ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು

Last Updated 6 ಫೆಬ್ರುವರಿ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಅದಿತಿ ರಾಜೇಶ್‌ (14ಕ್ಕೆ4) ಪರಿಣಾಮಕಾರಿ ಬೌಲಿಂಗ್‌ ಮತ್ತು ವೃಂದಾ ದಿನೇಶ್‌ (ಔಟಾಗದೆ 80; 117ಎ, 11ಬೌಂ) ಅವರ ಅರ್ಧಶತಕದ ಬಲದಿಂದ ಕರ್ನಾಟಕ ಮಹಿಳಾ ತಂಡ ಆಂಧ್ರಪ್ರದೇಶದ ಮೂಲಪಾಡುವಿನಲ್ಲಿ ಗುರುವಾರ ನಡೆದ ಬಿಸಿಸಿಐ 23 ವರ್ಷದೊಳಗಿನವರ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬಂಗಾಳ ವಿರುದ್ಧ 8 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿದೆ.

ಮೊದಲು ಬ್ಯಾಟ್‌ ಮಾಡಿದ ಬಂಗಾಳ ತಂಡ ಆರಂಭಿಕ ಆಟಗಾರ್ತಿ ಅಂಕಿತಾ ಚಕ್ರವರ್ತಿ (56; 105ಎ, 4ಬೌಂ) ಅವರ ಅರ್ಧಶತಕದ ನೆರವಿನಿಂದ 48.5 ಓವರ್‌ಗಳಲ್ಲಿ 170ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಎರಡನೆ ಓವರ್‌ನಲ್ಲೇ ಕೆ.ಪ್ರತ್ಯೂಷಾ (1) ವಿಕೆಟ್‌ ಕಳೆದುಕೊಂಡಿತು. ನಂತರ ವೃಂದಾ, ಎಸ್‌.ಶುಭಾ (42; 53ಎ, 7ಬೌಂ) ಹಾಗೂ ನಿಕಿ ಪ್ರಸಾದ್‌ (ಔಟಾಗದೆ 39; 79ಎ, 2ಬೌಂ, 1ಸಿ) ದಿಟ್ಟ ಆಟ ಆಡಿದರು. ಹೀಗಾಗಿ ತಂಡ 41.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರ್‌: ಬಂಗಾಳ; 48.5 ಓವರ್‌ಗಳಲ್ಲಿ 170 (ಅಂಕಿತಾ ಚಕ್ರವರ್ತಿ 56, ಧಾರಾ ಗುಜ್ಜಾರ್‌ 36, ಟಿ.ದಾಸ್‌ ಔಟಾಗದೆ 25, ಸುಶ್ಮಿತಾ ಗಂಗೂಲಿ 10; ಎಸ್‌.ಶುಭಾ 8ಕ್ಕೆ1, ಸಹನಾ ಪವಾರ್‌ 24ಕ್ಕೆ1, ಸಿ.ಪ್ರತ್ಯೂಷಾ 33ಕ್ಕೆ1, ಅದಿತಿ ರಾಜೇಶ್‌ 14ಕ್ಕೆ4).

ಕರ್ನಾಟಕ: 41.4 ಓವರ್‌ಗಳಲ್ಲಿ 2 ವಿಕೆಟ್‌ಗೆ 173 (ಎಸ್‌.ಶುಭಾ 42, ವೃಂದಾ ದಿನೇಶ್‌ ಔಟಾಗದೆ 80, ನಿಕಿ ಪ್ರಸಾದ್‌ ಔಟಾಗದೆ 39).

ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್‌ ಗೆಲುವು ಹಾಗೂ ನಾಲ್ಕು ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT