ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಡ್ರೆಡ್ ಬಾಲ್ ಕ್ರಿಕೆಟ್: ಲಂಡನ್ ಸ್ಪಿರಿಟ್ಸ್‌ ವನಿತೆಯರಿಗೆ ಚೊಚ್ಚಲ ಕಿರೀಟ

Published : 19 ಆಗಸ್ಟ್ 2024, 14:30 IST
Last Updated : 19 ಆಗಸ್ಟ್ 2024, 14:30 IST
ಫಾಲೋ ಮಾಡಿ
Comments

ಲಂಡನ್: ಲಂಡನ್ ಸ್ಪಿರಿಟ್ಸ್‌ ತಂಡವು ಇದೇ ಮೊದಲ ಬಾರಿ ನಡೆದ ಹಂಡ್ರೆಡ್‌ ಬಾಲ್ ಕ್ರಿಕೆಟ್ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡಿತು. 

ಭಾನುವಾರ ತಡರಾತ್ರಿ (ಭಾರತೀಯ ಕಾಲಮಾನ) ಮುಗಿದ ಫೈನಲ್‌ನಲ್ಲಿ ಸ್ಪಿರಿಟ್ಸ್ ತಂಡವು 4 ವಿಕೆಟ್‌ಗಳಿಂದ ವೆಲ್ಷ್ ಫೈರ್ ವಿರುದ್ಧ ಜಯಿಸಿತು. ಈ ತಂಡದಲ್ಲಿದ್ದ ಭಾರತದ ದೀಪ್ತಿ ಶರ್ಮಾ (23ಕ್ಕೆ1, ಔಟಾಗದೆ 16) ಆಲ್‌ರೌಂಡ್ ಆಟವಾಡಿ ಗಮನ ಸೆಳೆದರು. 

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಮಿ ಬೀಮಾಂಟ್ ನಾಯಕತ್ವದ ವೆಲ್ಷ್‌ ಫೈರ್ ತಂಡವು 100 ಎಸೆತಗಳಲ್ಲಿ 8 ವಿಕೆಟ್‌ಗಳಿಗೆ 115 ರನ್‌ಗಳ ಮೊತ್ತ ಗಳಿಸಿತು. ಅರ್ಧಶತಕ ಗಳಿಸಿದ  ಜೆಸ್ ಜಾನ್ಸೆನ್ (54; 41ಎ. 4X8), ಬೀಮಾಂಟ್ (21; 16ಎ) ಹಾಗೂ ಹೆಯಲಿ ಮ್ಯಾಥ್ಯೂಸ್ (22; 26ಎ) ಅವರ ಉತ್ತಮ ಬ್ಯಾಟಿಂಗ್‌ನಿಂದ ತಂಡವು ಉತ್ತಮ ಗಳಿಸಿತು. 

ಲಂಡನ್ ತಂಡದ ಬೌಲರ್‌ಗಳಾದ ಇವಾ ಗ್ರೇ 20 ಎಸೆತ ಹಾಕಿ 26 ರನ್‌ ಕೊಟ್ಟು ಎರಡು ವಿಕೆಟ್ ಪಡೆದರು. ಸಾರಾ ಗ್ಲೆನ್ 20 ಎಸೆತಗಳಲ್ಲಿ 17 ರನ್‌ ಕೊಟ್ಟು 2 ವಿಕೆಟ್ ಪಡೆದರು. ದೀಪ್ತಿ ಕೂಡ 20 ಎಸೆತಗಳಲ್ಲಿ, 23 ರನ್‌ ಕೊಟ್ಟು ಒಂದು ವಿಕೆಟ್ ಗಳಿಸಿದರು. 

ಗುರಿ ಬೆನ್ನಟ್ಟಿದ ಲಂಡನ್ ತಂಡಕ್ಕೆ ಆರಂಭಿಕ ಬ್ಯಾಟರ್ ಜಾರ್ಜಿಯಾ ರೆಡ್‌ಮೈನ್ (34; 32ಎ, 4X3) ಅವರು ಆಸರೆಯಾದರು. ತಂಡವು 98 ಎಸೆತಗಳಲ್ಲಿ 2 ವಿಕೆಟ್‌ಗಳಿಗೆ 118 ರನ್‌ ಗಳಿಸಿತು. 

ಸಂಕ್ಷಿಪ್ತ ಸ್ಕೋರು: ವೆಲ್ಷ್ ಫೈರ್: 100 ಎಸೆತಗಳಲ್ಲಿ 8ಕ್ಕೆ115 (ಟಾಮಿ ಬೀಮಾಂಟ್ 21, ಹೆಯಲಿ ಮ್ಯಾಥ್ಯೂಸ್ 22, ಜೆಸ್ ಜಾನ್ಸೆನ್ 54, ಇವಾ ಗ್ರೇ 26ಕ್ಕೆ2, ಸಾರಾ ಗ್ಲೆನ್ 17ಕ್ಕೆ2) ಲಂಡನ್ ಸ್ಪಿರಿಟ್: 98 ಎಸೆತಗಳಲ್ಲಿ 6ಕ್ಕೆ118 (ಜಾರ್ಜಿಯಾ ರೆಡ್‌ಮೈನ್ 34, ಹೀಥರ್ ನೈಟ್ 24, ಡೇನಿಯಲ್ ಗಿಬ್ಸನ್ 22, ಶಬ್ನಿಮ್ ಇಸ್ಮಾಯಿಲ್ 24ಕ್ಕೆ3) ಫಲಿತಾಂಶ: ಲಂಡನ್ ಸ್ಪಿರಿಟ್ ತಂಡಕ್ಕೆ 4 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಜಾರ್ಜಿಯಾ ರೆಡ್‌ಮೈನ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT