ಮೆಲ್ಬರ್ನ್ (ಪಿಟಿಐ): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಕ್ರಿಸ್ ಕೇನ್ಸ್ ತೀವ್ರ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

51 ವರ್ಷದ ಕ್ರಿಸ್ ಸ್ಥಿತಿ ಗಂಭೀರವಾಗಿದ್ದು ಜೀವಸುರಕ್ಷಾ ಸಾಧನದ ನೆರವು ಒದಗಿಸಲಾಗಿದೆ.

ಏರಾಟಿಕ್ ಡಿಸೆಕ್ಷನ್ ಎಂಬ ಖಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ಮಂಗಳವಾರ ಅವರು ಕುಸಿದ್ದುಬಿದ್ದರು. ಕೂಡಲೇ ಅವರನ್ನು ಕೆನ್‌ಬೆರಾದ ಆಸ್ಪತ್ರೆಗೆ ದಾಖಲಾಯಿಸಲಾಯಿತು.

‘ಅವರಿಗೆ ಏರಾಟಿಕ್ ಡಿಸೆಕ್ಸನ್ ಎಂಬ ಕಾಯಿಲೆ ಇದೆ. ಇದರಲ್ಲಿ ಹೃದಯದ ಮುಖ್ಯ ಧಮನಿಯು ಜಖಂ ಆಗಿರುತ್ತದೆ. ಅವರಿಗೆ ಅಗತ್ಯವಿರುವ ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ‘ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕ್ರಿಸ್ ಕೂಡ ಒಬ್ಬರು. 1989 ರಿಂದ 2006ರ ಅವಧಿಯಲ್ಲಿ ಅವರು 62 ಟೆಸ್ಟ್, 215 ಏಕದಿನ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ.

2008ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ನಲ್ಲಿ ಆಡಿದ್ದ ಅವರು ಮ್ಯಾಚ್ ಫಿಕ್ಸಿಂಗ್ ಆರೋಪವನ್ನು ಎದುರಿಸಿದ್ದರು. ತಮ್ಮನ್ನು ನಿರಪರಾಧಿ ಎಂದು ಸಾಬೀತು ಮಾಡಲು ಅವರು ಕಾನೂನು ಹೋರಾಟ ನಡೆಸಿದ್ದರು. 2012ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಲಲಿತ್ ಮೋದಿ ವಿರುದ್ಧ ಲಂಡನ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

2015ರಲ್ಲಿ ಕೇನ್ಸ್ ವಿರುದ್ಧ ಸಹಆಟಗಾರರಾದ ಲೂ ವಿನ್ಸೆಂಟ್ ಮತ್ತು ಬ್ರೆಂಡನ್ ಮೆಕ್ಲಮ್ ಅವರೂ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಕುರಿತು ಲಂಡನ್ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆದಿತ್ತು. ಕಾನೂನು ಹೋರಾಟಕ್ಕಾಗಿ ತಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿದ್ದ ಕ್ರಿಸ್, ತೀವ್ರ ಆರ್ಥಿಕ ಸಂಕಷ್ಟ ಅನುಭವಿಸಿದ್ದರು.

ಅದರಿಂದಾಗಿ ಅವರು ಆಕ್ಲೆಂಡ್ ಕೌನ್ಸಿಲ್‌ನಲ್ಲಿ ಟ್ರಕ್ ಡ್ರೈವರ್ ಆಗಿದ್ದರು. ಬಸ್ ಶೆಲ್ಟರ್‌ಗಳನ್ನು ಸ್ವಚ್ಛಗೊಳಿಸುವ ಕೆಲಸ ಕೂಡ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.