ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಧರ್ ಟ್ರೋಫಿ: ಮಯಂಕ್ ಚೆಂದದ ಬ್ಯಾಟಿಂಗ್; ದಕ್ಷಿಣಕ್ಕೆ ಜಯ

ದೇವಧರ್ ಟ್ರೋಫಿ: ಸಾಯಿಕಿಶೋರ್, ವಾಷಿಂಗ್ಟನ್ ಉತ್ತಮ ಬೌಲಿಂಗ್
Published 26 ಜುಲೈ 2023, 15:36 IST
Last Updated 26 ಜುಲೈ 2023, 15:36 IST
ಅಕ್ಷರ ಗಾತ್ರ

ಪುದುಚೇರಿ: ಬೌಲರ್‌ಗಳಿಗೆ ಉತ್ತಮ ನೆರವು ನೀಡುತ್ತಿದ್ದ ಪಿಚ್‌ನಲ್ಲಿಯೂ ಮಯಂಕ್ ಅಗರವಾಲ್ ಚೆಂದದ ಬ್ಯಾಟಿಂಗ್ ಮಾಡಿದರು. ಆದರೆ ಕೇವಲ ಎರಡು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.

ಮಯಂಕ್ (98; 115ಎ, 4X9) ಆಟದ ಬಲದಿಂದ ದಕ್ಷಿಣ ವಲಯ ತಂಡವು ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ  12 ರನ್‌ಗಳಿಂದ ಪಶ್ಚಿಮ ವಲಯವನ್ನು ಸೋಲಿಸಿತು.

ಟಾಸ್ ಗೆದ್ದ ಪಶ್ಚಿಮ ವಲಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಯಂಕ್ ಏಕಾಂಗಿ ಹೋರಾಟದ ಬಲದಿಂದ ದಕ್ಷಿಣ ವಲಯವು 46.4 ಓವರ್‌ಗಳಲ್ಲಿ 206 ರನ್ ಗಳಿಸಿತು. ಅದಕ್ಕುತ್ತರವಾಗಿ ಪಶ್ಚಿಮ ವಲಯವು 36.2 ಓವರ್‌ಗಳಲ್ಲಿ 194 ರನ್ ಗಳಿಸಿ ಕುಸಿಯಿತು. ದಕ್ಷಿಣ ತಂಡದ ರವಿಶ್ರೀನಿವಾಸನ್ ಸಾಯಿಕಿಶೋರ್ (44ಕ್ಕೆ3) ಮತ್ತು ವಾಷಿಂಗ್ಟನ್ ಸುಂದರ್ (34ಕ್ಕೆ2) ಅವರ ದಾಳಿ ಪರಿಣಾಮಕಾರಿಯಾಗಿತ್ತು. ಕರ್ನಾಟಕದ ತ್ರಿವಳಿ ಮಧ್ಯಮವೇಗಿಗಳಾದ ವಿದ್ವತ್, ವೈಶಾಖ ಮತ್ತು ಕೌಶಿಕ್ ತಲಾ ಒಂದು ವಿಕೆಟ್ ಗಳಿಸಿದರು.

ಮಯಂಕ್ ಮಿಂಚು: ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ತಂಡವು 16 ಓವರ್‌ಗಳಲ್ಲಿ 75 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ದೇವದತ್ತ ಪಡಿಕ್ಕಲ್ ಸೇರಿದಮತೆ ಆರು ಬ್ಯಾಟರ್‌ಗಳು ಒಂದಂಕಿ ಮಾತ್ರ ದಾಖಲಿಸಿದರು.

ಆದರೆ ತಾಳ್ಮೆ ಮತ್ತು ಕೌಶಲಪೂರ್ಣ ಬ್ಯಾಟಿಂಗ್ ಮಾಡಿದ ಮಯಂಕ್ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದರು. 36ನೇ ಓವರ್‌ನಲ್ಲಿ ಮಯಂಕ್ ವಿಕೆಟ್ ಗಳಿಸಿದ ಪಾರ್ಥ್ ಭೂತ್ ಸಂಭ್ರಮಿಸಿದರು. ಆದರೆ ಶತಕದಂಚಿನಲ್ಲಿ ಮಯಂಕ್ ನಿರಾಶೆಗೊಂಡರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ವಲಯ: 46.4 ಓವರ್‌ಗಳಲ್ಲಿ206 (ಮಯಂಕ್ ಅಗರವಾಲ್ 98, ಅರುಣ ಕಾರ್ತಿಕ್ 23, ವೈಶಾಖ ವಿಜಯಕುಮಾರ್ ಔಟಾಗದೆ 20, ವಿದ್ವತ್ ಕಾವೇರಪ್ಪ 19, ರಾಜವರ್ಧನ್ ಹಂಗರಗೇಕರ್ 47ಕ್ಕೆ2, ಶಮ್ಸ್ ಮುಲಾನಿ 42ಕ್ಕೆ2, ಪಾರ್ಥ್ ಭಟ್ 25ಕ್ಕೆ3) ಪಶ್ಚಿಮ ವಲಯ: 36.2ಓವರ್‌ಗಳಲ್ಲಿ 194 (ಸರ್ಫರಾಜ್ ಖಾನ್ 42, ಶಿವಂ ದುಬೆ 29, ಅತಿಥ್ ಶೇಟ್ 40, ರವಿಶ್ರೀನಿವಾಸನ್ ಸಾಯಿಕಿಶೋರ್ 44ಕ್ಕೆ3, ವಾಷಿಂಗ್ಟನ್ ಸುಂದರ್ 34ಕ್ಕೆ2, ವೈಶಾಖ ವಿಜಯಕುಮಾರ್ 49ಕ್ಕೆ1, ವಿ.ಕೌಶಿಕ್ 19ಕ್ಕೆ1, ವಿದ್ವತ್‌ ಕಾವೇರಪ್ಪ 44ಕ್ಕೆ1)  ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 12 ರನ್ ಜಯ.

ಉತ್ತರ ವಲಯ: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 307 (ಪ್ರಭಸಿಮ್ರನ್ 121, ಹರ್ಷಿತ್ ರಾಣಾ 24, ನಿತೀಶ್ ರಾಣಾ 51, ಮನದೀಪ್ ಸಿಂಗ್ 43, ಯಶ್ ಠಾಕೂರ್ 69ಕ್ಕೆ2, ವೆಂಕಟೇಶ್ ಅಯ್ಯರ್ 50ಕ್ಕೆ2)  ಕೇಂದ್ರ ವಲಯ: 47.4 ಓವರ್‌ಗಳಲ್ಲಿ 259 (ಶಿವಂ ಚೌಧರಿ 51, ಯಶ್ ದುಬೆ 78, ಉಪೇಂದ್ರ ಯಾದವ್ 52, ಕರಣ್ ಶರ್ಮಾ 23, ಹರ್ಷಿತ್ ರಾಣಾ 48ಕ್ಕೆ2, ಮಯಂಕ್ ಯಾದವ್ 47ಕ್ಕೆ3, ನಿತೀಶ್ ರಾಣಾ 48ಕ್ಕೆ4) ಫಲಿತಾಂಶ; ಉತ್ತರ ವಲಯಕ್ಕೆ 48 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT