ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಐಪಿಎಲ್‌ ಸಮಾರೋಪ ಸಮಾರಂಭ ಆಯೋಜಿಸಲು ಬಿಡ್ ಆಹ್ವಾನಿಸಿದ ಬಿಸಿಸಿಐ

Last Updated 16 ಏಪ್ರಿಲ್ 2022, 10:02 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಈ ಬಾರಿಯ ಸಮಾರೋಪ ಸಮಾರಂಭ ಆಯೋಜಿಸಲು ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಿತ ಸಂಸ್ಥೆಗಳಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಹ್ವಾನ ನೀಡಿದೆ.

ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ‘ಪ್ರಸ್ತಾವನಾ ಮನವಿ’ಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

‘ಟೆಂಡರ್ ಪ್ರಕ್ರಿಯೆಯ ಷರತ್ತುಗಳ ವಿಸ್ತೃತ ವಿವರಣೆ, ಅರ್ಹತಾ ಮಾನದಂಡಗಳು, ಬಿಡ್ ಸಲ್ಲಿಕೆ ಪ್ರಕ್ರಿಯೆಯ ವಿವರ, ಹಕ್ಕುಗಳು–ಕಟ್ಟುಪಾಡುಗಳು ಮತ್ತು ಇತರ ವಿವರಗಳನ್ನು ‘ಪ್ರಸ್ತಾವನಾ ಮನವಿ’ಯಲ್ಲಿ ಉಲ್ಲೇಖಿಸಲಾಗಿದೆ. ಮರುಪಾವತಿಯಾಗದ ₹1,00,000 ಶುಲ್ಕ ಪಾವತಿಸಿ (ಸರಕು ಮತ್ತು ಸೇವಾ ತೆರಿಗೆ ಸಹಿತ) ‘ಪ್ರಸ್ತಾವನಾ ಮನವಿ’ಯನ್ನು ಪಡೆಯಬಹುದು’ ಎಂದು ಬಿಸಿಸಿಐ ತಿಳಿಸಿದೆ.

‘ಪ್ರಸ್ತಾವನಾ ಮನವಿ’ಯನ್ನು ಏಪ್ರಿಲ್ 25ರವರಗೆ ಪಡೆಯಲು ಅವಕಾಶವಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಬಿಡ್ಡಿಂಗ್ ಪ್ರಕ್ರಿಯೆಯನ್ನು ಯಾವುದೇ ಹಂತದಲ್ಲಿಯೂ ಕಾರಣ ನೀಡದೆಯೇ ರದ್ದುಗೊಳಿಸುವ ಹಕ್ಕು ಸಹ ಬಿಸಿಸಿಐಗೆ ಇದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT