ಕೂಚ್ ಬೆಹರ್‌ ಕ್ರಿಕೆಟ್ ಟೂರ್ನಿ: ಹೊರಬಿದ್ದ ಕರ್ನಾಟಕ

7
ಕೂಚ್ ಬೆಹರ್‌ ಟ್ರೋಫಿ ಕ್ರಿಕೆಟ್: ಮಧ್ಯಪ್ರದೇಶ ಎದುರಿನ ಮಹತ್ವದ ಪಂದ್ಯ ಡ್ರಾ

ಕೂಚ್ ಬೆಹರ್‌ ಕ್ರಿಕೆಟ್ ಟೂರ್ನಿ: ಹೊರಬಿದ್ದ ಕರ್ನಾಟಕ

Published:
Updated:

ಬೆಳಗಾವಿ: ಮಧ್ಯಪ್ರದೇಶ ವಿರು ದ್ಧದ ಮಹತ್ವದ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಪಡೆಯುವಲ್ಲಿ ವಿಫಲ ವಾದ ಕರ್ನಾಟಕ ತಂಡ 19 ವರ್ಷದೊಳಗಿನವರ ಕೂಚ್ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹೊರಬಿದ್ದಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತು. ಇದರೊಂದಿಗೆ ಕರ್ನಾಟಕ ತಂಡದ ಹೋರಾಟವೂ ಅಂತ್ಯವಾಯಿತು. ಇನಿಂಗ್ಸ್‌ ಮುನ್ನಡೆ ಪಡೆದು ಮೂರು ಪಾಯಿಂಟ್‌ ಸಂಗ್ರಹಿಸಿ ದ ಮಧ್ಯಪ್ರದೇಶ ನಾಕೌಟ್‌ ಪ್ರವೇಶಿಸಿತು.

ದ್ವಿತೀಯ ಇನಿಂಗ್ಸ್‌ನಲ್ಲಿ ಸೊಗಸಾದ ಬ್ಯಾಟಿಂಗ್ ಮಾಡಿದ ಮಧ್ಯಪ್ರದೇಶದ  ಸೂರಜ್‌ ವಶಿಷ್ಠ (125, 281ಎಸೆತ, 16 ಬೌಂಡರಿ, 3 ಸಿಕ್ಸರ್‌) ಆಟದ ಬಲದಿಂದ ತಂಡ 124.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 344 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿತು. ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 23 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 70 ರನ್‌ ಗಳಿಸಿದ್ದಾಗ ಆಟಕ್ಕೆ ತೆರೆಬಿತ್ತು.

‘ಎ’ ಮತ್ತು ‘ಬಿ’ ಗುಂಪಿನಲ್ಲಿ ಅಗ್ರ ಐದು ಸ್ಥಾನ ಪಡೆದ ಉತ್ತರ ಪ್ರದೇಶ (45 ಅಂಕ), ಮಹಾರಾಷ್ಟ್ರ (33), ವಿದರ್ಭ (29), ಮಧ್ಯಪ್ರದೇಶ (28) ಮತ್ತು ರಾಜಸ್ಥಾನ (28) ತಂಡಗಳು ನಾಕೌಟ್‌ ತಲುಪಿದವು. 27 ಅಂಕ ಗಳಿಸಿದ ಕರ್ನಾಟಕಕ್ಕೆ ಆರನೇ ಸ್ಥಾನ.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್‌: 275; ದ್ವಿತೀಯ ಇನಿಂಗ್ಸ್‌: 124.4 ಓವರ್‌ಗಳಲ್ಲಿ 4 ವಿಕೆಟ್‌ಗೆ 344 ಡಿಕ್ಲೇರ್ಡ್‌ (ದೇವ್‌ ಬರ್ನಲ್‌ 83, ಸೂರಜ್‌ ವಶಿಷ್ಠ 125, ಬಿ. ವಿಕ್ರಮ್‌ ಸಿಂಗ್‌ 71, ರಾಹುಲ್‌ ಚಂದ್ರಲ್‌ 35; ದೇವದತ್ತ ಪಡಿಕ್ಕಲ್‌ 33ಕ್ಕೆ1). ಕರ್ನಾಟಕ ಮೊದಲ ಇನಿಂಗ್ಸ್‌ 189; ದ್ವಿತೀಯ ಇನಿಂಗ್ಸ್‌ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 70.

ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !