ಶುಕ್ರವಾರ, ಆಗಸ್ಟ್ 19, 2022
27 °C

IND vs AUS | ಬೌಲರ್‌ಗಳಿಗೆ ಶ್ರೇಯ ಸಲ್ಲಬೇಕು: ಗಾವಸ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್: ಟೆಸ್ಟ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ಟೀಕಿಸುವ ಭರದಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಅಮೋಘ ಸಾಧನೆಯನ್ನು ಕಡೆಗಣಿಸಬಾರದು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಶನಿವಾರ ಚಾನೆಲ್ 7 ವಾಹಿನಿಯಲ್ಲಿ ಮಾತನಾಡಿದ ಅವರು, ’ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ಅಮೋಘವಾಗಿತ್ತು‘ ಎಂದಿದ್ದಾರೆ.

’ಕ್ರಿಕೆಟ್ ಆರಂಭವಾದಾಗಿನಿಂದಲೂ ಕನಿಷ್ಠ ಮೊತ್ತಗಳು ಬಹಳಷ್ಟು ಬಾರಿ ದಾಖಲಾಗಿವೆ. ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹಿಂದೆ ಶ್ರೇಷ್ಠ ಬೌಲಿಂಗ್ ಕೂಡ ಇರುತ್ತದೆ‘ ಎಂದು ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು