ಕ್ರಿಕೆಟ್‌: ಅಧ್ಯಕ್ಷರ ಇಲೆವನ್‌ಗೆ ಗೆಲುವು

7

ಕ್ರಿಕೆಟ್‌: ಅಧ್ಯಕ್ಷರ ಇಲೆವನ್‌ಗೆ ಗೆಲುವು

Published:
Updated:

ತಿರುವನಂತಪುರ: ನಾಯಕ ಇಶಾನ್‌ ಕಿಶನ್‌ (ಔಟಾಗದೆ 55; 55ಎ, 5ಬೌಂ, 4ಸಿ) ಮತ್ತು ರಿಕಿ ಭುಯಿ (51; 102ಎ, 3ಬೌಂ, 3ಸಿ) ಅವರ ಅರ್ಧಶತಕಗಳ ನೆರವಿನಿಂದ ಭಾರತದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ ಎರಡು ದಿನಗಳ ‘ಟೆಸ್ಟ್‌’ ಪಂದ್ಯದಲ್ಲಿ 152ರನ್‌ಗಳಿಂದ ಇಂಗ್ಲೆಂಡ್‌ ಲಯನ್ಸ್‌ ತಂಡವನ್ನು ಪರಾಭವಗೊಳಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಕಿಶನ್‌ ಪಡೆ ನಿಗದಿತ 30 ಓವರ್‌ಗಳಲ್ಲಿ 5 ವಿಕೆಟ್‌ಗೆ 134ರನ್‌ ಗಳಿಸಿತ್ತು. ಫಾಲೊ ಆನ್‌ ಪಡೆದು ದ್ವಿತೀಯ ಇನಿಂಗ್ಸ್‌ ಶುರುಮಾಡಿದ ಆತಿಥೇಯರು 59.3 ಓವರ್‌ಗಳಲ್ಲಿ 6 ವಿಕೆಟ್‌ಗೆ 246ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡರು. 236ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಸ್ಯಾಮ್‌ ಬಿಲ್ಲಿಂಗ್ಸ್‌ ನೇತೃತ್ವದ ಲಯನ್ಸ್‌ ನಿಗದಿತ 30 ಓವರ್‌ಗಳಲ್ಲಿ 2 ವಿಕೆಟ್‌ಗೆ 83ರನ್‌ ಕಲೆಹಾಕಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಲಯನ್ಸ್‌, ಮೊದಲ ಇನಿಂಗ್ಸ್‌: 60 ಓವರ್‌ಗಳಲ್ಲಿ 6 ವಿಕೆಟ್‌ಗೆ 145 ಮತ್ತು 30 ಓವರ್‌ಗಳಲ್ಲಿ 2 ವಿಕೆಟ್‌ಗೆ 83 (ಸ್ಯಾಮ್‌ ಹೇನ್‌ 15, ಸ್ಯಾಮ್‌ ಬಿಲ್ಲಿಂಗ್ಸ್‌ ಔಟಾಗದೆ 36, ವಿಲ್‌ ಜಾಕ್ಸ್‌ ಔಟಾಗದೆ 21; ಅನಿಕೇತ್‌ ಚೌಧರಿ 17ಕ್ಕೆ1, ಸೌರಭ್‌ ಕುಮಾರ್‌ 23ಕ್ಕೆ1).

ಮಂಡಳಿ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌, 30 ಓವರ್‌ಗಳಲ್ಲಿ 5 ವಿಕೆಟ್‌ಗೆ 134 ಮತ್ತು 59.3 ಓವರ್‌ಗಳಲ್ಲಿ 6 ವಿಕೆಟ್‌ಗೆ 246 ಡಿಕ್ಲೇರ್ಡ್‌ (ಧ್ರುವ ಶೋರೆ 16, ಅಕ್ಷತ್‌ ರೆಡ್ಡಿ 49, ರಿಕಿ ಭುಯಿ 51, ರಿಂಕು ಸಿಂಗ್‌ 13, ಇಶಾನ್‌ ಕಿಶನ್‌ ಔಟಾಗದೆ 55, ಪ್ರಿಯಂ ಗರ್ಗ್‌ 26, ರಾಹುಲ್‌ ಚಾಹರ್‌ 35; ಜೆಮಿ ಓವರ್‌ಟನ್‌ 23ಕ್ಕೆ1, ಡ್ಯಾನಿ ಬ್ರಿಗ್ಸ್‌ 40ಕ್ಕೆ2, ಡಾಮಿನಿಕ್‌ ಬೆಸ್‌ 51ಕ್ಕೆ2, ಮ್ಯಾಥ್ಯೂ ಟಿ.ಕಾರ್ಟರ್‌ 30ಕ್ಕೆ1).

ಫಲಿತಾಂಶ: ಮಂಡಳಿ ಅಧ್ಯಕ್ಷರ ಇಲೆವನ್‌ಗೆ 152ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !