ಬ್ರಿಸ್ಟಲ್: ಇಂಗ್ಲೆಂಡ್ ಎದುರಿನ ಟಿ20 ಕ್ರಿಕಟ್ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿ ಭರ್ತಿ ಆತ್ಮವಿಶ್ವಾಸದಲ್ಲಿರುವ ಭಾರತ ಮಹಿಳಾ ತಂಡವು ಮಂಗಳವಾರ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಅವರು ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದರು. ಅದರಿಂದಾಗಿ ತಂಡವು 97 ರನ್ಗಳ ಜಯ ಸಾಧಿಸಲು ಕಾರಣವಾಗಿತ್ತು. ಪ್ರಮುಖ ಬೌಲರ್ಗಳ ಗೈರುಹಾಜರಿಯಲ್ಲಿ ಯುವ ಪ್ರತಿಭೆಗಳು ಉತ್ತಮವಾಗಿ ಆಡಿದ್ದರು. ಆದರೆ ಆ ಪಂದ್ಯದಲ್ಲಿ ಗಾಯದಿಂದಾಗಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಕಣಕ್ಕಿಳಿದಿರಲಿಲ್ಲ. ಈ ಪಂದ್ಯದಲ್ಲಿ ಅವರು ಆಡುವ ಕುರಿತು ಇನ್ನೂ ಖಚಿತವಾಗಿಲ್ಲ. ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಅವರ ತಲೆಗೆ ಪೆಟ್ಟುಬಿದ್ದಿತ್ತು.

ಮಂದಾನ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಶೆಫಾಲಿ ವರ್ಮಾ ಅವರು ಲಯಕ್ಕೆ ಮರಳುವ ಅಗತ್ಯವಿದೆ. ಹರ್ಲಿನ್ ಡಿಯೊಲ್, ರಿಚಾ ಘೋಷ್, ಜಿಮಿಮಾ ರಾಡ್ರಿಗಸ್. ಅಮನ್ಜೋತ್ ಕೌರ್ ಅವರೂ ಒಂದಿಷ್ಟು ರನ್ಗಳನ್ನು ಹರಿಸಿದರೆ ಇನ್ನಷ್ಟು ದೊಡ್ಡ ಮೊತ್ತ ಗಳಿಸಲು ತಂಡಕ್ಕೆ ಸಾಧ್ಯವಾಗಲಿದೆ. ಇದರಿಂದಾಗಿ ಬೌಲಿಂಗ್ ಪಡೆಗೆ ಒತ್ತಡ ತುಸು ಕಡಿಮೆಯಾಗಲಿದೆ.

ಎಡಗೈ ಸ್ಪಿನ್ನರ್ ಶ್ರೀಚರಣಿ ಅವರು ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ನಾಲ್ಕು ವಿಕೆಟ್ ಗಳಿಸಿ ಮಿಂಚಿದರು. ಅದರಿಂದಾಗಿ ಇಂಗ್ಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಉರುಳಿಸಲು ಸಾಧ್ಯವಾಯಿತು. ಅನುಭವಿ ಬೌಲರ್ಗಳಾದ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಅವರು ಗಾಯಗೊಂಡಿರುವುದರಿಂದ ಈ ಸರಣಿಯಲ್ಲಿ ಆಡುತ್ತಿಲ್ಲ. ಆದ್ದರಿಂದ ಸ್ನೇಹಾ ರಾಣಾ, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್ ಅವರ ಮೇಲೆ ಹೆಚ್ಚಿನ ಹೊಣೆ ಬೀಳಲಿದೆ.

ಆಲ್ರೌಂಡರ್ ನಥಾಲಿ ಶಿವರ್ ಬ್ರಂಟ್ ಅವರ ನಾಯಕತ್ವದ ಇಂಗ್ಲೆಂಡ್ ತಂಡವು ಭಾರತಕ್ಕೆ ತಿರುಗೇಟು ನೀಡಲು ತುದಿಗಾಲಿನಲ್ಲಿ ನಿಂತಿದೆ. ಸೋಫಿ ಡಂಕ್ಲಿ, ಎಮಿ ಜೋನ್ಸ್, ಸೋಫಿ ಎಕ್ಲೆಸ್ಟೊನ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವ ಅಗತ್ಯವಿದೆ. ಅದರಲ್ಲೂ ಇಂಗ್ಲೆಂಡ್ ಬ್ಯಾಟರ್ಗಳು ಭಾರತದ ಸ್ಪಿನ್ನರ್ಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದು ಮುಖ್ಯವಾಗಲಿದೆ. ಮೊದಲ ಪಂದ್ಯದಲ್ಲಿ ಲಾರೆನ್ ಬೆಲ್ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ತಮ್ಮ ಲಯ ಮುಂದುವರಿಸಿದರೆ ಭಾರತದ ಬ್ಯಾಟರ್ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿದೆ.

ಪಂದ್ಯ ಆರಂಭ: ರಾತ್ರಿ 11ರಿಂದ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.