ಬುಧವಾರ, ಫೆಬ್ರವರಿ 8, 2023
17 °C
ಸಿ.ಕೆ.ನಾಯ್ಡು ಟ್ರೋಫಿ: ಹಿಮಾಚಲಕ್ಕೆ 251 ರನ್‌ ಗೆಲವಿನ ಗುರಿ

ಸಿ.ಕೆ.ನಾಯ್ಡು ಟ್ರೋಫಿ: ಮನೋಜ್‌ ಅಮೋಘ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮನೋಜ್‌ ಭಾಂಡಗೆ ಸಿಡಿಸಿದ ಅಮೋಘ ಶತಕದ (102 ರನ್‌) ಬಲದಿಂದ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿತು. 

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡವು ಮಂಗಳವಾರ 89.4 ಓವರ್‌ಗಳಲ್ಲಿ 299 ರನ್ ಗಳಿಸಿತು. ತಾಳ್ಮೆಯ ಆಟವಾಡಿದ ಮನೋಜ್, ನಾಯಕ ಕಿಶನ್‌ ಎಸ್. ಬಿದರೆ (49) ಹಾಗೂ ವಿದ್ಯಾಧರ ಪಾಟೀಲ (54) ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌: ಕರ್ನಾಟಕ 166. ಹಿಮಾಚಲ ಪ್ರದೇಶ 67.4 ಓವರ್‌ಗಳಲ್ಲಿ 214 (ಆರ್‌.ಐ.ಠಾಕೂರ್‌ 77, ಎ.ಎಸ್‌.ಜಾಮ್ವಾಲ್‌ 57, ಎಂ.ಎಸ್‌.ಭಾಂಡಗೆ 47ಕ್ಕೆ 4). ಎರಡನೇ ಇನಿಂಗ್ಸ್‌: ಕರ್ನಾಟಕ 89.4 ಓವರ್‌ಗಳಲ್ಲಿ 299 (ಮನೋಜ್‌ ಭಾಂಡಗೆ 102, ವಿದ್ಯಾಧರ ಪಾಟೀಲ್‌ 54, ಮುಕುಲ್ ನೇಗಿ 80ಕ್ಕೆ 4)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು