ಆಲೂರಿನಲ್ಲಿ ಕಾರ್ಯಪ್ಪ ಕೈಚಳಕ

7
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌: ಅಧ್ಯಕ್ಷರ ಇಲೆವನ್ ಜಯಭೇರಿ: ಬಂಗಾಳಕ್ಕೆ ನಿರಾಸೆ

ಆಲೂರಿನಲ್ಲಿ ಕಾರ್ಯಪ್ಪ ಕೈಚಳಕ

Published:
Updated:
Deccan Herald

ಬೆಂಗಳೂರು: ನಗರದ ಹೊರವಲಯದಲ್ಲಿರುವ ಆಲೂರಿನ ಮೂರನೆ ಮೈದಾನದಲ್ಲಿ ಬುಧವಾರವೂ ಕೆ.ಸಿ.ಕಾರ್ಯಪ್ಪ ಕೈಚಳಕ ತೋರಿದರು.

ಬಂಗಾಳ ಸಂಸ್ಥೆಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾದ ಕಾರ್ಯಪ್ಪ, ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡದ ಗೆಲುವಿನ ರೂವಾರಿಯಾದರು.

ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದ ಅವರು ಎರಡನೆ ಇನಿಂಗ್ಸ್‌ನಲ್ಲೂ ಏಳು ವಿಕೆಟ್‌ ಪಡೆದು ಮಿಂಚಿದರು.

5 ವಿಕೆಟ್‌ಗೆ 128ರನ್‌ಗಳಿಂದ ಬುಧವಾರ ಆಟ ಮುಂದುವರಿಸಿದ ಬಂಗಾಳ ಸಂಸ್ಥೆ, ದ್ವಿತೀಯ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಲ್ಲಿ 179ರನ್‌ ಗಳಿಗೆ ಹೋರಾಟ ಮುಗಿಸಿತು. 173ರನ್‌ಗಳ ಗೆಲುವಿನ ಗುರಿಯನ್ನು ಅಧ್ಯಕ್ಷರ ಇಲೆವನ್‌ 52.4 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಬಂಗಾಳ ಸಂಸ್ಥೆ: ಮೊದಲ ಇನಿಂಗ್ಸ್‌, 64.3 ಓವರ್‌ಗಳಲ್ಲಿ 199 ಮತ್ತು 62.1 ಓವರ್‌ಗಳಲ್ಲಿ 179 (ಶುಭಂ ಚಟರ್ಜಿ 70; ಕೆ.ಸಿ.ಕಾರ್ಯಪ್ಪ 47ಕ್ಕೆ7, ಐ.ಜಿ.ಅನಿಲ್‌ 35ಕ್ಕೆ2).

ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: 65.5 ಓವರ್‌ಗಳಲ್ಲಿ 205 ಮತ್ತು 52.4 ಓವರ್‌ಗಳಲ್ಲಿ 5 ವಿಕೆಟ್‌ಗೆ 177 (ಲಿಯಾನ್‌ ಖಾನ್‌ ಔಟಾಗದೆ 80, ಜಿ.ಎಸ್‌.ಚಿರಂಜೀವಿ 54, ಆದಿತ್ಯ ಸೋಮಣ್ಣ ಔಟಾಗದೆ 23; ಪ್ರದಿಪ್ತಾ ಪ್ರಾಮಾಣಿಕ್‌ 81ಕ್ಕೆ2, ರಾಜು ಹಲ್ದಾರ್‌ 51ಕ್ಕೆ3).

ಫಲಿತಾಂಶ: ಅಧ್ಯಕ್ಷರ ಇಲೆವನ್‌ಗೆ 5 ವಿಕೆಟ್‌ ಗೆಲುವು ಹಾಗೂ ಆರು ಪಾಯಿಂಟ್ಸ್‌.

ಜಸ್ಟ್‌ ಕ್ರಿಕೆಟ್‌ ಮೈದಾನ: ಹಿಮಾಚಲ ಪ್ರದೇಶ ಸಂಸ್ಥೆ:  62.1 ಓವರ್‌ಗಳಲ್ಲಿ 195 ಮತ್ತು 63 ಓವರ್‌ಗಳಲ್ಲಿ 6 ವಿಕೆಟ್‌ಗೆ 152 (ಪ್ರಶಾಂತ್‌ ಚೋಪ್ರಾ 25, ಅಂಕುಶ್‌ ಬೇನ್ಸ್‌ 26, ಅಂಕಿತ್‌ ಕೌಶಿಕ್‌ ಬ್ಯಾಟಿಂಗ್‌ 44, ಆಕಾಶ್‌ ವಶಿಷ್ಠ ಬ್ಯಾಟಿಂಗ್‌ 24; ವಿ.ಕೌಶಿಕ್‌ 11ಕ್ಕೆ3, ಜೆ.ಸುಚಿತ್‌ 38ಕ್ಕೆ2).

ಕೆಎಸ್‌ಸಿಎ ಇಲೆವನ್‌: ಮೊದಲ ಇನಿಂಗ್ಸ್‌, 136.5 ಓವರ್‌ಗಳಲ್ಲಿ 445 (ಸಿ.ಎಂ.ಗೌತಮ್‌ 88, ವಿ.ಕೌಶಿಕ್‌ ಔಟಾಗದೆ 23; ಆಕಾಶ್‌ ವಶಿಷ್ಠ 86ಕ್ಕೆ3, ಮಯಂಕ್‌ ದಾಗರ್‌ 88ಕ್ಕೆ3).

ಆಲೂರಿನ ಎರಡನೆ ಮೈದಾನ: ವಿದರ್ಭ ಸಂಸ್ಥೆ: 111 ಓವರ್‌ಗಳಲ್ಲಿ 375 ಮತ್ತು 67.1 ಓವರ್‌ಗಳಲ್ಲಿ 5 ವಿಕೆಟ್‌ಗೆ 217 (ಸಿದ್ದೇಶ್‌ ವಾಥ್‌ 87; ಮೇಲು ಕ್ರಾಂತಿ ಕುಮಾರ್‌ 11ಕ್ಕೆ2).

ಕೆಎಸ್‌ಸಿಎ ಕಾರ್ಯದರ್ಶಿಗಳ ಇಲೆವನ್‌: 66.2 ಓವರ್‌ಗಳಲ್ಲಿ 202.

ಆರ್‌ಎಸ್‌ಐ ಮೈದಾನ: ಬರೋಡ ಸಂಸ್ಥೆ: 57 ಓವರ್‌ಗಳಲ್ಲಿ 191 ಮತ್ತು 118 ಓವರ್‌ಗಳಲ್ಲಿ 8 ವಿಕೆಟ್‌ಗೆ 381 (ಕೇದಾರ್‌ ದೇವಧರ್‌ 89, ಫೈಜಾನ್‌ ಪಠಾಣ್‌ 77; ಹರ್ಮೀತ್‌ ಸಿಂಗ್‌ 126ಕ್ಕೆ4).

ಡಿ.ವೈ.ಪಾಟೀಲ ಅಕಾಡೆಮಿ: 65.3 ಓವರ್‌ಗಳಲ್ಲಿ 334.

ಐಎಎಫ್‌ ಮೈದಾನ: ರೈಲ್ವೆ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌: 39.5 ಓವರ್‌ಗಳಲ್ಲಿ 152 ಮತ್ತು 40.3 ಓವರ್‌ಗಳಲ್ಲಿ 159.

ಉತ್ತರ ಪ್ರದೇಶ ಸಂಸ್ಥೆ: 77.2 ಓವರ್‌ಗಳಲ್ಲಿ 210 ಮತ್ತು 24.4 ಓವರ್‌ಗಳಲ್ಲಿ 4 ವಿಕೆಟ್‌ಗೆ 102 (ಪ್ರಿಯಾಂಕ್‌ ಗಾರ್ಗ್‌ ಔಟಾಗದೆ 45).

ಫಲಿತಾಂಶ: ಉತ್ತರ ಪ್ರದೇಶ ತಂಡಕ್ಕೆ 6 ವಿಕೆಟ್‌ ಜಯ.

ಬಿಜಿಎಸ್‌ ಮೈದಾನ: ಛತ್ತೀಸಗಡ ಸಂಸ್ಥೆ: 127.3 ಓವರ್‌ಗಳಲ್ಲಿ 376 ಮತ್ತು 12 ಓವರ್‌ಗಳಲ್ಲಿ 2 ವಿಕೆಟ್‌ಗೆ 86.

ಕೇರಳ ಸಂಸ್ಥೆ: 125.5 ಓವರ್‌ಗಳಲ್ಲಿ 309 (ಸಲಾಮ್‌ 133; ಸುಮಿತ್‌ ರುಯಿಕರ್‌ 65ಕ್ಕೆ5).

ಮೈಸೂರಿನಲ್ಲಿ ನಡೆಯುತ್ತಿರುವ ಪಂದ್ಯಗಳು: ಎಸ್‌.ಡಿ.ಆರ್‌.ಎನ್‌.ಡಬ್ಲ್ಯು ಮೈದಾನ: ಕೆಎಸ್‌ಸಿಎ ಕೋಲ್ಟ್ಸ್‌: 33.2 ಓವರ್‌ಗಳಲ್ಲಿ 101 ಮತ್ತು 68.3 ಓವರ್‌ಗಳಲ್ಲಿ 240.

ಆಂಧ್ರ ಸಂಸ್ಥೆ: 55 ಓವರ್‌ಗಳಲ್ಲಿ 142 ಮತ್ತು 56.2 ಓವರ್‌ಗಳಲ್ಲಿ 4 ವಿಕೆಟ್‌ಗೆ 200 (ಜ್ಯೋತಿ ಸಾಯಿ ಕೃಷ್ಣ ಔಟಾಗದೆ 55, ಪಿ.ಗಿರಿನಾಥ್‌ ರೆಡ್ಡಿ ಔಟಾಗದೆ 54; ಶುಭಾಂಗ್‌ ಹೆಗ್ಡೆ 52ಕ್ಕೆ3).

ಫಲಿತಾಂಶ: ಆಂಧ್ರ ತಂಡಕ್ಕೆ 6 ವಿಕೆಟ್‌ ಗೆಲುವು.

ಎಸ್‌ಜೆಸಿಇ ಮೈದಾನ: ಮಧ್ಯಪ್ರದೇಶ ಸಂಸ್ಥೆ: 90.4 ಓವರ್‌ಗಳಲ್ಲಿ 274 ಮತ್ತು 3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 4.

ಗುಜರಾತ್‌ ಸಂಸ್ಥೆ: 143.3 ಓವರ್‌ಗಳಲ್ಲಿ 9 ವಿಕೆಟ್‌ಗೆ 487 ಡಿಕ್ಲೇರ್ಡ್‌ (ಭಾರ್ಗವ್‌ ಮೆರಾಯ್‌ 220, ಕ್ಷಿತಿಜ್‌ ಪಟೇಲ್‌ 56, ರುಜುಲ್‌ ಭಟ್‌ 53; ಪಂಕಜ್‌ ಪಟೇಲ್‌ 75ಕ್ಕೆ3, ಅಂಕಿತ್‌ ಕುಶ್‌ವಾಸ್‌ 87ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !