ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಟ್‌ ಕಮಿನ್ಸ್‌ ಮಿಂಚು: ಎರಡನೇ ಇನಿಂಗ್ಸ್‌ನಲ್ಲಿ ಭಾರತಕ್ಕೆ ಆರಂಭಿಕ ಆಘಾತ

Last Updated 28 ಡಿಸೆಂಬರ್ 2018, 10:34 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತ 54 ರನ್‌ಗಳಿಗೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದೆ.

ಎರಡನೇ ದಿನದಾಟವಾದ ಗುರುವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 443 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 151 ರನ್‌ಗಳಿಗೆ ಆಲೌಟ್‌ ಆಯಿತ್ತು. ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಜಸ್‌ಪ್ರೀತ್‌ ಬೂಮ್ರಾ 6 ವಿಕೆಟ್‌ ಕಬಳಿಸಿದರು.ಈ ಮೂಲಕ ಆಸಿಸ್‌ ಪಡೆ 292 ರನ್‌ಗಳ ಹಿನ್ನೆಡೆ ಅನುಭವಿಸಿತ್ತು.

ಶುಕ್ರವಾರ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಪ್ಯಾಟ್‌ ಕಮಿನ್ಸ್‌ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಲವಾದ ಪೆಟ್ಟು ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 8 ರನ್‌ ಗಳಿಸಿದ್ದ ಹನುಮ ವಿಹಾರಿ, ಕೇವಲ 13 ರನ್‌ ಗಳಿಸಿದರು. ಜೊತೆಗೆ, ಚೇತೇಶ್ವರ್‌ ಪೂಜಾರ ಹಾಗೂ ನಾಯಕ ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟ್‌ ಆದರು. ಬಳಿಕ ಕ್ರೀಸ್‌ಗೆ ಬಂದ ರಹಾನೆ (1), ರೋಹಿತ್‌ ಶರ್ಮಾ (5) ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ತಾಳ್ಮೆಯ ಆಟಕ್ಕೆ ಮೋರೆ ಹೋದಮಯಂಕ್‌ ಆಗರ್‌ವಾಲ್‌(28*), ರಿಷಭ್‌ ಪಂತ್‌ (6*) ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಒಟ್ಟಾರೆ ಭಾರತ 346 ರನ್‌ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT