ಬುಧವಾರ, ಸೆಪ್ಟೆಂಬರ್ 18, 2019
28 °C

ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ ದಿಟ್ಟ ಹೋರಾಟ

Published:
Updated:

ಲೀಡ್ಸ್‌: ಇಂಗ್ಲೆಂಡ್‌ ನಾಯಕ ಜೋ ರೂಟ್‌ (ಬ್ಯಾಟಿಂಗ್‌ 75; 189ಎ, 7ಬೌಂ) ಮತ್ತು ಜೋ ಡೆನ್ಲಿ (50; 155ಎ, 8ಬೌಂ), ಆ್ಯಷನ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮೂರೇ ದಿನಗಳಲ್ಲಿ ಆತಿಥೇಯ ತಂಡ ಸೋಲದಂತೆ ನೋಡಿಕೊಂಡರು.

ಹೆಡ್ಡಿಂಗ್ಲೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಶನಿವಾರ ಇಂಗ್ಲೆಂಡ್‌ ತಂಡದ ಗೆಲುವಿಗೆ 359 ರನ್‌ಗಳ ಗುರಿ ನಿಗದಿಪಡಿಸಿತು. ದಿನ ದಾಟದ ಅಂತ್ಯಕ್ಕೆ ರೂಟ್‌ ಪಡೆ 72 ಓವರ್‌ಗಳಲ್ಲಿ 3 ವಿಕೆಟ್‌ಗೆ 156ರನ್‌ ಗಳಿಸಿತು. ಊಟದ ವಿರಾಮದ ನಂತರ ತಂಡದ ಮೊತ್ತ 15 ರನ್‌ಗಳಾಗುವಷ್ಟರಲ್ಲೇ ಆರಂಭ ಆಟಗಾರರಾದ ಜೇಸನ್‌ ರಾಯ್‌ (8) ಮತ್ತು ರೋರಿ ಬರ್ನ್ಸ್‌  (7) ಪೆವಿಲಿಯನ್‌ಗೆ ಮರಳಿದರು. ಹೀಗಾಗಿ ಇಂಗ್ಲೆಂಡ್‌ ಮತ್ತೊಮ್ಮೆ ಕುಸಿ ಯುವ ಆತಂಕ ಎದುರಿಸಿತ್ತು.

ರೂಟ್‌ ಮತ್ತು ಡೆನ್ಲಿ  ಮೂರನೇ ವಿಕೆಟ್‌ಗೆ 126 ರನ್‌ ಸೇರಿಸಿ ಪ್ರತಿರೋಧ ಪ್ರದರ್ಶಿಸಿದರು. ಜೋಶ್‌ ಹೇಜಲ್‌ವುಡ್‌ ಬೌಲಿಂಗ್‌ನಲ್ಲಿ ರೂಟ್‌ ಹುಕ್‌ ಮಾಡಿ ಬೌಂಡರಿ ಗಳಿಸಿದಂತೆ ಜೊತೆಯಾಟ 50 ರನ್‌ ದಾಟಿತು. ಆಗ ಕ್ರೀಡಾಂಗಣದಲ್ಲಿ ದೊಡ್ಡ ಹರ್ಷೋದ್ಗಾರ ಕೇಳಿಬಂತು.

ಎರಡು ದಿನಗಳ ಆಟ ಉಳಿದಿದ್ದು, ಇಂಗ್ಲೆಂಡ್‌ ತಂಡ ಇನ್ನು 203ರನ್‌ ಗಳಿಸಬೇಕಿದೆ. ಐದು ಟೆಸ್ಟ್‌ಗಳ ಸರಣಿ ಯಲ್ಲಿ ಪ್ರವಾಸಿ ತಂಡ 1–0 ಮುನ್ನಡೆಯಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 67 ರನ್‌ಗಳಿಗೆ ಪತನಗೊಂಡಿತ್ತು. ಇದು 1948ರ ನಂತರ ಆ್ಯಷಸ್‌ ಸರಣಿಯಲ್ಲಿ  ಇಂಗ್ಲೆಂಡ್‌ ತಂಡದ ಕನಿಷ್ಠ ಮೊತ್ತವಾಗಿತ್ತು. ಇದಕ್ಕೆ ಮೊದಲು ಶುಕ್ರವಾರ 171 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಎರ ಡನೇ ಇನಿಂಗ್ಸ್‌ ಆಟ 246 ರನ್‌ಗಳ ವರೆಗೆ ಬೆಳೆಯಿತು. ಲಾಬುಚಾನ್‌ 80 ರನ್‌ ಗಳಿಸಿದರು. ಇದು, ಇಂಗ್ಲೆಂಡ್‌ ತಂಡದ ಮೊದಲ ಇನಿಂಗ್ಸ್‌ಗಿಂತ ಏಳು ರನ್‌ ಹೆಚ್ಚು!.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌; 52.1 ಓವರ್‌ಗಳಲ್ಲಿ 179 ಮತ್ತು 75.2 ಓವರ್‌ಗಳಲ್ಲಿ 246 (ಮಾರ್ನಸ್‌ ಲಾಬುಚಾನ್‌ 80, ಜೇಮ್ಸ್‌ ಪ್ಯಾಟಿನ್ಸನ್‌ 20; ಜೋಫ್ರಾ ಆರ್ಚರ್‌ 40ಕ್ಕೆ2, ಸ್ಟುವರ್ಟ್‌ ಬ್ರಾಡ್‌ 52ಕ್ಕೆ2, ಕ್ರಿಸ್‌ ವೋಕ್ಸ್‌ 34ಕ್ಕೆ1, ಜ್ಯಾಕ್‌ ಲೀಚ್‌ 46ಕ್ಕೆ1, ಬೆನ್‌ ಸ್ಟೋಕ್ಸ್‌ 56ಕ್ಕೆ3); ಇಂಗ್ಲೆಂಡ್‌: ಮೊದಲ ಇನಿಂಗ್ಸ್‌; 27.5 ಓವರ್‌ಗಳಲ್ಲಿ 67 ಮತ್ತು 72 ಓವರುಗಳಲ್ಲಿ 3 ವಿಕೆಟ್‌ಗೆ 156 (ಜೋ ರೂಟ್‌ ಬ್ಯಾಟಿಂಗ್‌ 75, ಜೋ ಡೆನ್ಲಿ 50, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 2; ಪ್ಯಾಟ್‌ ಕಮಿನ್ಸ್‌ 33ಕ್ಕೆ1, ಜೋಶ್‌ ಹೇಜಲ್‌ವುಡ್‌ 35ಕ್ಕೆ2).

Post Comments (+)