ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ನಲ್ಲಿ ಎಬಿಡಿ ಮರಳುವವರಿದ್ದರು: ಡಿಕಾಕ್

Last Updated 22 ಜುಲೈ 2020, 15:59 IST
ಅಕ್ಷರ ಗಾತ್ರ

ನವದೆಹಲಿ: ಎಬಿ ಡಿವಿಲಿಯರ್ಸ್‌ ಅವರು ಈ ವರ್ಷ ಟಿ20 ವಿಶ್ವಕಪ್ ಟೂರ್ನಿ ನಡೆದಿದ್ದರೆ ಕಣಕ್ಕೆ ಮರಳುವ ಇರಾದೆಯಲ್ಲಿದ್ದರು ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕ್ವಿಂಟನ್ ಡಿ ಕಾಕ್ ಹೇಳಿದ್ದಾರೆ.

ಇದೇ ಅಕ್ಟೋಬರ್–ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಟೂರ್ನಿ ನಡೆಯಬೇಕಿತ್ತು. ಕೋವಿಡ್ –19 ಹಾವಳಿಯ ಕಾರಣ ಮುಂದೂಡಲಾಗಿದೆ. ಎಬಿಡಿ 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅದರ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿಯಲ್ಲಿ ಮಾತ್ರ ಆಡಿದ್ದರು. ಅವರು ತಮ್ಮ ರಾಷ್ಟ್ರದ ತಂಡಕ್ಕೆ ಮರಳುವ ಕುರಿತ ಮಾತುಗಳು ಹರಿದಾಡಿದ್ದವು. ಆದರೆ ಸ್ವತಃ ಅವರೇ ಅವುಗಳನ್ನು ಅಲ್ಲಗಳೆದಿದ್ದರು.

’ಅವರು ಖಂಡಿತವಾಗಿಯೂ ಕಣಕ್ಕೆ ಇಳಿಯುತ್ತಿದ್ದರು. ಎಬಿಡಿಯಂತಹ ಆಟಗಾರ ತಂಡದಲ್ಲಿರಲೇಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು‘ ಎಂದು ಡಿಕಾಕ್ ಸ್ಟಾರ್ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

’ಎಬಿಡಿ ಅವರಂತಹ ಆಟಗಾರನನ್ನು ಯಾವ ತಂಡವೂ ಬೇಡ ಎನ್ನಲು ಸಾಧ್ಯವೇ ಇಲ್ಲ. ಆದ್ದರಿಂದಲೇ ನಮಗೂ ಅವರು ಆಡಲೇ ಬೇಕು ಎಂಬ ಅದಮ್ಯ ಆಸೆಯಿತ್ತು. ಆದರೆ ಈಗ ಟಿ20 ವಿಶ್ವಕಪ್ ಮುಂದೆ ಯಾವಾಗ ನಡೆಯಲಿದೆಯೋ ನೋಡಬೇಕು‘ ಎಂದರು.

’ನಾನು ಗ್ರೆಮ್ ಸ್ಮಿತ್, ಬೌಷ್ ಮತ್ತು ಫಾಫ್ ಡು ಪ್ಲೆಸಿಯವರೊಂದಿಗೆ ಈ ಕುರಿತು ಮಾತನಾಡಿದ್ದೇನೆ. ಅವರಿಗೂ ಎಬಿಡಿ ತಂಡಕ್ಕೆ ಮರಳಬೇಕು ಎಂಬ ಅಪೇಕ್ಷೆ ಇದೆ. ದಾರಿ ಇನ್ನೂ ಬಹಳ ದೂರವಿದೆ. ಐಪಿಎಲ್ ಕೂಡ ನಡೆಯಲಿದೆ. ಅದರಲ್ಲಿ ನಾನೂ ಕೂಡ ಆಡಬೇಕು. ಅಷ್ಟರಲ್ಲಿ ನಾನು ಲಯಕ್ಕೆ ಮರಳುವುದು ಅವಶ್ಯಕ‘ ಎಂದು ಡಿಕಾಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT