ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಧರ್ ಟ್ರೋಫಿ: ಆಕಾಶದೀಪ್ -ಶಹಬಾಜ್ ಉತ್ತಮ ಬೌಲಿಂಗ್, ಪೂರ್ವ ವಲಯದ ಶುಭಾರಂಭ

Published 24 ಜುಲೈ 2023, 16:24 IST
Last Updated 24 ಜುಲೈ 2023, 16:24 IST
ಅಕ್ಷರ ಗಾತ್ರ

ಪುದುಚೇರಿ: ಆಕಾಶ್ ದೀಪ್ ಮತ್ತು ಶಹಬಾಜ್ ಅಹಮದ್ ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಪೂರ್ವ ವಲಯ ತಂಡವು ಸೋಮವಾರ ಆರಂಭವಾದ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಕೇಂದ್ರ ವಲಯವನ್ನು ಸೋಲಿಸಿತು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಪೂರ್ವ ವಲಯ ತಂಡವು ಕೇಂದ್ರ ವಲಯವನ್ನು 207 ರನ್‌ಗಳಿಗೆ ಕಟ್ಟಿಹಾಕಿತು.  ಮಧ್ಯಮವೇಗಿ ಆಕಾಶ್ ದೀಪ್ ಮತ್ತು ಎಡಗೈ ಸ್ಪಿನ್ನರ್ ಶಹಬಾಜ್ ಅಹಮದ್  ತಲಾ ಮೂರು ವಿಕೆಟ್ ಗಳಿಸಿ ಕೇಂದ್ರ ವಲಯಕ್ಕೆ ಪೆಟ್ಟುಕೊಟ್ಟರು. ಅವರಿಗೆ ಮಣಿಶಂಕರ್ ಮುರಾಸಿಂಗ್ ಉತ್ತಮ ಜೊತೆ ನೀಡಿದರು. 

ಅರ್ಧಶತಕ ಗಳಿಸಿದ್ದ ರಿಂಕು ಸಿಂಗ್(54; 63ಎ) ಸೇರಿದಂತೆ ಕೆಳಕ್ರಮಾಂಕದ ಮೂವರು ಆಟಗಾರರ ವಿಕೆಟ್ ಗಳಿಸಿದರು. ಇದರಿಂದಾಗಿ ತಂಡವು ಸಾಧಾರಣ ಮೊತ್ತ ಗಳಿಸಿತು. 

ಗುರಿ ಬೆನ್ನಟ್ಟಿದ ಪೂರ್ವ ವಲಯ ತಂಡದ ಆರಂಭಿಕ ಬ್ಯಾಟರ್ ಉತ್ಕರ್ಷ್ ಸಿಂಗ್ (89; 104ಎ,4X11, 6X3) ಮತ್ತು ಅಭಿಮನ್ಯು ಈಶ್ವರನ್ (38; 55ಎ, 4X5) ಮೊದಲ ವಿಕೆಟ್‌ ಜೊತೆಯಾಟದಲ್ಲಿ 91 ರನ್‌ ಸೇರಿಸಿದರು. ಇದರಿಂದಾಗಿ ತಂಡವು 46.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 208 ರನ್‌ ಗಳಿಸಿ ಗೆದ್ದಿತು.

ಪಾಂಚಾಲ್ ಅಬ್ಬರ: ಅಜೇಯ 99 ರನ್ ಗಳಿಸಿದ ಪ್ರಿಯಾಂಕ್ ಪಾಂಚಾಲ್ ಮತ್ತು 85 ರನ್ ಹೊಡೆದ ಹರ್ವಿಕ್ ದೇಸಾಯಿ ಅವರ ಆಟದಿಂದ ಪಶ್ಚಿಮ ವಲಯವು ಈಶಾನ್ಯ ವಲಯದ ವಿರುದ್ಧ  9 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

ಟಾಸ್ ಗೆದ್ದ ಪಶ್ಚಿಮ ವಲಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಈಶಾನ್ಯ ತಂಡವು 47 ಓವರ್‌ಗಳಲ್ಲಿ 207 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಅರ್ಜನ್ ನಾಗಸವಾಲಾ (31ಕ್ಕೆ3), ಶಮ್ಸ್ ಮುಲಾನಿ (37ಕ್ಕೆ2) ಮತ್ತು ಶಿವಂ ದುಬೆ (36ಕ್ಕೆ2) ಬೌಲಿಂಗ್ ಮುಂದೆ ಈಶಾನ್ಯ ತಂಡ ಮಣಿಯಿತು. ಗುರಿ ಬೆನ್ನಟ್ಟಿದ ಪಾಂಚಾಲ್ ಬಳಗವು 25.1 ಓವರ್‌ಗಳಲ್ಲಿ 1 ವಿಕೆಟ್‌ಗೆ 208 ರನ್ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರು:

ಕೇಂದ್ರ ವಲಯ: 50 ಓವರ್‌ಗಳಲ್ಲಿ 207 (ಆರ್ಯನ್ ಜುಯಾಲ್ ಔಟಾಗದೆ 39, ಶಿವಂ ಚೌಧರಿ 22, ರಿಂಕು ಸಿಂಗ್ 54, ಕರಣ್ ಶರ್ಮಾ 32, ಮಣಿಶಂಕರ್ ಮುರಾಸಿಂಗ್ 29ಕ್ಕೆ3, ಆಕಾಶ್ ದೀಪ್ 35ಕ್ಕೆ3, ಶಹಬಾಜ್ ಅಹಮದ್ 30ಕ್ಕೆ3) ಪೂರ್ವ ವಲಯ: 46.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 208 (ಅಭಿಮನ್ಯು ಈಶ್ವರನ್ 38, ಉತ್ಕರ್ಷ್ ಸಿಂಗ್ 89, ಶುಭ್ರಾಂಶು ಸೇನಾಪತಿ ಔಟಾಗದೆ 33, ಕರಣ್ ಶರ್ಮಾ 35ಕ್ಕೆ3) ಫಲಿತಾಂಶ: ಪೂರ್ವ ವಲಯಕ್ಕೆ 6 ವಿಕೆಟ್‌ಗಳ ಜಯ.

ಈಶಾನ್ಯ ವಲಯ: 47 ಓವರ್‌ಗಳಲ್ಲಿ 207 (ನೀಲೇಶ್ ಲಾಮಿಚಾನೆ 22, ಜೆಹು ಆ್ಯಂಡರ್ಸನ್ 24, ಲ್ಯಾಂಗ್‌ಲೊನಿಯಾಂಬ ಕೀಶಾಂಗ್‌ಬನ್  30, ರೆಕ್ಸ್ ಸಿಂಗ್ 23, ಪಾಲ್ಜಾರ್ ತಮಾಂಗ್ 29, ಇಮ್ಲಿವತಿ ಲೆಮ್ತೂರ್ 38, ಅರ್ಜನ್ ನಾಗವಾಸವಾಲಾ 31ಕ್ಕೆ3, ಶಮ್ಸ್ ಮುಲಾನಿ 37ಕ್ಕೆ2, ಶಿವಂ ದುಬೆ 36ಕ್ಕೆ2) ಪಶ್ಚಿಮ ವಲಯ: 25.1 ಓವರ್‌ಗಳಲ್ಲಿ 1 ವಿಕೆಟ್‌ಗೆ 208 (ಹರ್ವಿಕ್ ದೇಸಾಯಿ 85, ಪ್ರಿಯಾಂಕ್ ಪಾಂಚಾಲ್ ಔಟಾಗದೆ 99, ರಾಹುಲ್ ತ್ರಿಪಾಠಿ ಔಟಾಗದೆ 13, ಲೀ ಯಾಂಗ್ ಲೆಪ್ಚಾ 29ಕ್ಕೆ1) ಫಲಿತಾಂಶ:ಪಶ್ಚಿಮ ವಲಯಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT