‘ಭಾರತ ತಂಡದ ಆಟಗಾರರು ದೇಶಿ ಕ್ರಿಕೆಟ್‌ನಲ್ಲಿ ಆಡದೇ ಹೋದರೆ ಅದು ಅಕ್ಷಮ್ಯ. ಮುಖ್ಯಕೋಚ್ ಗೌತಮ್ ಗಂಭೀರ್ ಅವರು ಈ ಕುರಿತು ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಗಾವಸ್ಕರ್ ಹೇಳಿದ್ದಾರೆ. ‘ ಆಟಗಾರರ ತಾಂತ್ರಿಕ ಕೌಶಲಗಳಲ್ಲಿ ಲೋಪಗಳನ್ನು ನಾವು ನೋಡುತ್ತಿದ್ದೇವೆ. ಒಂದೇ ತರಹದ ತಪ್ಪುಗಳು ಮರುಕಳಿಸುತ್ತಿವೆ. ನಾನು ಇದೊಂದೇ ಸರಣಿಯ ಬಗ್ಗೆ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಎದುರು ಭಾರತ ತಂಡದವರು ಇದೇ ರೀತಿ ಆಡಿದ್ದರು. ಮುಂಬರುವ ಡಬ್ಲ್ಯುಟಿಸಿ ಸರಣಿಗಳಿಗೆ ಸಿದ್ಧರಾಗಲು ದೇಶಿ ಕ್ರಿಕೆಟ್‌ನಲ್ಲಿ ಆಡುವುದು ಮುಖ್ಯವಾಗಲಿದೆ’ ಎಂದು ಹೇಳಿದರು.