ಬುಧವಾರ, ಜುಲೈ 6, 2022
21 °C

IPL 2022: ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಆರಂಭ ಯಾವಾಗ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಆತಂಕದ ನಡುವೆಯು ಮುಂಬರುವ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆಯೋಜನೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.

ಸದ್ಯದಲ್ಲೇ ನಡೆಯಲಿರುವ ಮಹಾ ಹರಾಜಿನ ಬಳಿಕ ಐಪಿಎಲ್ ಟೂರ್ನಿಗೆ ವೇಳಾಪಟ್ಟಿ ನಿಗದಿಯಾಗಲಿದೆ. ಉದ್ಘಾಟನಾ ಪಂದ್ಯಕ್ಕೆ ಸಂಬಂಧಿಸಿದಂತೆ ಎರಡು ದಿನಾಂಕಗಳು (ಮಾರ್ಚ್ 27 ಹಾಗೂ ಎಪ್ರಿಲ್ 2) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪರಿಗಣನೆಯಲ್ಲಿವೆ.

ಇದನ್ನೂ ಓದಿ: 

ಮಾರ್ಚ್ 27ರಂದು ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯನ್ನು ಆರಂಭಿಸಲು ಕೆಲವು ಫ್ರಾಂಚೈಸಿಗಳ ಮಾಲೀಕರು ಉತ್ಸುಕತೆಯನ್ನು ತೋರಿದ್ದಾರೆ. ಆದರೆ ಭಾರತ ಹಾಗೂ ಶ್ರೀಲಂಕಾ ನಡುವಣ ಕೊನೆಯ ಏಕದಿನ ಪಂದ್ಯವು ಮಾರ್ಚ್ 18ರಂದು ಲಖನೌದಲ್ಲಿ ನಡೆಯಲಿದೆ. ಲೋಧಾ ನಿಯಮದ ಪ್ರಕಾರ 14 ದಿನಗಳ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ ಎಪ್ರಿಲ್ 02 ಸೂಕ್ತ ದಿನಾಂಕವಾಗಿರಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ತಂಡಗಳಾದ ಲಖನೌ ಹಾಗೂ ಅಹಮದಾಬಾದ್ ಸೇರಿದಂತೆ ಎಲ್ಲ 10 ಫ್ರಾಂಚೈಸಿಗಳ ಮಾಲೀಕರು ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಯಸುತ್ತಿದ್ದಾರೆ. ಪುಣೆ ಹಾಗೂ ಮುಂಬೈ ಎರಡು ಆದ್ಯತೆಯ ನಗರಗಳಾಗಿವೆ.

ಒಂದು ವೇಳೆ ಕೋವಿಡ್‌ನಿಂದಾಗಿ ಭಾರತದಲ್ಲಿ ಟೂರ್ನಿ ಆಯೋಜನೆ ಕಷ್ಟಕರವೆನಿಸಿದರೆ ಯುಎಇ ಎರಡನೇ ಮತ್ತು ದಕ್ಷಿಣ ಆಫ್ರಿಕಾ ಕೊನೆಯ ಆಯ್ಕೆಯಾಗಿರಲಿದೆ. ಇದುವರೆಗೆ ಯುಎಇನಲ್ಲಿ ಮೂರು ಬಾರಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಒಂದು ಬಾರಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲಾಗಿದೆ.

ಮತ್ತೊಂದು ಮೂಲದ ಪ್ರಕಾರ ಶ್ರೀಲಂಕಾ ಆತಿಥ್ಯ ವಹಿಸುವ ಕುರಿತಾಗಿ ಚರ್ಚಿಸಲಾಗಿಲ್ಲ. ಒಟ್ಟಿನಲ್ಲಿ ಐಪಿಎಲ್ ಭಾರತದಲ್ಲಿ ನಡೆಯಲಿದೆಯೇ ಅಥವಾ ವಿದೇಶಕ್ಕೆ ಸ್ಥಳಾಂತರಗೊಳ್ಳಲಿದೆಯೇ ಎಂಬುದು ಕೂಡ ಅಂತಿಮಗೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು