ಮೆಲ್ಬರ್ನ್: ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್ (ಬಾಕ್ಸಿಂಗ್ ಡೇ) ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ 22 ವರ್ಷ ವಯಸ್ಸಿನ ಬ್ಯಾಟಿಂಗ್ ಆಲ್ರೌಂಡರ್ ಜೇಕಬ್ ಬೆಥೆಲ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾಗೂ ಐಪಿಎಲ್ಗೆ ಧನ್ಯವಾದ ಅರ್ಪಿಸಿದ್ದಾರೆ.

ಐಪಿಎಲ್ನಲ್ಲಿ ಆರ್ಸಿಬಿ ಜೊತೆಗಿನ ಅನುಭವವು ಆ್ಯಷಸ್ ಸರಣಿಯ ಪದಾರ್ಪಣೆ ಪಂದ್ಯದ ಒತ್ತಡ ನಿಭಾಯಿಸುವಲ್ಲಿ ನೆರವಾಯಿತು ಎಂದಿದ್ದಾರೆ.

‘ಪಂದ್ಯದಲ್ಲಿ ಕಣಕ್ಕಿಳಿಯುವಾಗ ಅಂಜಿಕೆ ಇತ್ತು. ಆದರೆ, ಐಪಿಎಲ್ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾವಿರಾರು ಜನರ ಎದುರು ಆಡಿದ್ದ ಅನುಭವವು ಧೈರ್ಯ ತುಂಬಿತು’ ಎಂದು ಬೆಥೆಲ್ ‘ಇಎಸ್ಪಿಎನ್ ಕ್ರಿಕ್ಇನ್ಫೊ’ಗೆ ಹೇಳಿದ್ದಾರೆ.

3–0ಯಿಂದ ಸರಣಿ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡವು ಮೆಲ್ಬರ್ನ್ನಲ್ಲಿ ನಡೆದ ನಾಲ್ಕನೇ ಪಂದ್ಯವನ್ನು ನಾಲ್ಕು ವಿಕೆಟ್ಗಳಿಂದ ಜಯಿಸಿತ್ತು. ಗೆಲುವಿಗೆ 175 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ಗೆ ಬೆಥೆಲ್ ಅವರು 46 ಎಸೆತಗಳಲ್ಲಿ 40 ರನ್ ಬಾರಿಸಿ ಆಸರೆಯಾಗಿದ್ದರು.

ಬೆಥೆಲ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ 55 ರನ್ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.