ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ನಿಯಲ್ಲೂ ಕ್ರಿಕೆಟ್‌ ಉಚಿತ ನೇರಪ್ರಸಾರ, ಜಿಯೊಗೆ ಸೆಡ್ಡು

Published 9 ಜೂನ್ 2023, 16:17 IST
Last Updated 9 ಜೂನ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್): ಜಿಯೊಸಿನಿಮಾವು ಐಪಿಎಲ್‌ ಪಂದ್ಯಗಳನ್ನು ಉಚಿತವಾಗಿ ನೇರಪ್ರಸಾರ ನೀಡುವ ಮೂಲಕ ಕೋಟ್ಯಂತರ ವೀಕ್ಷಕರನ್ನು ಪಡೆದ ಬೆನ್ನಲ್ಲೇ, ಅದೇ ತಂತ್ರಕ್ಕೆ ಡಿಸ್ನಿ ಹಾಟ್‌ಸ್ಟಾರ್‌ ಮುಂದಾಗಿದೆ. ಏಷ್ಯಾ ಕಪ್‌ ಮತ್ತು ಐಸಿಸಿ ವಿಶ್ವಕಪ್‌ ಟೂರ್ನಿಯ ಪ್ರಸಾರದ ಹಕ್ಕು ಪಡೆದಿರುವ ಡಿಸ್ನಿಯು ಮೊಬೈಲ್‌ ಸ್ಟ್ರೀಮಿಂಗ್‌ನಲ್ಲಿ ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.

ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿಗಳಲ್ಲಿ ಒಂದಾಗಿರುವ ಐಪಿಎಲ್‌ ಪ್ರಸಾರದ ಹಕ್ಕನ್ನು ಡಿಸ್ನಿ ಈ ಹಿಂದೆ ಪಡೆದು, ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಆದರೆ, ಈ ಬಾರಿಯ ಐಪಿಎಲ್‌ ಟೂರ್ನಿಯ ಡಿಜಿಟಲ್ ಪ್ರಸಾರದ ಹಕ್ಕು ಖರೀದಿಸಿದ್ದ ಮುಕೇಶ್‌ ಅಂಬಾನಿ ಒಡೆತನದ ಜಿಯೊಸಿನಿಮಾವು ಉಚಿತವಾಗಿ ಪ್ರಸಾರ ಮಾಡಿ, ಕೋಟ್ಯಂತರ ಕ್ರಿಕೆಟ್‌ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಜಿಯೊಸಿನಿಮಾಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಡಿಸ್ನಿ, ಉಚಿತ ಸ್ಟ್ರೀಮಿಂಗ್ ಮೂಲಕ ಭಾರತದಲ್ಲಿ 54 ಕೋಟಿಗೂ ಅಧಿಕ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ತಲುಪುವ ಗುರಿಯನ್ನು ಹಾಕಿಕೊಂಡಿದೆ. ಆದರೆ ಟಿ.ವಿ ಮತ್ತು ವೆಬ್‌ಸೈಟ್‌ಗಳಲ್ಲಿ ಪಂದ್ಯಗಳನ್ನು ವೀಕ್ಷಿಸಲು ಹಿಂದಿನಂತೆಯೇ ಚಂದದಾರಿಕೆ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT