ಶನಿವಾರ, ಡಿಸೆಂಬರ್ 7, 2019
25 °C

Australia VS Pakistan ಟೆಸ್ಟ್‌: ಯಾಸಿರ್ ಶತಕ

Published:
Updated:
Prajavani

ಅಡಿಲೇಡ್: ಮೂರನೇ ದಿನವೂ ಆಧಿಪತ್ಯ ಮುಂದುವರಿಸಿದ ಆಸ್ಟ್ರೇಲಿಯಾದ ಎದುರು ಪರದಾಡಿದ ಪಾಕಿಸ್ತಾನ ತಂಡ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಇನಿಂಗ್ಸ್ ಸೋಲಿನ ಭೀತಿಯಲ್ಲಿದ್ದಾಗಲೇ ಮಳೆ ಸುರಿಯಿತು.

ದಿನದಾಟವನ್ನು ನಿಗದಿಗಿಂತ ಮೊದಲೇ ಮುಕ್ತಾಯಗೊಳಿಸಿದಾಗ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ತಂಡ ಇನ್ನೂ 248 ರನ್‌ಗಳ ಹಿನ್ನಡೆಯಲ್ಲಿದೆ.

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನವು ಲೆಗ್ ಸ್ಪಿನ್ನರ್ ಯಾಸಿರ್ ಶಾ (113; 213 ಎಸೆತ, 13 ಬೌಂಡರಿ) ಅವರ ಚೊಚ್ಚಲ ಶತಕ ಮತ್ತು ಬಾಬರ್ ಆಜಂ ಅವರ 97 ರನ್‌ಗಳ ನೆರವಿನಿಂದ 302 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ಆಸ್ಟ್ರೇಲಿಯಾ: 3ಕ್ಕೆ 589 ಡಿಕ್ಲೇರ್; ಪಾಕಿಸ್ತಾನ (ಶನಿವಾರ 6ಕ್ಕೆ 96): 94.4 ಓವರ್‌ಗಳಲ್ಲಿ 302 (ಬಾಬರ್ ಆಜಂ 97, ಯಾಸಿರ್ ಶಾ 113, ಮೊಹಮ್ಮದ್ ಅಬ್ಬಾಸ್ 29; ಮಿಷೆಲ್ ಸ್ಟಾರ್ಕ್ 66ಕ್ಕೆ6, ಪ್ಯಾಟ್ ಕಮಿನ್ಸ್ 83ಕ್ಕೆ3); ಎರಡನೇ ಇನಿಂಗ್ಸ್‌: ಪಾಕಿಸ್ತಾನ (ಫಾಲೊ ಆನ್): 16.5 ಓವರ್‌ಗಳಲ್ಲಿ 3ಕ್ಕೆ 39 (ಮಿಷೆಲ್ ಸ್ಟಾರ್ಕ್‌ 10ಕ್ಕೆ1, ಜೋಶ್ ಹ್ಯಾಜಲ್‌ವುಡ್ 15ಕ್ಕೆ2).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು