ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ಮುಂಭಾಗದ ಸೇತುವೆ : ಮುಳುಗಡೆ

ಕಬಿನಿ ಜಲಾಶಯದಿಂದ 35,000 ಕ್ಯುಸೆಕ್‌ ನೀರು ಹೊರಕ್ಕೆ, ಸೇತುವೆ, ಗದ್ದೆಗಳು ಜಲಾವೃತ
Last Updated 16 ಜೂನ್ 2018, 10:19 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್‌ಗೇಟ್‌ ಮೂಲಕ ಶುಕ್ರವಾರ 35 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ಜಲಾಶಯದ ಮುಂಭಾಗದ ಸೇತುವೆ ಮುಳುಗಿದೆ.

ಇದರಿಂದಾಗಿ ಬೀಚನಹಳ್ಳಿ ಮಾರ್ಗ ಬಂದ್‌ ಆಗಿದ್ದು, ಎಚ್‌.ಡಿ.ಕೋಟೆ ಹ್ಯಾಂಡ್‌ಪೋಸ್ಟ್‌ನಿಂದ ಎನ್. ಬೇಗೂರು ಕಡೆಗೆ ಹೋಗುವ ವಾಹನಗಳು ಸರಗೂರು ಮಾರ್ಗವಾಗಿ ಸಂಚರಿಸಬೇಕಾಗಿದೆ. ಇದರಿಂದಾಗಿ ಬಿದರಹಳ್ಳಿ, ಹೊಸ ಬಿದರಹಳ್ಳಿ, ತೆರಣಿಮುಂಟಿ, ಬಸಾಪುರ, ಮೊಸರ ಹಳ್ಳ, ಕೆಂಚನಹಳ್ಳಿ, ಮೂರ್ ಬಂದ್, ಬೋರೇದೇವರಮುಂಟಿ, ಭೀಮನಕೊಲ್ಲಿ, ಎನ್.ಬೇಗೂರು, ಗೆಂಡತ್ತೂರು, ಇನ್ನೂ ಹಲವಾರು ಗ್ರಾಮಗಳ ಜನತೆಗೆ ತೀವ್ರ ಅನನುಕೂಲವಾಗಿದೆ.

ನೀಗದ ಬಹುದಿನಗಳ ಸಮಸ್ಯೆ: ಜಲಾಶಯ ಭರ್ತಿಯಾಗಿ ನೀರು ಬಿಟ್ಟ ವರ್ಷವೆಲ್ಲ ಸೇತುವೆ ಮುಳುಗಡೆಯಾಗಿ ಈ ಭಾಗದ ಸಮಸ್ಯೆ ಎದುರಿಸಬೇಕಾಗಿದೆ. ಅಲ್ಲದೇ, ನದಿ ತೀರದ ಪ್ರದೇಶಗಳ ಗದ್ದೆಗಳು ಜಲಾವೃತವಾಗಿ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ನೂತನ ಸೇತುವೆ ನಿರ್ಮಾಣ ಕನಸಾಗಿಯೇ ಉಳಿದಿದೆ ಎಂದು ಕಿತ್ತೂರು ಭಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

₹20 ಕೋಟಿ ವೆಚ್ಚದ ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ
  ಜಗದೀಶ್, ಕಾರ್ಯಪಾಲಕ ಎಂಜಿನಿಯರ್‌, ಕಬಿನಿ ಜಲಾಶಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT