ಮಂಗಳವಾರ, ಡಿಸೆಂಬರ್ 1, 2020
17 °C

ನಟಿ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ ಚಿತ್ರ ಸೆರೆಹಿಡಿದಿದ್ದು ಎಬಿ ಡಿವಿಲಿಯರ್ಸ್!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್ 2020) ವಿರಾಟ್ ಕೊಹ್ಲಿ ದುಬೈನಲ್ಲಿದ್ದು, ಮಗುವಿನ ನಿರೀಕ್ಷೆಯಲ್ಲಿರುವ ಪತ್ನಿ ಅನುಷ್ಕಾ ಶರ್ಮಾ ಕೂಡ ಅವರೊಂದಿಗಿದ್ದಾರೆ.

ಭಾನುವಾರ, ಅನುಷ್ಕಾ ಶರ್ಮಾರೊಂದಿಗೆ ಸಮಯ ಕಳೆಯುತ್ತಿರುವ ಫೋಟೊವೊಂದನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಕೃಪೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರಿಗೆ ನೀಡಿದ್ದಾರೆ. 

ಹೃದಯದ ಚಿಹ್ನೆ ಮತ್ತು ಸೂರ್ಯಾಸ್ತದ ಎಮೋಜಿಯೊಂದಿಗೆ ಕೊಹ್ಲಿ ಸರಳವಾಗಿ ಕ್ಯಾಪ್ಶನ್ ನೀಡಿದ್ದಾರೆ. ಫೋಟೊಗೆ ಈವರೆಗೂ 4.9 ಲಕ್ಷ ಜನರು ಲೈಕ್ ಮಾಡಿದ್ದು, ಎಬಿ ಡಿವಿಲಿಯರ್ಸ್ ಕೂಡ ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ. 

 
 
 
 

 
 
 
 
 
 
 
 
 

❤️🌅 pic credit - @abdevilliers17 😃

A post shared by Virat Kohli (@virat.kohli) on

ಅನುಷ್ಕಾ ಮತ್ತು ವಿರಾಟ್ ಈ ವರ್ಷದ ಆಗಸ್ಟ್‌ನಲ್ಲಿ ತಮ್ಮ ಮನೆಗೆ ಮಗು ಬರುತ್ತಿರುವುದಾಗಿ ಘೋಷಿಸಿದ್ದರು. 'ಇನ್ಮುಂದೆ ನಾವು ಮೂವರು! ಜನವರಿ 2021ಕ್ಕೆ ಹೊಸ ಸದಸ್ಯ ಬರಲಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಅನುಷ್ಕಾ, ವಿರಾಟ್ ಕೊಹ್ಲಿಯೊಂದಿಗಿನ ಫೋಟೊ ಟ್ವೀಟಿಸಿದ್ದರು.

ಇದನ್ನೂ ಓದಿ: 

2017 ಡಿಸೆಂಬರ್‌ನಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಅನುಷ್ಕಾ ಶರ್ಮಾ 2018ರಲ್ಲಿ ಜೀರೊ ಚಿತ್ರದಲ್ಲಿ ನಟಿಸಿದ್ದು ಆ ನಂತರ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಪಾತಾಳ್ ಲೋಕ್ ಮತ್ತು ಬುಲ್‌ಬುಲ್ ವೆಬ್ ಸರಣಿಯಲ್ಲಿ ಅನುಷ್ಕಾ ನಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು