ಬೆಂಗಳೂರು: ಆಗ್ನೇಷ್ ಕೆಲೆಟಿಗೆ ಈಗ 100ರ ಸಂಭ್ರಮ. ಪ್ರಸ್ತುತ ಬದುಕಿರುವ ಒಲಿಂಪಿಯನ್ ಕ್ರೀಡಾಪಟುಗಳಲ್ಲಿ ಅತ್ಯಂತ ಹಿರಿಯ ವಯಸ್ಸಿನವರು.

ಈ ಸುದೀರ್ಘ ಜೀವನದಲ್ಲಿ ಅವರ ಮನದಲ್ಲಿ ಮಡುಗಟ್ಟಿದ ನೋವುಗಳಿಗೆ ಲೆಕ್ಕವಿಲ್ಲ. ಎದುರಿಸಿದ ಸವಾಲುಗಳು ಒಂದೆರಡಲ್ಲ. ಮಹಾಯುದ್ಧದ ಭೀಕ ರತೆ, ಧರ್ಮ ಸಂಘರ್ಷದ ಕಾವು, ದೇಶಾಂತರದ ನೋವು ಉಂಡರು. ಆದರೆ, ಅವೆಲ್ಲವನ್ನೂ ದಾಟಿಕೊಂಡೇ ಸಾಧನೆಯ ಶಿಖರ ಏರಿದರು.

ನಾಲ್ಕನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್ ಕಲಿಯಲು ಆರಂಭಿಸಿದ ಕೆಲೆಟಿ ಒಲಿಂಪಿ ಕ್ಸ್ನ ಅಪ್ರತಿಮ ಜಿಮ್ನಾಸ್ಟ್ಗಳಲ್ಲಿ ಅಗ್ರ ಗಣ್ಯರು. ಹಂಗರಿಯ ಬುಡಾಪೆಸ್ಟ್ನಲ್ಲಿ ಜೂಯಿಷ್ ಕುಟುಂಬದಲ್ಲಿ ಜನಿಸಿದ ಆಗ್ನೇಷ್ ನಾಲ್ಕನೇ ವಯಸ್ಸಿನಲ್ಲಿ ಜಿಮ್ನಾ ಸ್ಟಿಕ್ಸ್ ಕಲಿಕೆ ಆರಂಭಿಸಿದರು. ಒಲಿಂಪಿ ಕ್ಸ್ನಲ್ಲಿ ಐದು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದು ದಾಖಲೆ ಬರೆದರು. ಟೋಕಿಯೊದಲ್ಲಿ ಅವರನ್ನು ಗೌರವಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.