ಶುಕ್ರವಾರ, ಮೇ 7, 2021
26 °C

ಆಮ್ಲಜನಕ ಪೂರೈಕೆಗೆ ಆರ್‌ಸಿಬಿ ನೆರವು; ಬ್ಲೂ ಜೆರ್ಸಿ ಧರಿಸಿ ಸೇನಾನಿಗಳಿಗೆ ಗೌರವ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಬೆಂಗಳೂರು ಸೇರಿದಂತೆ ದೇಶದ ಇತರೆ ನಗರಗಳಲ್ಲಿ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಆರೋಗ್ಯ ಮೂಲಸೌಕರ್ಯಗಳಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರ್ಥಿಕ ನೆರವು ಮಾಡಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಭಾನುವಾರ ಮಾಹಿತಿ ನೀಡಿದ್ದಾರೆ.

ಅದೇ ಹೊತ್ತಿಗೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಮುಂಚೂಣಿಯ ಸೇನಾನಿಗಳಿಗೆ ಗೌರವ ಹಾಗೂ ಏಕತೆಯನ್ನು ಸೂಚಿಸುವ ಸಲುವಾಗಿ ಐಪಿಎಲ್‌ನ ಒಂದು ಪಂದ್ಯದಲ್ಲಿ ಆರ್‌ಸಿಬಿ ನೀಲಿ ಉಡುಪು ಧರಿಸಿ ಕಣಕ್ಕಿಳಿಯಲಿದೆ ಎಂಬುದನ್ನು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

 

 

 

ಬೆಂಗಳೂರು ಹಾಗೂ ಇತರೆ ನಗರಗಳಲ್ಲಿನ ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಆರೋಗ್ಯ ಮೂಲಸೌಕರ್ಯಗಳಲ್ಲಿ ತಕ್ಷಣವೇ ಅಗತ್ಯವಿರುವ ಪ್ರಮುಖ ಅಂಶಗಳನ್ನು ಆರ್‌ಸಿಬಿ ಗುರುತಿಸಿದೆ. ಈ ನಿಟ್ಟಿನಲ್ಲಿ ಆರ್ಥಿಕೆ ನೆರವನ್ನು ಮಾಡಲಿದ್ದೇವೆ ಎಂದು ನಾಯಕ ವಿರಾಟ್ ಕೊಹ್ಲಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

 

ಕಳೆದ ವರ್ಷ ಪಿಪಿಇ ಕಿಟ್‌ಗಳನ್ನು ಧರಿಸಿ ಹೋರಾಟವನ್ನು ಮುನ್ನಡೆಸಿದ ಎಲ್ಲ ಮುಂಚೂಣಿಯ ಸೇನಾನಿಗಳಿಗೆ ಒಗ್ಗಟ್ಟು ಹಾಗೂ ಗೌರವವನ್ನು ಸಲ್ಲಿಸುವ ಸಲುವಾಗಿ ಈ ಋತುವಿನನಲ್ಲಿ ಮುಂಬರುವ ಒಂದು ಪಂದ್ಯದಲ್ಲಿ ಆರ್‌ಸಿಬಿ ನೀಲಿ ಜೆರ್ಸಿಯನ್ನು ತೊಟ್ಟು ಆಡಲಿದ್ದು, ಮ್ಯಾಚ್ ಕಿಟ್‌ನಲ್ಲಿ ವಿಶೇಷ ಸಂದೇಶವನ್ನು ಹೊಂದಿರಲಿದೆ ಎಂದು ವಿವರಿಸಿದ್ದಾರೆ.

 

 

 

ಆರೋಗ್ಯ ಮೂಲಸೌಕರ್ಯಗಳಿಗೆ ಆರ್ಥಿಕ ನೆರವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಆಟಗಾರರು ಸಹಿ ಮಾಡಿದ ಜೆರ್ಸಿಗಳನ್ನು ಹರಾಜಿಗಿಡಲಿದೆ.

 

ಅದೇ ಹೊತ್ತಿಗೆ ಎಲ್ಲರಿಗೂ ಮನೆಯಲ್ಲೇ ಇರುವಂತೆ ಕರೆ ನೀಡಿರುವ ವಿರಾಟ್ ಕೊಹ್ಲಿ, ಅರ್ಹರಾದವರು ಸಾಧ್ಯವಾದಷ್ಟು ಬೇಗ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.

100ರಷ್ಟು ಆಮ್ಲಜನಕ ಸಾಂದ್ರಕ ಪೂರೈಕೆಗಾಗಿ ಆರ್‌ಸಿಬಿ ತಂಡವು ಗಿವ್ ಇಂಡಿಯಾ ಫೌಂಡೇಷನ್‌ನೊಂದಿಗೆ ಕೈಜೋಡಿಸಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು