ಮಂಗಳವಾರ, ಆಗಸ್ಟ್ 9, 2022
23 °C

ವೃದ್ಧಿಮಾನ್‌ ಸಹಾಗೆ ನಿರಾಕ್ಷೇಪಣಾ ಪತ್ರ: ಸಿಎಬಿ ಜತೆಗಿನ ಒಡನಾಟ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಅವರಿಗೆ ಬಂಗಾಳ ಕ್ರಿಕೆಟ್‌ ಸಂಸ್ಥೆಯು (ಸಿಎಬಿ) ಬೇರೆ ರಾಜ್ಯದ ಪರ ಆಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪತ್ರ  ನೀಡಿದೆ. ಇದರೊಂದಿಗೆ ಸಂಸ್ಥೆಯೊಂದಿಗಿನ 15 ವರ್ಷಗಳ ಒಡನಾಟವನ್ನು ಅವರು ಕಡಿದುಕೊಂಡಿದ್ದಾರೆ.

ಭಾರತ ತಂಡದ ಪರ 40 ಟೆಸ್ಟ್‌ಗಳನ್ನು ಸಹಾ ಆಡಿದ್ದಾರೆ. ಬರುವ ಅಕ್ಟೋಬರ್‌ಗೆ ಅವರು 38ನೇ ವಯಸ್ಸಿಗೆ ಕಾಲಿಡಲಿದ್ದಾರೆ. ವಯಸ್ಸಾದ ಎರಡನೇ ವಿಕೆಟ್‌ಕೀಪರ್ ತಮಗೆ ಅಗತ್ಯವಿಲ್ಲ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು. ಇದಾದ ಬಳಿಕ ಸಹಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಟೀಕಿಸುತ್ತಿದ್ದರು.

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅವರು ಇತ್ತೀಚೆಗೆ ಬಂಗಾಳ ತಂಡದಿಂದಲೂ ದೂರವಾಗಿದ್ದರು. ಸಿಎಬಿ ಜಂಟಿ ಕಾರ್ಯದರ್ಶಿ ದೇವವ್ರತ ದಾಸ್‌ ಅವರು ಸಹಾ ನಿರ್ಧಾರವನ್ನು ಟೀಕಿಸಿದ್ದರಲ್ಲದೆ, ಅವರ ಬದ್ಧತೆಯನ್ನು ಪ್ರಶ್ನಿಸಿದ್ದರು.

ಇತ್ತೀಚೆಗೆ ಸಹಾ ಅವರು ಆಟಗಾರ ಮತ್ತು ಮಾರ್ಗದರ್ಶಿಯಾಗಲು ತ್ರಿಪುರ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಒಪ್ಪಂದ ಮಾಡಿಕೊಳ್ಳಲು ’ಹೆಚ್ಚಿನ ಶುಲ್ಕಕ್ಕೆ‘ ಬೇಡಿಕೆ ಇಟ್ಟಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು