ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್‌ ಟ್ರೋಫಿ: ಅಂಕಿತ್‌ ಶತಕ

ಶತಕ ವಂಚಿತ ಕರುಣ್‌: ಇಂಡಿಯಾ ರೆಡ್‌ ಸ್ಪರ್ಧಾತ್ಮಕ ಮೊತ್ತ
Last Updated 24 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು:ಕನ್ನಡಿಗ ಕರುಣ್‌ ನಾಯರ್‌ (99) ಅವರಿಗೆ ಶತಕ ಒಲಿ ಯಲಿಲ್ಲ. ಅಂಕಿತ್‌ ಕಲ್ಸಿ ಅವರು ಶತಕ (106, 345 ಎಸೆತ, 8 ಬೌಂಡರಿ) ಬಾರಿಸಿದರು. ಇವರಿಬ್ಬರ ಆಟದ ಬಲದಿಂದ ಇಂಡಿಯಾ ರೆಡ್‌ ತಂಡ ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಬ್ಲೂ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 285 ರನ್‌ ಗಳಿಸಿ ಆಲೌಟ್‌ ಆಯಿತು.

ಆಲೂರು ಕ್ರಿಕೆಟ್‌ ಮೈದಾನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಮೊದಲ ಇನಿಂಗ್ಸ್ ಆರಂಭಿಸಿರುವ ಇಂಡಿಯಾ ಬ್ಲೂ ತಂಡ ಶನಿವಾರ ಎರಡನೇ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಿದೆ.

ಶುಕ್ರವಾರದ ಆಟದ ಅಂತ್ಯಕ್ಕೆ ಇಂಡಿಯಾ ರೆಡ್‌ ತಂಡ ಎರಡು ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತ್ತು. 92 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಕರುಣ್‌, ಕೇವಲ ಒಂದು ರನ್‌ನಿಂದ ಶತಕ ತಪ್ಪಿಸಿಕೊಂಡರು. ಅವರನ್ನು ಸೌರಭ್‌ಕುಮಾರ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಸ್ನೆಲ್‌ ಪಟೇಲ್‌ ಸ್ಟಂಪ್‌ ಔಟ್‌ ಮಾಡಿದರು.

ಶುಭಮನ್‌ ಗಿಲ್‌ ಪಡೆಯ ಬೌಲರ್‌ಗಳನ್ನು ಕಾಡಿದ ಅಂಕಿತ್‌ ಕಲ್ಸಿ ಶತಕದ ಸಿಹಿ ಸವಿದರು. ಕೊನೆಯ ವಿಕೆಟ್‌ ಆಗಿ ಅವರು ನಿರ್ಗಮಿಸಿದರು. ಜಲಜ್‌ ಸಕ್ಸೇನಾ ಅವರು ಅಂಕಿತ್‌ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ರೆಡ್‌: 124 ಓವರ್‌ಗಳಲ್ಲಿ 285 (ಅಂಕಿತ್‌ ಕಲ್ಸಿ 106, ಕರುಣ್‌ ನಾಯರ್‌ 99, ಇಶಾನ್‌ ಕಿಶನ್‌ 50; ದಿವೇಶ್‌ ಪಠಾನಿಯಾ 55ಕ್ಕೆ 4, ಜಲಜ್‌ ಸಕ್ಸೇನಾ 57ಕ್ಕೆ). ಇಂಡಿಯಾ ಬ್ಲೂ 24 ಓವರ್‌ಗಳಲ್ಲಿ 3 ವಿಕೆಟ್‌ಗೆ 74 (ಋತುರಾಜ್‌ ಗಾಯಕವಾಡ 37, ಉನದ್ಕತ್‌ 18ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT