ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1987: ಚೊಚ್ಚಲ ಹ್ಯಾಟ್ರಿಕ್‌ ಹೆಗ್ಗಳಿಕೆ ತಂದ ಚೇತನ್‌ ಶರ್ಮಾ

Last Updated 8 ಮೇ 2019, 16:30 IST
ಅಕ್ಷರ ಗಾತ್ರ

ಈ ಟೂರ್ನಿಯ ಲೀಗ್‌ ಹಂತದ ಪಾಯಿಂಟ್ಸ್‌ ಪಟ್ಟಿಯಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯಿತು. ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎನ್ನುವ ಹೆಗ್ಗಳಿಕೆ ಹೊಂದಿರುವ ಭಾರತದ ಚೇತನ್‌ ಶರ್ಮಾ ಸಾಧನೆ ಮೂಡಿಬಂದಿದ್ದು ಇದೇ ವಿಶ್ವಕಪ್‌ನಲ್ಲಿ.

l ಲೀಗ್‌ ಹಂತದಲ್ಲಿ ಭಾರತ ಆಡಿದ ಆರು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್‌, ಜಿಂಬಾಬ್ವೆ, ಆಸ್ಟ್ರೇಲಿಯಾ (ಪ್ರತಿ ತಂಡದ ಎದುರು ತಲಾ ಎರಡು ಪಂದ್ಯ) ಎದುರು ಐದರಲ್ಲಿ ಗೆಲುವು ಪಡೆದಿತ್ತು. ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯ ಸೋತಿತ್ತು.

l ‘ಎ’ ಗುಂಪಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ, ‘ಬಿ’ ಗುಂಪಿನಲ್ಲಿ ಪಾಕಿಸ್ತಾನ, ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದು ನಾಕೌಟ್‌ ತಲುಪಿದ್ದವು.

l ಭಾರತ ತಂಡದಲ್ಲಿದ್ದ ಚೇತನ್‌ ಶರ್ಮಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ವಿಶ್ವದ ಮೊದಲ ಬೌಲರ್‌ ಎನ್ನುವ ಹೆಗ್ಗಳಿಕೆ ಪಡೆದರು. ಭಾರತದ ಕೊನೆಯ ಲೀಗ್‌ ಪಂದ್ಯದಲ್ಲಿ ಚೇತನ್‌ ನ್ಯೂಜಿಲೆಂಡ್ ಎದುರು ಈ ಸಾಧನೆ ಮಾಡಿದರು.

lನ್ಯೂಜಿಲೆಂಡ್‌ನ ಕೇನ್‌ ರುದರ್‌ಫೋರ್ಡ್‌, ಇಯಾನ್‌ ಸ್ಮಿತ್‌ ಮತ್ತು ಎವಿನ್‌ ಚೆಟ್‌ಫೀಲ್ಡ್‌ ವಿಕೆಟ್ ಪಡೆದು ಹ್ಯಾಟ್ರಿಕ್‌ ಗೌರವ ಗಳಿಸಿದರು.

l ಭಾರತ ಮತ್ತು ಪಾಕಿಸ್ತಾನದ ಜಂಟಿ ಆಶ್ರಯದಲ್ಲಿ ನಡೆದ ಚೊಚ್ಚಲ ವಿಶ್ವಕಪ್‌ ಟೂರ್ನಿಯ ಪಾಕಿಸ್ತಾನದ ಮೊದಲ ಪಂದ್ಯ ನಡೆದಿದ್ದು ಹೈದರಾಬಾದ್‌ನ ನಿಯಾಜ್‌ ಕ್ರೀಡಾಂಗಣದಲ್ಲಿ. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ ಪಾಕ್‌ ತಂಡ 15 ರನ್‌ಗಳ ಗೆಲುವು ಪಡೆದಿತ್ತು.

l ಕ್ರಮವಾಗಿ ‘ಎ’ ಮತ್ತು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಜಿಂಬಾಬ್ವೆ ಹಾಗೂ ಶ್ರೀಲಂಕಾ ತಂಡಗಳು ಒಂದೂ ಗೆಲುವಿಲ್ಲದೇ ವಿಶ್ವಕಪ್‌ನಲ್ಲಿ ಹೋರಾಟ ಮುಗಿಸಿದವು. ಆಡಿದ ಆರೂ ಪಂದ್ಯಗಳಲ್ಲಿ ಉಭಯ ತಂಡಗಳು ಸೋತಿದ್ದವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT