ಗುರುವಾರ , ಜೂನ್ 24, 2021
25 °C

ಗಲಾಟೆಯಲ್ಲಿ ಭಾಗಿಯಾಗಿಲ್ಲ: ಡೇವಿಡ್ ವಾರ್ನರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಾಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಡೇವಿಡ್ ವಾರ್ನರ್ ಮತ್ತು ವೀಕ್ಷಕ ವಿವರಣೆಕಾರ ಮೈಕಲ್ ಸ್ಲೇಟರ್ ನಡುವೆ ಮಾಲ್ಡಿವ್ಸ್ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ಶನಿವಾರ ತಡರಾತ್ರಿ ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ. ಆದರೆ ಈ ವರದಿಗಳನ್ನು ವಾರ್ನರ್ ಹಾಗೂ ಸ್ಲೇಟರ್ ಅವರು ಅಲ್ಲಗಳೆದಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಬೇಕಿದ್ದ ಆಟಗಾರರು ಸ್ವಲ್ಪ ದಿನಗಳ ಕಾಲ ಮಾಲ್ಡಿವ್ಸ್‌ನಲ್ಲಿ ಕ್ವಾರಂಟೈನ್ ವಾಸದಲ್ಲಿದ್ದಾರೆ.

ಮಾಲ್ಡಿವ್ಸ್‌ನ ರೆಸಾರ್ಟ್‌ನಲ್ಲಿರುವ ವಾರ್ನರ್ ಹಾಗೂ ಸ್ಲೇಟರ್ ನಡುವೆ ವಾಗ್ವಾದ ನಡೆದಿದೆ ಎಂದು ‘ಡೈಲಿ ಟೆಲಿಗ್ರಾಫ್’ ವರದಿ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು