ಮೈಸೂರಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಕೆಎಸ್‌ಸಿಎ ಕೋಲ್ಟ್ಸ್ ಹಾಗೂ ಡಾ.ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ ನಡುವಿನ ಕ್ರಿಕೆಟ್ ಪಂದ್ಯವು ಮೊದಲ ದಿನದಂದು ಮಳೆಯ ಕಾರಣಕ್ಕೆ ಒಂದೂ ಎಸೆತ ಕಾಣಲಿಲ್ಲ. ಮಳೆಯಿಂದಾಗಿ ಅಂಕಣ ಒದ್ದೆ ಆಗಿದ್ದರಿಂದ ಬೆಳಿಗ್ಗೆ ಟಾಸ್ ವಿಳಂಬವಾಯಿತು. ಮಧ್ಯಾಹ್ನ ಮತ್ತೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆ ಇದೆ.