ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಹೆಸರಿಗೂ ಶಾರುಖ್‌ ಸಿನಿಮಾ ಪಾತ್ರಕ್ಕೂ ಇತ್ತೇ ನಂಟು?

Last Updated 30 ಮಾರ್ಚ್ 2022, 1:10 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಚಿತ್ರಕ್ಕೂ ಭಾರತ ಕ್ರಿಕೆಟ್‌ ತಂಡದ ಉಪ ನಾಯಕ ಕೆ.ಎಲ್‌.ರಾಹುಲ್‌ ಅವರ ಹೆಸರಿಗೂ ಇರುವ ಸಂಬಂಧವನ್ನು ಸ್ವತಃ ರಾಹುಲ್‌ ತೆರೆದಿಟ್ಟಿದ್ದಾರೆ.

ಐಪಿಎಲ್‌ನ ಹೊಸ ತಂಡ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ನಾಯಕನಾಗಿರುವ ರಾಹುಲ್‌ಗೆ 'ರಾಹುಲ್‌' ಎಂದು ನಾಮಕರಣ ಆಗಿದ್ದು, ಶಾರುಖ್‌ ಅಭಿನಯದ ಚಿತ್ರದಿಂದ ಸ್ಫೂರ್ತಿ ಪಡೆದು ಎಂದು ಅವರ ತಾಯಿ ಸುಳ್ಳಿನ ಕಥೆ ಹೇಳಿದ್ದರಂತೆ.

'ನನ್ನ ತಾಯಿ ಶಾರುಖ್‌ ಅವರ ದೊಡ್ಡ ಅಭಿಮಾನಿಯಂತೆ ಹಾಗೂ 90ರ ದಶಕದಲ್ಲಿ ಅವರು ಅಭಿನಯಿಸುತ್ತಿದ್ದ ಪಾತ್ರಗಳಿಗೆ ರಾಹುಲ್‌ ಎಂದೇ ಹೆಸರಿಡಲಾಗಿತ್ತು ಎಂದು ಅಮ್ಮ ಹೇಳುತ್ತಿದ್ದರು. ಅದೇ ಕಥೆಯನ್ನು ನಾನೂ ನಂಬಿದ್ದೆ. ಹೆಚ್ಚು ಬಾಲಿವುಡ್‌ ಸಿನಿಮಾಗಳನ್ನು ನೋಡುವ ಸ್ನೇಹಿತನೊಬ್ಬನಿಗೆ ಇದನ್ನು ಹೇಳಿದ್ದೆ, ಅದಕ್ಕೆ ಆತ, ಶಾರುಖ್‌ ರಾಹುಲ್‌ ಪಾತ್ರದಲ್ಲಿ ಮೊದಲು ಅಭಿನಯಿಸಿದ್ದು 1994. ಆದರೆ ನೀನು ಹುಟ್ಟಿದ್ದು 1992 ಎಂದು ಹೇಳಿದ್ದ...' ಎಂದು ರಾಹುಲ್‌ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಅವರು 'ಬ್ರೇಕ್‌ಫಾಸ್ಟ್‌ ವಿಥ್‌ ಚಾಂಪಿಯನ್ಸ್ ಸೀಸನ್‌ 7' ಶೋನಲ್ಲಿ ಮಾತನಾಡಿದ್ದಾರೆ.

ನನಗೆ ಶಾರುಖ್‌ ಪಾತ್ರದ ಪ್ರಭಾವದಿಂದ ರಾಹುಲ್‌ ಹೆಸರು ಬಂದಿಲ್ಲ ಎಂಬುದನ್ನು ತಡವಾಗಿ ತಿಳಿದೆ ಎಂದು ಹೇಳಿದ್ದಾರೆ. ಆದರೆ, ಸುನಿಲ್ ಗವಾಸ್ಕರ್‌ ಅವರ ದೊಡ್ಡ ಅಭಿಮಾನಿಯಾಗಿದ್ದ ರಾಹುಲ್‌ ಅವರ ತಂದೆ 'ರಾಹುಲ್‌' ಹೆಸರಿಟ್ಟಿದ್ದರ ಬಗ್ಗೆ ಮತ್ತೊಂದು ಕಥೆ ಹೇಳಿದ್ದಾರೆ.

ಸುನಿಲ್‌ ಗವಾಸ್ಕರ್‌ ಅವರು ಅವರ ಮಗನಿಗೆ ರೋಹನ್‌ ಎಂದು ಹೆಸರಿಟ್ಟಿದ್ದರು. ರಾಹುಲ್‌ ಅವರ ತಂದೆಗೂ ತನ್ನ ಮಗನಿಗೆ ರೋಹನ್‌ ಎಂದು ಹೆಸರಿಡುವ ಇಚ್ಛೆಯಾಗಿತ್ತು. ಅವರು ರೋಹನ್‌ ಹೆಸರನ್ನು ತಪ್ಪಾಗಿ ಅರ್ಥೈಸಿಕೊಂಡು 'ರಾಹುಲ್‌' ಹೆಸರಿಟ್ಟರು ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಖುಷಿ

ಕ್ರಿಕೆಟಿಗ ರಾಹುಲ್‌ ಅವರಿಗೆ ಆರ್‌ಬಿಐನಲ್ಲಿ ನೌಕರಿ ಸಿಕ್ಕಿದ್ದಕ್ಕೆ ಅವರ ಪಾಲಕರು ತುಂಬ ಸಂತೋಷಪಟ್ಟಿದ್ದರಂತೆ. 'ಭಾರತ ಕ್ರಿಕೆಟ್‌ ತಂಡಕ್ಕೆ ನಾಲ್ಕು ವರ್ಷ ಆಡಿದ್ದರೂ, ಅವರಿಗೆ ಹೆಚ್ಚು ಸಂತಸ ತಂದಿದ್ದು ಕೇಂದ್ರ ಸರ್ಕಾರದ ನೌಕರಿ ಸಿಕ್ಕಿತೆಂದು...' ಎಂಬುದನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT