೆ ಮಳೆ ಸುರಿಯತೊಡಗಿತು. ಹೀಗಾಗಿ ಡಕ್ವರ್ಥ್‌–ಲೂಯಿಸ್‌ ನಿಯಮದಡಿ ಅಫ್ಗಾನಿಸ್ತಾನವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ವೇಳೆ ಹಷ್ಮತ್ ಉಲ್ಲಾ ಶಾಹಿದಿ ಅಜೇಯ 59 ರನ್‌ ಗಳಿಸಿದ್ದರು. 

ಸಂಕ್ಷಿಪ್ತ ಸ್ಕೋರ್‌
ಸ್ಕಾಟ್ಲೆಂಡ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ  325 (ಮೆಕ್‌ಲಿಯೊಡ್‌ 100, ಕೊಯಿಟ್ಜರ್‌ 79);
ಅಫ್ಗಾನಿಸ್ತಾನ: 44.5 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 269 (ರಹಮತ್‌ 113, ಹಶ್ಮತ್‌ ಉಲ್ಲಾ ಅಜೇಯ 59).
ಫಲಿತಾಂಶ: ಅಫ್ಗಾನಿಸ್ತಾನಕ್ಕೆ ಡಕ್ವರ್ಥ್ ಲೂಯಿಸ್‌ ನಿಯಮದಡಿ ಎರಡು ರನ್‌ಗಳ ಜಯ.

Post Comments (+)