ವಡೋದರ (ಪಿಟಿಐ): ಬರೋಡಾ ಕ್ರಿಕೆಟ್ ತಂಡದ ಆಟಗಾರ ವಿಷ್ಣು ಸೋಳಂಕಿ ಇತ್ತೀಚೆಗಷ್ಟೇ ಪುತ್ರಿಯ ಸಾವಿನ ಶೋಕ ಅನುಭವಿಸಿದ್ದರು. ಇದೀಗ ಅವರಿಗೆ ಪಿತೃವಿಯೋಗದ ದುಃಖ ಅವರನ್ನು ಕಾಡಿದೆ.

ಭಾನುವಾರ ಅವರ ತಂದೆ ನಿಧನರಾಗಿದ್ದಾರೆ. ಆದರೆ ಎದೆಗುಂದದ ವಿಷ್ಣು ರಣಜಿ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ.

‘ವಿಷ್ಣು ತಂದೆ ನಿಧನರಾಗಿದ್ದಾರೆ. ಆದರೆ, ವಿಷ್ಣು ಅವರು ವಡೋದರಕ್ಕೆ ಬರುತ್ತಿಲ್ಲ. ಮೂರನೇ ಪಂದ್ಯ ಆಡಲು ನಿರ್ಧರಿಸಿರುವ ಅವರು ಬಯೋಬಬಲ್ ತೊರೆದು ಬರುತ್ತಿಲ್ಲ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.

ಫೆಬ್ರುವರಿ 10ರಂದು ಅವರ ನವಜಾತ ಹೆಣ್ಣುಮಗು ಸಾವಿಗೀಡಾಯಿತು. ಆದರೆ ಈ ದುಃಖವನ್ನು ನುಂಗಿಕೊಂಡು ಟೂರ್ನಿಯ ಎರಡನೇ ಪಂದ್ಯದಲ್ಲಿ ಆಡಿದ್ದ ವಿಷ್ಣು ಚಂಡೀಗಡ ತಂಡದ ಎದುರು ಶತಕ ಬಾರಿಸಿದ್ದರು. ಪಂದ್ಯದ ಕೊನೆಯ ದಿನವಾದ ಭಾನುವಾರ ತಂದೆಯ ನಿಧನದ ಸುದ್ದಿ ಅವರಿಗೆ ಸಿಕ್ಕಿತ್ತು.

‘ತಮ್ಮ ಹೆಣ್ಣುಮಗು ತೀರಿಕೊಂಡ ನಂತರ ಅವರು ತಂಡಕ್ಕೆ ಮರಳಿದ್ದರು. ಆದರೆ ಬಯೋಬಬಲ್ ನಿಯಮದ ಪ್ರಕಾರ ಕ್ವಾರಂಟೈನ್ಗೆ ತೆರಳಿದ್ದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದರು‘ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭುವನೇಶ್ವರದಲ್ಲಿ ಮಾರ್ಚ್ 3ರಿಂದ ನಡೆಯಲಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಬರೋಡಾ ತಂಡವು ಹೈದರಾಬಾದ್ ಎದುರು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.