‘ಎ’ ತಂಡಗಳ ಎರಡು ಏಕದಿನ ಪಂದ್ಯಗಳು ರದ್ದು

7

‘ಎ’ ತಂಡಗಳ ಎರಡು ಏಕದಿನ ಪಂದ್ಯಗಳು ರದ್ದು

Published:
Updated:

ನವದೆಹಲಿ: ಭಾರತ ‘ಎ’ ಭಾರತ ‘ಬಿ’, ದಕ್ಷಿಣ ಆಫ್ರಿಕಾ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವಿನ ಚತುಷ್ಕೋನ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಬಿಸಿಸಿಐ ರದ್ದುಗೊಳಿಸಿದೆ.

ವಿಜಯವಾಡ ಮತ್ತು ಮುಲಪಾಡುವಿನಲ್ಲಿ ಪಂದ್ಯಗಳು ನಡೆಯಬೇಕಾಗಿತ್ತು. ಧಾರಾಕಾರ ಮಳೆಯ ಕಾರಣ ರದ್ದುಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ.

ಮನೀಷ್‌ ಪಾಂಡೆ ನಾಯಕತ್ವದ ಭಾರತ ‘ಬಿ’ ತಂಡ ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಖಯಾ ಜೊಂಡೊ ಸಾರಥ್ಯದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಸೆಣಸಬೇಕಾಗಿತ್ತು. ಶುಕ್ರವಾರದ ಮತ್ತೊಂದು ಪಂದ್ಯದಲ್ಲಿ ಭಾರತ ‘ಎ’ ತಂಡ ಆಸ್ಟ್ರೇಲಿಯಾ ‘ಎ’ ತಂಡದ ಸವಾಲು ಎದುರಿಸಬೇಕಾಗಿತ್ತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !