ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕೀಬ್‌ ಗುಣಗಾನ ಮಾಡಿದ ಜೋಶಿ

Last Updated 25 ಜೂನ್ 2019, 19:07 IST
ಅಕ್ಷರ ಗಾತ್ರ

ಸೌತಾಂಪ್ಟನ್‌ (ಪಿಟಿಐ): ವಿಶ್ವಕಪ್‌ ಟೂರ್ನಿಯಲ್ಲಿ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರ ಅಮೋಘ ಯಶಸ್ಸಿನ ಓಟಕ್ಕೆ ಸಂತಸ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ಸ್ಪಿನ್‌ ಬೌಲಿಂಗ್‌ ಕೋಚ್‌ ಸುನೀಲ್‌ ಜೋಶಿ, ಅವರನ್ನು ಆಟದ ‘ದಂತಕತೆ’ ಎಂದು ಬಣ್ಣಿಸಿದ್ದಾರೆ.

ಅಫ್ಗಾನಿಸ್ತಾನ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 69 ಎಸೆತಗಳಲ್ಲಿ 51 ರನ್‌ ಹೊಡೆದಿದ್ದ ಶಕೀಬ್‌ ನಂತರ ಚೆಂಡಿನಿಂದಲೂ ಚಮತ್ಕಾರ ತೋರಿ 29 ರನ್ನಿಗೆ 5 ವಿಕೆಟ್‌ ಪಡೆದಿದ್ದಾರೆ. ಅಫ್ಗನ್ನರ ವಿರುದ್ಧ ಸ್ಪಿನ್ನರ್‌ಗಳಾದ ಶಕೀಬ್‌, ಮೆಹಿದಿ ಹಸನ್‌ ಮತ್ತು ಮೊಸಾದಿಕ್‌ ಹುಸೇನ್‌ ಅವರ ನಿರ್ವಹಣೆಗೂ ಜೋಶಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಒಬ್ಬ ಸ್ಪಿನ್‌ ಕೋಚ್‌, ಇದಕ್ಕಿಂತ ಹೆಚ್ಚು ನಿರೀಕ್ಷಿಸಲಾಗದು’ ಎಂದು ಭಾರತ ತಂಡದ ಪರ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು (1996ರಿಂದ 2001ರ ಅವಧಿ) ಆಡಿರುವ ಜೋಶಿ ಹೇಳಿದ್ದಾರೆ.

‘ಶಕೀಬ್‌ ದಂತಕತೆಯೇ. ಇದರಲ್ಲಿ ಅನುಮಾನವಿಲ್ಲ. ಬಾಂಗ್ಲಾದೇಶ ತಂತಡದಲ್ಲಿ ಇಂಥ ಆಟಗಾರನಿರುವುದು ಹೆಮ್ಮೆಯ ವಿಷಯ. ಬ್ಯಾಟ್‌ನಿಂದಾಗಲಿ, ಚೆಂಡಿನಿಂದಾಗಲಿ ಅವರೊಬ್ಬ ಮಿ.ಕನ್ಸಿಸ್ಟೆಂಟ್‌’ ಎಂದು ಹೊಗಳಿದರು.

‘ಅವರು ಫಿಟ್‌ನೆಸ್‌ ಕಡೆ ಗಮನಕೊಟ್ಟಿದ್ದು, ಐದರಿಂದ ಆರು ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಇದರ ಪರಿಣಾಮವನ್ನು, ವಿಕೆಟ್‌ಗಳ ಮಧ್ಯೆ ಓಡುವಾಗ ಕಾಣಬಹುದು’ ಎಂದರು.

ಬಾಂಗ್ಲಾದೇಶ ತಂಡದ ನಾಯಕ ಮಷ್ರಫೆ ಮೊರ್ತಾಜಾ ಅವರೂ ಶಕೀಬ್‌ ಗುಣಗಾನ ಮಾಡಿದರು. ‘ಈ ಟೂರ್ನಿಯಲ್ಲಿ ಅವರು ಅಮೋಘವಾಗಿ ಆಡಿದ್ದಾರೆ. ಪ್ರತಿ ಪಂದ್ಯದಲ್ಲಿ ರನ್‌ಗಳನ್ನು ಹೊಡೆಯುತ್ತಿದ್ದಾರೆ. ಅಗತ್ಯವಿರುವಾಗ ಬೌಲಿಂಗ್‌ ಕೂಡ ಮಾಡಿದ್ದಾರೆ’ ಎಂದು ಪಂದ್ಯ ನಂತರ ಪುರಸ್ಕಾರ ಪ್ರದಾನ ವೇಳೆ ತಿಳಿಸಿದರು.

ಬ್ಯಾಟ್ಸ್‌ಮನ್‌ ಸ್ನೇಹಿಯಲ್ಲದ ಪಿಚ್‌ನಲ್ಲಿ ಮುಷ್ಫಿಕುರ್ ರಹೀಮ್‌ (87 ಎಸೆತಗಳಲ್ಲಿ 83) ಮತ್ತು ಶಕೀಬ್‌ ಗುಣಮಟ್ಟದ ಆಟವಾಡಿದರು. ‘ಅವರಿಬ್ಬರ ಜೊತೆಯಾಟ ದೊಡ್ಡದಲ್ಲದಿರಬಹುದು. ಆದರೆ ಮುಶಿ (ಮುಷ್ಫಿಕುರ್‌) ಮತ್ತು ಶಕೀಬ್‌ ಜೊತೆಯಾಟ ಮಹತ್ವದ್ದಾಗಿತ್ತು’ ಎಂದರು.

32 ವರ್ಷ ವಯಸ್ಸಿನ ಶಕೀಬ್‌ ಟೂರ್ನಿಯಲ್ಲಿ 476 ರನ್‌ಗಳ ಜೊತೆಗೆ 10 ವಿಕೆಟ್‌ಗಳನ್ನು ‌ಪಡೆದಿದ್ದಾರೆ. ‘ಆದರೆ ನಾನು ವೈಯಕ್ತಿಕ ಪ್ರದರ್ಶನಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಇದುವರೆಗೆ ನನ್ನ ಆಟ ತೃಪ್ತಿ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT