ವಿರಾಟ್ ಕೊಹ್ಲಿ ವೆಬ್‌ಸೈಟ್ ಹ್ಯಾಕ್

7

ವಿರಾಟ್ ಕೊಹ್ಲಿ ವೆಬ್‌ಸೈಟ್ ಹ್ಯಾಕ್

Published:
Updated:

ಢಾಕಾ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಸೋತಿದ್ದ ಬಾಂಗ್ಲಾದೇಶದ ಕೆಲವರು  ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅವರ ಜಾಲತಾಣಕ್ಕೆ ಕನ್ನ ಹಾಕಿ ದ್ದಾರೆ.

ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಶತಕ ಬಾರಿಸಿದ್ದರು. ಆದರೆ  ಅವರು ಸ್ಟಂಪ್ಡ್‌ ಔಟಾಗಿದ್ದರು. ಆ ಕುರಿತು ಅಂಪೈರ್ ನೀಡಿದ್ದ ತೀರ್ಪು ಬಾಂಗ್ಲಾ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿತ್ತು.ಅಂಪೈರ್ ತೀರ್ಪಿನ ವಿರುದ್ಧ ಹೋರಾ ಡಲು ಬಾಂಗ್ಲಾದೇಶ ಅಭಿಮಾನಿಗಳು ವಿರಾಟ್ ಕೊಹ್ಲಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ ಎಂದು ’ಢಾಕಾ ಟ್ರಿಬ್ಯೂನ್’ ಸುದ್ದಿ ಜಾಲತಾಣವು ವರದಿ ಮಾಡಿದೆ. 

ಬಾಂಗ್ಲಾದ ಸೈಬರ್ ಸೆಕ್ಯೂರಿಟಿ ಹಾಗೂ ಇಂಟೆಲಿಜೆನ್ಸ್(CSI) ಎಂಬ ಸಂಸ್ಥೆಯು ಈ ಕನ್ನ ಹಾಕಿದೆ ಎಂದು ವರದಿಯಾಗಿದೆ. ‘ಸಭ್ಯರ ಆಟದಲ್ಲಿ ಇಂತಹ ತೀರ್ಪುಗಳು ಸಹನೀಯವಲ್ಲ.

ಈ ತಪ್ಪು ತೀರ್ಪಿಗೆ ಕ್ಷಮೆ ಕೇಳಬೇಕು’ ಎಂದು ಸಂದೇಶ ಹಾಕಲಾಗಿದೆ. 

2015ರ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾಗೆ ನೋ ಬಾಲ್ ನೀಡಿ ಔಟ್‌ನಿಂದ ಬಚಾವ್ ಮಾಡಿದ್ದಾರೆ ಎಂದು ಆರೋಪಿಸಿ ಬಾಂಗ್ಲಾ ಅಭಿಮಾನಿಗಳು ಹೋರಾಟ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !