ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಅಗರ್ಕರ್?

Published 28 ಜೂನ್ 2023, 23:47 IST
Last Updated 28 ಜೂನ್ 2023, 23:47 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನಕ್ಕಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರ ಹೆಸರು ಮುಂಚೂಣಿಯಲ್ಲಿದೆ.

ಚೇತನ್ ಶರ್ಮಾ ಅವರ ವಿವಾದಾತ್ಮಕ ನಿರ್ಗಮನದ ನಂತರ ಮುಖ್ಯಸ್ಥರ ಸ್ಥಾನ ಖಾಲಿ ಉಳಿದಿದೆ. ಈ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿತ್ತು. ಜೂನ್ 30 ಕೊನೆಯ ದಿನವಾಗಿದೆ. ಜುಲೈ 1ರಂದು ಅಭ್ಯರ್ಥಿಗಳ ಸಂದರ್ಶನವನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನಡೆಸಲಿದೆ.

‘ಭಾರತ ತಂಡಕ್ಕೆ ಸಮರ್ಥ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಿರುವವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು‘ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಒಂದೊಮ್ಮೆ ಅಜಿತ್ ಅವರು ಆಯ್ಕೆಯಾದರೆ ಪಶ್ಚಿಮ ವಲಯದಿಂದ ಇಬ್ಬರು ಸದಸ್ಯರಾಗುತ್ತಾರೆ. ಸಲೀಲ್ ಅಂಕೋಲಾ ಈಗಾಗಲೇ ಸಮಿತಿಯಲ್ಲಿದ್ದಾರೆ.

45 ವರ್ಷದ ಅಜಿತ್ ಭಾರತ ತಂಡದಲ್ಲಿ 26 ಟೆಸ್ಟ್, 191 ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ. ಈಚೆಗೆ ಮುಗಿದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಬಳಗದಲ್ಲಿದ್ದರು.

ಮಹಿಳಾ ತಂಡಕ್ಕೆ ಕೋಚ್ ಆಯ್ಕೆ

ಭಾರತ ಮಹಿಳಾ ತಂಡಕ್ಕೆ ಶುಕ್ರವಾರ ಮುಖ್ಯ ತರಬೇತುದಾರರನ್ನು ನೇಮಕ ಮಾಡುವ ನಿರೀಕ್ಷೆ ಇದೆ.

ಮುಂಬೈನ ಅಮೋಲ್ ಮುಜುಂದಾರ್ ಮತ್ತು ತುಷಾರ್ ಅರೋತೆ ಅವರು ಈ ಸ್ಥಾನ ಪಡೆಯುವ  ಸ್ಪರ್ಧೆಯಲ್ಲಿದ್ದಾರೆ.

ಅಮೋಲ್ ಅವರು ಬರೋಡಾ ತಂಡದ ಕೋಚ್ ಆಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅವರು ಈಚೆಗೆ ರಾಜಸ್ಥಾನ್ ರಾಯಲ್ಸ್ ಮತ್ತು ದಕ್ಷಿಣ ಆಫ್ರಿಕಾದ ತಂಡದಲ್ಲಿಯೂ ಕಾರ್ಯನಿರ್ವಹಿಸಿದ್ದರು.

ಮಹಿಳಾ ತಂಡದ ಕೋಚ್ ಹುದ್ದೆಗೆ ಇಂಗ್ಲೆಂಡ್‌ನ ಜಾನ್ ಲೂಯಿಸ್ ಕೂಡ ಅರ್ಜಿ ಹಾಕಿದ್ದಾರೆನ್ನಲಾಗಿದೆ.

ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಹಾಗೂ ಸುಲಕ್ಷಣಾ ನಾಯಕ ಅವರಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಯು ಅಭ್ಯರ್ಥಿಗಳ ಸಂದರ್ಶನವನ್ನು ಶುಕ್ರವಾರ ನಡೆಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT