ಸಮಿತ್‌ –ಆರ್ಯನ್‌ ದ್ವಿಶತಕದ ಜೊತೆಯಾಟ

7

ಸಮಿತ್‌ –ಆರ್ಯನ್‌ ದ್ವಿಶತಕದ ಜೊತೆಯಾಟ

Published:
Updated:
Deccan Herald

ಬೆಂಗಳೂರು: ಸಮಿತ್‌ ದ್ರಾವಿಡ್‌ (ಔಟಾಗದೆ 81) ಮತ್ತು ಆರ್ಯನ್‌ (ಔಟಾಗದೆ 118) ಅವರ ದ್ವಿಶತಕದ ಜೊತೆಯಾಟದ ಬಲದಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆ ತಂಡ 14 ವರ್ಷದೊಳಗಿನವರ ಕಟೋನಿಯನ್‌ ಶೀಲ್ಡ್‌ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮಲ್ಯ ಅದಿತಿ ಶಾಲೆ 119ರನ್‌ಗಳಿಂದ ಬೆಥನಿ ಪ್ರೌಢಶಾಲೆ ಎದುರು ಗೆದ್ದಿತು.

ಮೊದಲು ಬ್ಯಾಟ್‌ ಮಾಡಿದ ಮಲ್ಯ ಅದಿತಿ ತಂಡ ಆರ್ಯನ್‌ ಮತ್ತು ಸಮಿತ್‌ ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 208ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಬೆಥನಿ ಶಾಲೆ 17 ಓವರ್‌ಗಳಲ್ಲಿ 89ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ಮಗ ಸಮಿತ್‌, ಬೌಲಿಂಗ್‌ನಲ್ಲೂ (12ಕ್ಕೆ3) ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಮಲ್ಯ ಅದಿತಿ ಶಾಲೆ: 20 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 208.
ಬೆಥನಿ ಪ್ರೌಢಶಾಲೆ: 17 ಓವರ್‌ಗಳಲ್ಲಿ 89.
ಫಲಿತಾಂಶ: ಮಲ್ಯ ಅದಿತಿ ಶಾಲೆಗೆ 119ರನ್‌ ಗೆಲುವು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !