ಶುಕ್ರವಾರ, ಡಿಸೆಂಬರ್ 6, 2019
26 °C

ಬೂಮ್ರಾಗೆ ಬೇಬಿ ಬೌಲರ್‌ ಎಂದ ರಜಾಕ್

Published:
Updated:
Prajavani

ಕರಾಚಿ: ಭಾರತದ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ‘ಬೇಬಿ ಬೌಲರ್‌’ ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ವ್ಯಂಗ್ಯವಾಡಿದ್ದಾರೆ.

‘ಈಗ ಏನಾದರೂ ನಾನು ಆಡುತ್ತಿದ್ದಿದ್ದರೆ ಬೇಬಿ ಬೌಲರ್‌ ಬೂಮ್ರಾ ಅವರ ಎಸೆತಗಳಿಗೆ ಸರಿಯಾಗಿ ದಂಡಿಸುತ್ತಿದ್ದೆ’ ಎಂದಿದ್ದಾರೆ.

ಕ್ರಿಕೆಟ್ ಪಾಕಿಸ್ತಾನ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ 40 ವರ್ಷದ ರಜಾಕ್. ‘ಗ್ಲೆನ್ ಮೆಕ್‌ಗ್ರಾ ಅವರಂತಹ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿದ್ದೆ. ಅವರಿಗೆ ಹೋಲಿಕೆ ಮಾಡಿದರೆ ಬೂಮ್ರಾ ಬೇಬಿ ಬೌಲರ್’ ಎಂದಿದ್ದಾರೆ.

ಬೂಮ್ರಾ ಸದ್ಯ ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

‘ಬೂಮ್ರಾ ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ತಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಂಡಿದ್ದಾರೆ. ಆದರೆ, ಅವರ ಶೈಲಿಯು ವಿಚಿತ್ರವಾಗಿದೆ. ಆದರೂ ಅವರು ಸರಿಯಾದ ಸ್ಥಳದಲ್ಲಿ ಚೆಂಡನ್ನು ಪಿಚ್ ಮಾಡುವುದರಿಂದ ಯಶಸ್ವಿಯಾಗುತ್ತಿದ್ದಾರೆ’ ಎಂದೂ ರಜಾಕ್ ಶ್ಲಾಘಿಸಿದ್ದಾರೆ.

ರಜಾಕ್ 46 ಟೆಸ್ಟ್, 265 ಏಕದಿನ ಮತ್ತು 32 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು