ಗುರುವಾರ , ಡಿಸೆಂಬರ್ 5, 2019
20 °C
ಮುಂಬೈ: ಹ್ಯಾರಿಸ್‌ ಶೀಲ್ಡ್‌ ಟೂರ್ನಿ

ಕ್ರಿಕೆಟ್ ಲೋಕದ ವಿರಳಾತಿವಿರಳ ಪ್ರಸಂಗ: ಖಾತೆ ತೆರೆಯದೆ ಔಟ್ ಆದ ತಂಡ!

Published:
Updated:

ಮುಂಬೈ : ತಂಡದ ಎಲ್ಲ ಹತ್ತೂ ಆಟಗಾರರು ಸೊನ್ನೆಗೇ ಔಟಾದರೆ.....

ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಹ್ಯಾರಿಸ್‌ ಶೀಲ್ಡ್‌ 16 ವರ್ಷದೊಳಗಿನವರ ಅಂತರ ಶಾಲಾ ಕ್ರಿಕೆಟ್ ಟೂರ್ನಿಯು ಗುರುವಾರ ಅಂಥ ಒಂದು ವಿರಳಾತಿವಿರಳ ಪ್ರಸಂಗಕ್ಕೆ ಸಾಕ್ಷಿಯಾಯಿತು. 

ಬೊರಿವಿಲಿಯ ಪ್ರಬಲ ತಂಡ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಷನಲ್‌ ಶಾಲೆಯ ಎದುರು, ಅಂಧೇರಿಯ ಚಿಲ್ಡ್ರನ್ಸ್‌ ವೆಲ್‌ಫೇರ್‌ ಸೆಂಟರ್‌ ಶಾಲೆಯ ಎಲ್ಲ ಆಟಗಾರರು ಖಾತೆ ತೆರೆಯುವ ಮೊದಲೇ ಔಟ್‌ ಆದರು.

ಆದರೆ ವಿವೇಕಾನಂದ ಶಾಲೆಯ ಬೌಲರ್‌ಗಳು ಒಂದು ಬೈ, ಆರು ವೈಡ್‌ಗಳನ್ನು ಹಾಕಿದ ಕಾರಣ ಸೊನ್ನೆಗೇ ಆಲೌಟ್‌ ಆಗುವ ಮುಖಭಂಗ ತಪ್ಪಿ ಏಳು ರನ್‌ಗಳು ದಕ್ಕಿದವು!

ಈ ಪಂದ್ಯವನ್ನು ಸ್ವಾಮಿ ವಿವೇಕಾನಂದ ತಂಡ 754 ರನ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿತು. ಅಲೋಕ್‌ ಪಾಲ್‌ ಮೂರು ರನ್ನಿಗೆ ಆರು ವಿಕೆಟ್‌ ಪಡೆದರೆ, ವರದ್‌ ವಾಝೆ ಮೂರು ರನ್ನಿಗೆ 2 ವಿಕೆಟ್‌ ಪಡೆದರು. 

ಇದಕ್ಕೆ ಮೊದಲು ಸ್ವಾಮಿ ವಿವೇಕಾನಂದ ಶಾಲೆ ನಿಗದಿತ 45 ಓವರುಗಳಲ್ಲಿ 4 ವಿಕೆಟ್‌ಗೆ 761 ರನ್‌ ಗಳಿಸಿತ್ತು. ಮೀತ್‌ ಮಾಯೇಕರ್‌ ಕೇವಲ 134 ಎಸೆತಗಳಲ್ಲಿ 338 ರನ್‌ ಸೂರೆ ಮಾಡಿದ್ದರು.

126 ವರ್ಷಗಳ ಇತಿಹಾಸವಿರುವ ಈ ಟೂರ್ನಿಯ ಮೂಲಕ ಈ ಹಿಂದೆ ಸಾಕಷ್ಟು ಆಟಗಾರರು ರಣಜಿ ಮತ್ತು ರಾಷ್ಟ್ರೀಯ ತಂಡಕ್ಕೆ ಆಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು