ಡಾರ್ವಿನ್, ಆಸ್ಟ್ರೇಲಿಯಾ: ದಾಖಲೆಯ ಶತಕ ಬಾರಿಸಿದ ಡಿವಾಲ್ಡ್ ಬ್ರೆವಿಸ್ ಅವರ ಆಟದಿಂದಾಗಿ ದಕ್ಷಿನ ಆಫ್ರಿಕಾ ತಂಡವು ಆಸ್ಟ್ರೇಲಿಯಾ ಎದುರಿನ ಟಿ20 ಕ್ರಿಕೆಟ್ ಸರಣಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 53 ರನ್ಗಳಿಂದ ಗೆದ್ದಿತು.

ಇದರೊಂದಿಗೆ ಟಿ20 ಮಾದರಿಯಲ್ಲಿ ಸತತ ಹತ್ತನೇ ಪಂದ್ಯ ಜಯಿಸುವ ಆಸ್ಟ್ರೇಲಿಯಾ ತಂಡದ ಉದ್ದೇಶ ಈಡೇರಲಿಲ್ಲ. ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು 1–1 ಸಮಬಲ ಸಾಧಿಸಿತು.

22 ವರ್ಷದ ಬ್ರೆವಿಸ್ 56 ಎಸೆತಗಳಲ್ಲ ಅಜೇಯ 125 ರನ್ ಗಳಿಸಿದರು. ಅವರು ಎಂಟು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದರು. ಇದರೊಂದಿಗೆ 2015ರಲ್ಲಿ ಫಾಫ್ ಡುಪ್ಲೆಸಿ (119; 56ಎಸೆತ) ಅವರು ವೆಸ್ಟ್ ಇಂಡೀಸ್ ಎದುರು ಮಾಡಿದ್ದ ದಾಖಲೆಯನ್ನು ಮುರಿದರು.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಬ್ರೆವಿಸ್ ಅಬ್ಬರದಿಂದಾಗಿ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 218 ರನ್ ಗಳಿಸಿತು. ಅದಕ್ಕುತ್ತರವಾಗಿ ಆತಿಥೇಯ ತಂಡವು 17.4 ಓವರ್ಗಳಲ್ಲಿ 165 ರನ್ ಗಳಿಸಿ ಸೋತಿತು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 7ಕ್ಕೆ218 (ಡಿವಾಲ್ಡ್ ಬ್ರೆವಿಸ್ ಔಟಾಗದೇ 125, ಟ್ರಿಸ್ಟನ್ ಸ್ಟಬ್ಸ್ 31, ಗ್ಲೆನ್ ಮ್ಯಾಕ್ಸ್ವೆಲ್ 44ಕ್ಕೆ2, ಬೆನ್ ಡ್ವಾರಶಿಯಸ್ 24ಕ್ಕೆ2)

ಆಸ್ಟ್ರೇಲಿಯಾ: 17.4 ಓವರ್ಗಳಲ್ಲಿ 165 (ಮಿಚೆಲ್ ಮಾರ್ಷ್ 22, ಟಿಮ್ ಡೇವಿಡ್ 50, ಅಲೆಕ್ಸ್ ಕ್ಯಾರಿ 26, ಕ್ವೆನಾ ಮಪಾಕಾ 57ಕ್ಕೆ3) ಫಲಿತಾಂಶ:ದಕ್ಷಿಣ ಆಫ್ರಿಕಾ ತಂಡಕ್ಕೆ 53 ರನ್ಗಳ ಜಯ. ಪಂದ್ಯದ ಆಟಗಾರ: ಡಿವಾಲ್ಡ್ ಬ್ರೆವಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.